ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಿಂದೂಗಳನ್ನು ರಾಹುಲ್ ಟೀಕಿಸಿರುವುದು ಸರಿಯಲ್ಲ: ವರುಣ್ (BJP | Varun Gandhi | Rahul Gandhi | Hindu terror)
Bookmark and Share Feedback Print
 
ಮುಸ್ಲಿಂ ಭಯೋತ್ಪಾದಕರಿಗಿಂತ ಹಿಂದೂ ತೀವ್ರವಾದಿ ಸಂಘಟನೆಗಳು ಭಾರತಕ್ಕೆ ಹೆಚ್ಚು ಅಪಾಯಕಾರಿ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ನೀಡಿದ್ದಾರೆ ಎಂದು ಹೇಳಲಾಗಿರುವ ಹೇಳಿಕೆಯನ್ನು ತಾನು ಒಪ್ಪಿಕೊಳ್ಳಲು ಸಿದ್ಧನಿಲ್ಲ ಎಂದು ಅವರ ಸಹೋದರ, ಬಿಜೆಪಿ ನಾಯಕ ವರುಣ್ ಗಾಂಧಿ ಹೇಳಿದ್ದಾರೆ.

ರಾಹುಲ್ ಗಾಂಧಿ ಹೇಳಿಕೆ ಕುರಿತು ನಾನು ಹೆಚ್ಚೇನೂ ಹೇಳುವುದಿಲ್ಲ. ಆದರೂ ಅವರು ಆ ರೀತಿಯಾಗಿ ಯಾಕೆ ಹೇಳಿದ್ದಾರೆಂದು ಅರ್ಥವಾಗುತ್ತಿಲ್ಲ. ಅದನ್ನು ಒಪ್ಪಿಕೊಳ್ಳಲು ನಾನು ಸಿದ್ದನಿಲ್ಲ ಎಂದು ಕಾನ್ಪುರದಲ್ಲಿ ಪತ್ರಕರ್ತರಿಗೆ ತಿಳಿಸಿದರು.

ಹಿಂದೂ ಸಮುದಾಯದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯಿಂದಾಗಿ ರಾಷ್ಟ್ರದಾದ್ಯಂತ ಜನಾಕ್ರೋಶ ವ್ಯಕ್ತವಾಗುತ್ತಿದ್ದು, ಈ ಬಗ್ಗೆ ಪ್ರತಿಕ್ರಿಯಿಸುವಂತೆ ರಾಹುಲ್ ಗಾಂಧಿ ತಂದೆ ರಾಜೀವ್ ಗಾಂಧಿಯವರ ಸಹೋದರ ಸಂಜಯ್ ಗಾಂಧಿ ಪುತ್ರ ವರುಣ್ ಗಾಂಧಿಯಲ್ಲಿ ಕೇಳಲಾಗಿತ್ತು.

ಬಿಜೆಪಿಯ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ಕಾನ್ಪುರಕ್ಕೆ ಆಗಮಿಸಿರುವ ವರುಣ್, ಭ್ರಷ್ಟಾಚಾರವನ್ನು ದೇಶದಿಂದ ಹೊಡೆದೋಡಿಸಬೇಕಾದರೆ ಯುವ ಜನತೆಗೆ ಒಂದು ವರ್ಷ ಕಡ್ಡಾಯ ಮಿಲಿಟರಿ ತರಬೇತಿ ಜಾರಿಗೆ ತರಬೇಕು ಎಂದು ಅಭಿಪ್ರಾಯಪಟ್ಟರು.

ಇಡೀ ದೇಶವು ಭ್ರಷ್ಟಾಚಾರದ ಕೈಯಲ್ಲಿ ನಲುಗುತ್ತಿದೆ. ಇದನ್ನು ಯುವ ಜನತೆಯಿಂದ ಮಾತ್ರ ಸರಿಪಡಿಸಲು ಸಾಧ್ಯ. ಹಾಗೆ ಮಾಡಬೇಕಾದರೆ ಅವರಿಗೆ ಕಡ್ಡಾಯವಾಗಿ ಒಂದು ವರ್ಷದ ಮಿಲಿಟರಿ ತರಬೇತಿ ನೀಡಬೇಕು ಎಂದ ಅವರು, ಉತ್ತರ ಪ್ರದೇಶದಲ್ಲಿ 'ಕೈಬಿಸಿ' ಮಾಡದ ಹೊರತು ಯಾವುದೇ ಕೆಲಸಗಳು ನಡೆಯುವುದಿಲ್ಲ ಎಂದು ಆರೋಪಿಸಿದರು.

ಬಾಂಗ್ಲಾದೇಶದಿಂದ ಭಾರೀ ಪ್ರಮಾಣದಲ್ಲಿ ನಡೆಯುತ್ತಿರುವ ಒಳ ನುಸುಳುವಿಕೆ ವಿರುದ್ಧವೂ ವರುಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಸಕ್ತ ದೇಶದಲ್ಲಿ ಆರು ಕೋಟಿ ಮಂದಿ ವಲಸಿಗರು ಅಂದರೆ ವಿದೇಶಗಳಿಂದ ಅಕ್ರಮವಾಗಿ ಬಂದು ನೆಲೆಸಿರುವವರು. ಅವರಲ್ಲಿ ಸುಮಾರು 50,000 ಮಂದಿ ಲಕ್ನೋದಲ್ಲಿ ಮತದಾರರ ಚೀಟಿ ಹೊಂದಿದ್ದಾರೆ. ಇದು ಕಳವಳಕಾರಿ ವಿಚಾರ ಎಂದರು.
ಸಂಬಂಧಿತ ಮಾಹಿತಿ ಹುಡುಕಿ