ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಂಬೈ, ಅಹಮದಾಬಾದ್‌ಗಳಿಗೆ ಉಗ್ರರ ದಾಳಿ ಕಟ್ಟೆಚ್ಚರ (Mumbai | Ahmedabad | Pakistan | terror alert)
Bookmark and Share Feedback Print
 
ಪಾಕಿಸ್ತಾನ ಮೂಲದ ಲಷ್ಕರ್ ಇ ತೋಯ್ಬಾ ಭಯೋತ್ಪಾದಕ ಸಂಘಟನೆಯು ಮುಂಬೈ ಮತ್ತು ಅಹಮದಾಬಾದ್‌ಗಳ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸುತ್ತಿದೆ ಎಂಬ ಬೇಹುಗಾರಿಕಾ ಮಾಹಿತಿಗಳ ಹಿನ್ನೆಲೆಯಲ್ಲಿ ಎರಡೂ ನಗರಗಳಲ್ಲಿ ಭದ್ರತೆ ಬಿಗುಗೊಳಿಸುವಂತೆ ಕೇಂದ್ರ ಸರಕಾರವು ಕಟ್ಟೆಚ್ಚರ ರವಾನಿಸಿದೆ.

ಲಷ್ಕರ್ ಇ ತೋಯ್ಬಾ ಭಯೋತ್ಪಾದಕರು ನಡೆಸುವ ಯಾವುದೇ ಸಂಭಾವ್ಯ ದಾಳಿಯನ್ನು ತಪ್ಪಿಸಲು ಎಲ್ಲಾ ಸಿದ್ಧತೆಗಳನ್ನು ನಡೆಸುವಂತೆ ಎರಡೂ ನಗರಗಳ ಪೊಲೀಸ್ ಪಡೆಗಳಿಗೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಗೃಹ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಲಷ್ಕರ್ ತಂಡಗಳು ಮುಂಬೈ ಮತ್ತು ಗುಜರಾತಿನ ಅಹಮದಾಬಾದ್‌ಗಳಿಗೆ ಈಗಾಗಲೇ ಪ್ರವೇಶಿಸಿದ್ದಾರೆ. ಯಾವುದೇ ಹೊತ್ತಿನಲ್ಲಿ ಬೇಕಾದರೂ ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಗೂಢಚರ ಮಾಹಿತಿಗಳು ಹೇಳಿದ್ದವು.

ಕೇಂದ್ರ ನೀಡಿರುವ ನಿರ್ದಿಷ್ಟ ಮಾಹಿತಿಗಳ ಬೆನ್ನತ್ತಿರುವ ಗುಜರಾತ್ ಮತ್ತು ಮಹಾರಾಷ್ಟ್ರ ಪೊಲೀಸರು, ನಿರ್ದಿಷ್ಟ ಪ್ರದೇಶಗಳಲ್ಲಿ ಪ್ರತಿ ಮನೆಗಳನ್ನೂ ತಪಾಸಣೆಗೆ ಒಳಪಡಿಸುತ್ತಿದ್ದಾರೆ. ಸೂಕ್ಷ್ಮ ಮತ್ತು ಜನನಿಬಿಢ ಪ್ರದೇಶಗಳಲ್ಲಿ ಹೆಚ್ಚುವರಿ ಪಡೆಗಳನ್ನು ಕೂಡ ನಿಯೋಜಿಸಲಾಗುತ್ತಿದೆ. ಮಾರುಕಟ್ಟೆಗಳು, ಧಾರ್ಮಿಕ ಕೇಂದ್ರಗಳು, ಬಸ್ ಮತ್ತು ರೈಲ್ವೇ ನಿಲ್ದಾಣಗಳಲ್ಲಿ ಹೆಚ್ಚಿನ ಮುತುವರ್ಜಿ ವಹಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

2008ರ ನವೆಂಬರ್ 26ರಂದು ವಾಣಿಜ್ಯ ರಾಜಧಾನಿಯ ಮೇಲಿನ ದಾಳಿ ಮತ್ತು 2002ರ ಸೆಪ್ಟೆಂಬರ್ 25ರಂದು ಗುಜರಾತ್ ರಾಜಧಾನಿಯಲ್ಲಿನ ಅಕ್ಷರಧಾಮ ದೇಗುಲದ ಮೇಲಿನ ದಾಳಿ ಸೇರಿದಂತೆ ಎರಡೂ ನಗರಗಳು ಈ ಹಿಂದೆ ಹಲವು ಬಾರಿ ಭಯೋತ್ಪಾದಕರ ದಾಳಿಗೆ ಈಡಾಗಿ, ಭಾರೀ ನಷ್ಟ ಅನುಭವಿಸಿವೆ.

ಆದರೂ ಕೆಲವು ಮೂಲಗಳ ಪ್ರಕಾರ ಇದು ಸಾಮಾನ್ಯ ಕಟ್ಟೆಚ್ಚರ. ಉಗ್ರರ ಚಲನವಲನಗಳ ಕುರಿತು ಗಮನಿಸುತ್ತಿರುವ ಬೇಹುಗಾರಿಕಾ ದಳಗಳು ನೀಡಿರುವ ಮಾಹಿತಿಗಳನ್ನು ರಾಜ್ಯಗಳಿಗೆ ರವಾನಿಸಲಾಗಿದೆ. ಭದ್ರತೆಯನ್ನು ಹೆಚ್ಚು ಮಾಡುವಂತೆ ಸೂಚಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ