ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಂಗ್ರೆಸ್ ನೈಜ ಕೋಮುವಾದಿ: ಬಿಜೆಪಿ, ಆರೆಸ್ಸೆಸ್, ವಿಎಚ್‌ಪಿ (Congress | BJP | RSS | VHP)
Bookmark and Share Feedback Print
 
ಭಯೋತ್ಪಾದನೆಯ ಹೆಸರಿನಲ್ಲಿ ವರ್ಗೀಕರಣ ಮಾಡುತ್ತಾ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಈ ದೇಶದ ನೈಜ ಕೋಮುವಾದಿ ಎಂದು ಬಿಜೆಪಿ, ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ವಿಶ್ವ ಹಿಂದೂ ಪರಿಷತ್‌ಗಳು ಟೀಕಿಸಿವೆ.

ಆಡಳಿತ ಪಕ್ಷದ ಅಕ್ರಮಗಳನ್ನು ಮುಚ್ಚಿ ಹಾಕುವ ಸಲುವಾಗಿ, ಗಮನವನ್ನು ಬೇರೆಡೆ ಸೆಳೆಯಲು ಹಿಂದೂ ಭಯೋತ್ಪಾದನೆ ಎಂಬ ಆಧಾರ ರಹಿತ ಆರೋಪಗಳನ್ನು ಕಾಂಗ್ರೆಸ್ ಮಾಡುತ್ತಿದೆ. ಪ್ರಸಕ್ತ ಆ ಪಕ್ಷವು ಕಷ್ಟಕರ ಸ್ಥಿತಿಯಲ್ಲಿದೆ. ಅದರಿಂದ ಪಾರಾಗಲು ಆರೆಸ್ಸೆಸ್ ಮೇಲೆ ಗೂಬೆ ಕೂರಿಸುತ್ತಿದೆ ಎಂದು ಆರೆಸ್ಸೆಸ್ ಸರಕಾರ್ಯವಾಹಕ ಭೈಯಾಜಿ ಜೋಷಿ ಅಭಿಪ್ರಾಯಪಟ್ಟರು.

ದಿಗ್ವಿಜಯ್ ಸಿಂಗ್ ನೀಡಿರುವ ಹೇಳಿಕೆಯು ಸಂಪೂರ್ಣವಾಗಿ ವಾಸ್ತವತೆಯಿಂದ ದೂರ ಇರುವಂತದ್ದು. ಸಂಘ ಪರಿವಾರದ ಗೌರವಕ್ಕೆ ಮಸಿ ಬಳಿಯುವ ಸಲುವಾಗಿ ಇಂತಹ ಆರೋಪಗಳನ್ನು ಮಾಡಲಾಗುತ್ತಿದೆ. ಈ ಕಾಂಗ್ರೆಸ್ ಯಾವತ್ತೂ ಅಲ್ಪಸಂಖ್ಯಾತರ ಓಟುಗಳನ್ನು ಪಡೆಯಲು ಕೋಮುವಾದಿ ನೀತಿಯನ್ನು ಅನುಸರಿಸುತ್ತಾ ಬಂದಿದೆ. ಆದರೆ ಆರೆಸ್ಸೆಸ್ ಅಂತಹ ರಾಜಕೀಯದಲ್ಲಿ ನಂಬಿಕೆ ಇಟ್ಟಿಲ್ಲ ಎಂದರು.

ವ್ಯವಸ್ಥಿತ ಪಿತೂರಿ: ಸಿಂಘಾಲ್
ಹಿಂದೂ ಧಾರ್ಮಿಕ ನಾಯಕರ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಸಲಾಗಿದೆ. ಅವರನ್ನು ಭಯೋತ್ಪಾದಕ ವಿಚಾರಗಳಿಗೆ ಸಂಬಂಧ ಕಲ್ಪಿಸಿ ಅಪಮಾನ ಮಾಡಲಾಗುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ ಅಶೋಕ್ ಸಿಂಘಾಲ್ ಗುಡುಗಿದರು.

ಮುಸ್ಲಿಂ ಭಯೋತ್ಪಾದಕರಿಗಿಂತ ಹಿಂದೂ ಸಂಘಟನೆಗಳು ದೇಶಕ್ಕೆ ಅಪಾಯಕಾರಿ ಎಂದು ಕಾಂಗ್ರೆಸ್ 'ಯುವ' ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸಿಂಘಾಲ್, ಯಾವ ದೃಷ್ಟಿಯಿಂದಲೂ ರಾಹುಲ್ ಯೋಗ್ಯ ವ್ಯಕ್ತಿ ಅಥವಾ ನಾಯಕನಲ್ಲ ಎಂದರು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ವಿರುದ್ಧವೂ ಅವರು ಹರಿಹಾಯ್ದರು.

ಬಲವಂತದ ಮನೋಸ್ಥಿತಿಯಲ್ಲಿ ಕಾಂಗ್ರೆಸ್..
ಆಡಳಿತ ಪಕ್ಷ ಕಾಂಗ್ರೆಸ್ ಬಲವಂತದ ಮನೋಸ್ಥಿತಿಯಲ್ಲಿರುವುದರಿಂದ, ತನ್ನ ವೈಫಲ್ಯಗಳನ್ನು ಎತ್ತಿ ತೋರಿಸುತ್ತಿರುವ ಪ್ರತಿಪಕ್ಷಗಳ ವಿರುದ್ಧ ಅಶ್ಲೀಲ ಭಾಷೆಯನ್ನು ಬಳಸಲಾಗುತ್ತಿದೆ ಎಂದು ಸೋನಿಯಾ ಹೇಳಿಕೆಗೆ ಬಿಜೆಪಿ ಪ್ರತಿಕ್ರಿಯಿಸಿದೆ.

ಕಾಂಗ್ರೆಸ್ ಪಕ್ಷವು ಯಾವುದೋ ಒತ್ತಡದ ಮನೋಸ್ಥಿತಿಯಿಂದ ಬಳಲುತ್ತಿರುವಂತೆ ಕಾಣುತ್ತಿದೆ. ಸೋನಿಯಾ ಗಾಂಧಿಯ ಮಾತುಗಳಲ್ಲಿನ ಅಂಶಗಳು ಕೂಡ ಇದನ್ನೇ ಧ್ವನಿಸುತ್ತಿದೆ. ಜನರು ಎತ್ತುತ್ತಿರುವ ಪ್ರಮುಖ ಪ್ರಶ್ನೆಗಳಿಗೆ ಉತ್ತರಿಸುವ ಬದಲು, ಈ ಹಿಂದೆ ಬೋಫೋರ್ಸ್ ಹಗರಣ ಸಂದರ್ಭದಲ್ಲಿ ನಡೆದುಕೊಂಡಂತೆ ಗಮನ ವಿಕೇಂದ್ರೀಕರಣದಲ್ಲಿ ತೊಡಗಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಆರೋಪಿಸಿದ್ದಾರೆ.

ರಾಹುಲ್‌ಗೆ ಹಿಂದೂ ಉಗ್ರರ ಮಾಹಿತಿ ಎಲ್ಲಿ ಸಿಕ್ತು?
ಹಿಂದೂ ತೀವ್ರವಾದ ದೇಶಕ್ಕೆ ಅಪಾಯಕಾರಿ ಎಂದು ರಾಹುಲ್ ಗಾಂಧಿ ಹೇಳಿರುವುದು ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣ್ಯನ್ ಸ್ವಾಮಿಯವರಿಗೆ ಅಚ್ಚರಿ ತಂದಿದೆ. ಕಾಂಗ್ರೆಸ್ ನಾಯಕನಿಗೆ ಇಂತಹ ಮಾಹಿತಿ ಎಲ್ಲಿ ಸಿಕ್ಕಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ದಿಗ್ವಿಜಯ್ ಸಿಂಗ್ ಮತ್ತು ರಾಹುಲ್ ಗಾಂಧಿಯವರ ಸ್ವಯಂಘೋಷಿತ ಹಿಂದೂ ಭಯೋತ್ಪಾದನೆ ಬಗ್ಗೆ ಅವರಿಗೆ ಮಾಹಿತಿಗಳು ಹೇಗೆ ಸಿಕ್ಕಿವೆ? ನಾವು ಯಾವುದೇ ಮಾಹಿತಿಯನ್ನು ನೀಡಿಲ್ಲ ಎಂದು ಸರಕಾರ ಹೇಳುತ್ತಿದೆ. ಪಾಕಿಸ್ತಾನದ ಐಎಸ್ಐ ಅವರಿಗೆ (ದಿಗ್ವಿಜಯ್-ರಾಹುಲ್) ಸಹಾಯ ಮಾಡುತ್ತಿದೆಯೇ ಎಂದು ಪ್ರಶ್ನಿಸಿದರು.

ಹಿಂದೂ ಭಯೋತ್ಪಾದನೆ ಬಗ್ಗೆ ಹೊರಗಡೆ ಮಾತನಾಡುವವರು, ಈ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಸ್ವಾಮಿ ಸವಾಲು ಹಾಕಿದರು.
ಸಂಬಂಧಿತ ಮಾಹಿತಿ ಹುಡುಕಿ