ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸೋನಿಯಾ ಭಾರತೀಯಳಾದರೂ ಇಟಲಿ ಬುದ್ಧಿ ಬಿಟ್ಟಿಲ್ಲ (WikiLeaks | Congress | Sonia Gandhi | Italy)
Bookmark and Share Feedback Print
 
ಹುಟ್ಟುಗುಣ ಸುಟ್ಟರೂ ಬಿಡದು ಎಂಬಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯ ವ್ಯಕ್ತಿತ್ವದಲ್ಲಿನ ಇಟಲಿ ಅಂಶಗಳು ಎಷ್ಟೇ ಪ್ರಯತ್ನಪಟ್ಟರೂ ಮಾಯವಾಗಿಲ್ಲ. ನಡತೆ, ಮಾತು ಮತ್ತು ಅಭಿರುಚಿಗಳಲ್ಲಿ ಭಾರತೀಯ ಮಹಿಳೆಯಂತೆ ತೋರಿಸಿಕೊಳ್ಳಲು ಯತ್ನಿಸಿದರೂ ಅದರಲ್ಲಿ ಪೂರ್ಣ ಯಶಸ್ಸು ಕಂಡಿಲ್ಲ -- ಹೀಗೆಂದು ಹೇಳಿರುವುದು ವಿಕಿಲೀಕ್ಸ್ ಗೋಪ್ಯ ದಾಖಲೆ.
PTI

ಕ್ಯಾಲಿಫೋರ್ನಿಯಾ ಗವರ್ನಲ್ ಅರ್ನಾಲ್ಡ್ ಸ್ವಾಜ್ನಿಗರ್ ಪತ್ನಿ ಮರಿಯಾ ಶ್ರಿವರ್ ಜತೆ ಸೋನಿಯಾ ಗಾಂಧಿ ನಡೆಸಿದ್ದ ಮಾತುಕತೆಯನ್ನು ಅಮೆರಿಕಾ ರಾಯಭಾರಿಯೊಬ್ಬರು ಅಮೆರಿಕಾಕ್ಕೆ ಕಳುಹಿಸಿದ್ದರು. ಇದನ್ನು ವಿಕಿಲೀಕ್ಸ್ ಬಹಿರಂಗಪಡಿಸಿದೆ.

ವೈಯಕ್ತಿಕ ದುರಂತದಿಂದ (ರಾಜೀವ್ ಗಾಂಧಿ ಮರಣ) ತೀವ್ರ ನೋವು ಅನುಭವಿಸಿದ್ದ ಸೋನಿಯಾ ಗಾಂಧಿ, ತನ್ನ ವೈಯಕ್ತಿಕ ಬದುಕಿನಲ್ಲಿ ಸಾರ್ವಜನಿಕ ವಿಚಾರಗಳ ಪ್ರವೇಶವನ್ನು ತಡೆಯಲು ಯತ್ನಿಸಿದ್ದರು. ತನ್ನ ಗಂಡ ಮತ್ತು ಅತ್ತೆಯ ಸಾವಿನ ಕುರಿತು ಮಾತನಾಡುವಾಗಲೆಲ್ಲ, ತನ್ನ ಭಾವನೆಗಳನ್ನು ನಿಯಂತ್ರಿಸಲು ಯತ್ನಿಸುತ್ತಿದ್ದರು.

ತಾನು ಭಾರತೀಯ ಸ್ತ್ರೀಯಂತೆ ಕಾಣಿಸಿಕೊಳ್ಳಬೇಕೆಂದು ಎಚ್ಚರಿಕೆಯಿಂದ ಇರುವ ಹೊರತಾಗಿಯೂ ನಡವಳಿಕೆ, ಮಾತು ಮತ್ತು ಅಭಿರುಚಿಗಳಲ್ಲಿ ಆಕೆಯ ಮೂಲ ಇಟಾಲಿಯನ್ ವ್ಯಕ್ತಿತ್ವದ ಚಹರೆ ಸ್ಪಷ್ಟವಾಗಿ ಕಾಣುತ್ತಿದೆ. ಆಕೆ ತನ್ನ ಖಾಸಗಿ ವ್ಯಕ್ತಿತ್ವವನ್ನು ತೀರಾ ನಿಗೂಢವಾಗಿಯೇ ಉಳಿಸಿಕೊಂಡಿದ್ದಾರೆ. ತೀರಾ ನಂಬಿಕಸ್ತರು ಮತ್ತು ಕುಟುಂಬದ ಸದಸ್ಯರನ್ನು ಬಿಟ್ಟರೆ ಅದು ಬೇರೆ ಯಾರಿಗೂ ತಿಳಿಯದಂತೆ ನೋಡಿಕೊಂಡಿದ್ದಾರೆ.

ಸಾರ್ವಜನಿಕ ಬದುಕಿಗೆ ಬರುವ ಕುರಿತು ಆಸಕ್ತಿಯನ್ನೇ ಹೊಂದಿರದಿದ್ದ ಅವರು, ಒಂದು ಹಂತದಲ್ಲಿ ಬಂದರು. ಆದರೂ ಯಾವತ್ತೂ ತನ್ನ ವೈಯಕ್ತಿಕ ವಿಚಾರಗಳನ್ನು ಸಾರ್ವಜನಿಕ ವಿಚಾರಗಳಿಗೆ ಥಳಕು ಹಾಕಿದವರಲ್ಲ. ವೈಯಕ್ತಿಕ ವಿಚಾರಗಳ ಕುರಿತು ಮಾತನಾಡಲು ಇತರರಿಗೆ ಅವಕಾಶ ಕೊಟ್ಟವರೂ ಅಲ್ಲ.

ಆದರೂ ಮಾಜಿ ಪ್ರಧಾನ ಮಂತ್ರಿಗಳಾದ ಗಂಡ ಮತ್ತು ಅತ್ತೆಯನ್ನು ಕಳೆದುಕೊಂಡ ವೈಯಕ್ತಿಕ ನಷ್ಟದ ಕುರಿತು ಸಾರ್ವಜನಿಕವಾಗಿ ಕೊಂಚ ಹೊತ್ತು ಮಾತನಾಡಿದ ನಂತರ ಅವರು ತುಂಬಾ ನಿರಾಳರಾದಂತೆ ಕಂಡು ಬರುತ್ತಾರೆ ಎಂದು ವಿಕಿಲೀಕ್ಸ್ ತನ್ನ ದಾಖಲೆಗಳಲ್ಲಿ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ