ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಎನ್‌ಡಿಎಗಿಂತ ನಮ್ಮ ಸಾಧನೆ ದೊಡ್ಡದು: ಸೋನಿಯಾ ಗಾಂಧಿ (UPA | NDA | Sonia Gandhi | Manmohan Singh)
Bookmark and Share Feedback Print
 
ಬಿಜೆಪಿ ನೇತೃತ್ವದ ಎನ್‌ಡಿಎ ಅವಧಿಗಿಂತ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಸಾಧನೆ ದೊಡ್ಡದು. ಯಾವ ರೀತಿಯಲ್ಲೂ ನಮ್ಮನ್ನು ಅವರೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅಭಿಪ್ರಾಯಪಟ್ಟರು.

ಭ್ರಷ್ಟಾಚಾರವನ್ನು ಸಹಿಸುವುದು ಸಾಧ್ಯವೇ ಇಲ್ಲ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದ ಅವರು, ಅಕ್ರಮಗಳನ್ನು ತಡೆಯಲು ತನ್ನ ಐದು ಅಂಶಗಳ ಯೋಜನೆಯನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನು ಶ್ಲಾಘಿಸಿದರು.

ನಾವು ಭ್ರಷ್ಟಾಚಾರದ ವಿರುದ್ಧ ಕೇವಲ ಮಾತಿನಲ್ಲಿ ಮಾತ್ರ ಸಮರ ಸಾರಿರುವುದಲ್ಲ. ಅದನ್ನು ಮಾಡಿ ತೋರಿಸುತ್ತೇವೆ. ಈ ಸಂಬಂಧ ನಾನು ಭಾನುವಾರ ನನ್ನ ಭಾಷಣದಲ್ಲಿ ಕೆಲವೊಂದು ಸಲಹೆಗಳನ್ನು ನೀಡಿದ್ದೆ. ಅದನ್ನು ಗಂಭೀರವಾಗಿ ಪರಿಗಣಿಸುವುದಾಗಿ ಪ್ರಧಾನ ಮಂತ್ರಿಗಳು ತನ್ನ ಭಾಷಣದಲ್ಲಿ ತಿಳಿಸಿರುವುದು ಗಮನಾರ್ಹ ಎಂದರು.

ಮುಖ್ಯವಾಗಿ ಬಿಜೆಪಿ ಸೇರಿದಂತೆ ಪ್ರತಿಪಕ್ಷಗಳು ಮಾಡುವ ಸಂಪೂರ್ಣವಾಗಿ ಆಧಾರ ರಹಿತವಾಗಿರುವ ಮತ್ತು ಅಸ್ತಿತ್ವದಲ್ಲೇ ಇಲ್ಲದ ಆರೋಪಗಳಿಗೆ ತಿರುಗೇಟು ನೀಡುವುದು ಕಾಂಗ್ರೆಸ್ ಕಾರ್ಯಕರ್ತರ ಕರ್ತವ್ಯವಾಗಿದೆ ಎಂದೂ ಸೋನಿಯಾ ಕರೆ ನೀಡಿದರು.

ನಮ್ಮ ರಾಜಕೀಯ ಎದುರಾಳಿಗಳನ್ನು ಅವರಷ್ಟೇ ಪರಿಣಾಮಕಾರಿಯಾಗಿ ಎದುರಿಸುವುದು ಖಂಡಿತವಾಗಿಯೂ ಗಮನಾರ್ಹ ವಿಚಾರ. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಕಳೆದ ಆರೂವರೆ ವರ್ಷಗಳಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದೆ. ನಮ್ಮ ಪ್ರತಿಯೊಂದು ಸಾಧನೆಗೂ ನಾವು ಹೆಮ್ಮೆಪಡಬೇಕಾಗಿದೆ ಎಂದರು.

ನಾವು ಹೊಂದಿರುವ ಸಾಧನೆಯ ದಾಖಲೆಯನ್ನು ಎನ್‌ಡಿಎ ಜತೆ ಹೋಲಿಸುವುದು ಸಾಧ್ಯವೇ ಇಲ್ಲ. ಆ ಸರಕಾರದ ಸಾಧನೆಗಿಂತ ನಮ್ಮ ಸಾಧನೆಯು ಸಾಕಷ್ಟು ಮುಂದಿರುವುದು ಸ್ಪಷ್ಟ. ಇದನ್ನು ಜನತೆಗೆ ತಿಳಿಸುವುದು, ಅವರ ಗಮನಕ್ಕೆ ತರುವುದು ನಮ್ಮ ಕರ್ತವ್ಯ ಎಂದು ಪ್ರಧಾನ ಮಂತ್ರಿಯವರ ಉಪಸ್ಥಿತಿಯಲ್ಲಿ ಸೋನಿಯಾ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ