ಜೈಲಿನಿಂದ ಮೊಬೈಲ್ ವಶ
ಒರಿಸ್ಸಾದ ಗಂಜಂ ಜಿಲ್ಲೆಯ ಸಬ್‌ಜೈಲಿನಿಂದ 16 ಮೊಬೈಲ್ ಫೋನ್‌ಗಳು, 23 ಸಿಮ್ ಕಾರ್ಡುಗಳು ಹಾಗೂ ಇನ್ನಿತರ ವಸ್ತುಗಳನ್ನು ಉನ್ನತ ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕರ್ತವ್ಯ ಲೋಪ ಆರೋಪದ ಮೇಲೆ ಜೈಲರ್ ಮತ್ತು ಇತರ ಮೂವರು ಸಿಬ್ಬಂದಿಗಳನ್ನು ತಕ್ಷಣದಿಂದಲೇ ಅಮಾನತು ಮಾಡಲಾಗಿದೆ ಎಂದು ವರದಿಗಳು ಹೇಳಿವೆ.