ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಬಾಲಂಗೋಚಿ ರಾಹುಲ್‌ಗೆ ಭಾರತದ ಇತಿಹಾಸವೇ ಗೊತ್ತಿಲ್ಲ' (RSS | Congress | Rahul Gandhi | Hindu groups)
Bookmark and Share Feedback Print
 
ಮುಸ್ಲಿಂ ಭಯೋತ್ಪಾದಕರಿಗಿಂತ ಹಿಂದೂ ಮೂಲಭೂತವಾದಿ ಸಂಘಟನೆಗಳು ಭಾರತಕ್ಕೆ ಬಹುದೊಡ್ಡ ಬೆದರಿಕೆ ಎಂದು ರಾಹುಲ್ ಗಾಂಧಿ ಹೇಳಿರುವುದಕ್ಕೆ ಆಘಾತ ವ್ಯಕ್ತಪಡಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ, ಕಾಂಗ್ರೆಸ್ ನಾಯಕ ಭಾರತದ ಇತಿಹಾಸವನ್ನು ಅರ್ಥ ಮಾಡಿಕೊಂಡಿಲ್ಲ ಎನ್ನುವುದು ಇದರಿಂದ ರುಜುವಾತಾಗಿದೆ ಎಂದಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆರೋಪಗಳು, ಅವರು ಹಿಂದುತ್ವದ ಇತಿಹಾಸ ಮತ್ತು ರಾಷ್ಟ್ರೀಯತೆಯ ಕಲ್ಪನೆಯನ್ನು ಒಂಚೂರೂ ತಿಳಿದುಕೊಳ್ಳದೇ ಇರುವುದನ್ನು ತೋರಿಸುತ್ತವೆ ಎಂದು ಸಂಘ ಪರಿವಾರದ ಮುಖವಾಣಿ 'ಪಾಂಚಜನ್ಯ'ದಲ್ಲಿ ಬರೆದಿರುವ 'ಮಾತನಾಡುವ ಮೊದಲು ಯೋಚಿಸಿ ರಾಹುಲ್' ಎಂಬ ಶೀರ್ಷಿಕೆಯ ಸಂಪಾದಕೀಯದಲ್ಲಿ ಹೇಳಲಾಗಿದೆ.

ರಾಹುಲ್ ಗಾಂಧಿಯನ್ನು ತನ್ನ ಮುಂದಿನ ಭವಿಷ್ಯ ಮತ್ತು ಭಾರತದ ಪ್ರಧಾನ ಮಂತ್ರಿಯನ್ನಾಗಿ ಮಾಡುವ ಉದ್ದೇಶವನ್ನು ಇಟ್ಟುಕೊಂಡಿರುವ ಕಾಂಗ್ರೆಸ್, ಅವರ ಅಜ್ಞಾನವನ್ನು ಆಧರಿಸಿ ತನ್ನ ಮೂಲ ತತ್ವಗಳನ್ನು ಮುಂದುವರಿಸುತ್ತದೆಯೇ? ಇದಕ್ಕೆ ಈಗಾಗಲೇ ಬಿಹಾರದ ಮತದಾರರು ಸೂಕ್ತ ಪ್ರತಿಕ್ರಿಯೆಯನ್ನು ನೀಡಿದ್ದಾರೆ ಎಂದು ಹೇಳಿದೆ.

ಇಂತಹ ಹೇಳಿಕೆಗಳು ಜಿಹಾದಿ ಭಯೋತ್ಪಾದನೆಯ ವಿರುದ್ಧದ ರಾಷ್ಟ್ರದ ಹೋರಾಟವನ್ನು ದುರ್ಬಲಗೊಲಿಸುವುದು ಮಾತ್ರವಲ್ಲ, ಅದನ್ನು ಪ್ರೋತ್ಸಾಹಿಸುತ್ತದೆ ಕೂಡ.

ಕಾಂಗ್ರೆಸ್ ಮುಸ್ಲಿಮರನ್ನು ಓಲೈಸುತ್ತಿರುವುದರ ಕುರಿತು ವಿಕಿಲೀಕ್ಸ್ ಬಹಿರಂಗಪಡಿಸಿರುವ ಕೆಲವು ದಾಖಲೆಗಳಲ್ಲಿ ಬಯಲಾಗಿದೆ. ಆದರೆ ರಾಹುಲ್ ಗಾಂಧಿ ಹೊಂದಿರುವ ಹಿಂದೂ ವಿರೋಧಿ ಮನೋಧರ್ಮ ಪ್ರತಿಯೊಬ್ಬರಿಗೂ ಆಘಾತ ತಂದಿದೆ. ಈ ಹಿಂದೆ ಅವರು ಸಿಮಿಯನ್ನು ಆರೆಸ್ಸೆಸ್ ಜತೆ ಹೋಲಿಕೆ ಮಾಡಿದಂತವರು ಎಂದು ಸಂಪಾದಕೀಯ ಬರೆಯಲಾಗಿದೆ.

ಇಂತಹ ಹೇಳಿಕೆಗಳು ಅರೆ ಬೆಂದ ಜ್ಞಾನದ ಫಲಿತಾಂಶ. ಜತೆಗೆ ಪೂರ್ವ ನಿಯೋಜಿತ ನಡೆಯ ಭಾಗ. ಕಾಂಗ್ರೆಸ್‌ನ ರಾಷ್ಟ್ರವಿರೋಧಿ ಚಿಂತನೆಗಳ ಬಗ್ಗೆ ಇಡೀ ದೇಶ ಜಾಗರೂಕತೆಯಿಂದ ಇರಬೇಕಾದ ಅಗತ್ಯವಿದೆ ಎಂದೂ ಆರೆಸ್ಸೆಸ್ ವಾರಪತ್ರಿಕೆ ಅಭಿಪ್ರಾಯಪಟ್ಟಿದೆ.

2009ರ ಜುಲೈ ತಿಂಗಳಲ್ಲಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ಏರ್ಪಡಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡಿದ್ದ ರಾಹುಲ್ ಗಾಂಧಿ, ಅಮೆರಿಕಾದ ಭಾರತ ರಾಯಭಾರಿ ತಿಮೋತಿ ರೋಮರ್ ಜತೆ ಮಾತನಾಡುತ್ತಾ, ಲಷ್ಕರ್ ಇ ತೋಯ್ಬಾಕ್ಕಿಂತ ಹಿಂದೂ ಮೂಲಭೂತವಾದಿ ಸಂಘಟನೆಗಳ ವೃದ್ಧಿ ಅಪಾಯಕಾರಿ ಎಂದಿದ್ದರು.
ಸಂಬಂಧಿತ ಮಾಹಿತಿ ಹುಡುಕಿ