ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಂದಿನ ತಮಿಳುನಾಡು ಮುಖ್ಯಮಂತ್ರಿ ಕಾಂಗ್ರೆಸ್ಸಿಗ: ರಾಹುಲ್ (Tamil Nadu | Congress | Rahul Gandhi | DMK)
Bookmark and Share Feedback Print
 
ದಕ್ಷಿಣ ಭಾರತದ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯತೆಯನ್ನು ಮುರಿಯಲು ಪಣ ತೊಟ್ಟಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ ಕಾಂಗ್ರೆಸ್ ಪಕ್ಷದವರಾಗಿರುತ್ತಾರೆ ಎಂದು ಭವಿಷ್ಯ ನುಡಿದರು.

ಒಂದು ಕಾಲದಲ್ಲಿ ತನ್ನ ತೆಕ್ಕೆಯಲ್ಲಿದ್ದ ತಮಿಳುನಾಡನ್ನು ನಿಧಾನವಾಗಿ ಮರಳಿ ಪಡೆಯುವುದು ಕಾರ್ಯಕರ್ತರ ಕೈಯಲ್ಲಿದೆ. ಜನತೆ ಕಾಂಗ್ರೆಸ್ಸನ್ನು ಬೆಂಬಲಿಸಿದಲ್ಲಿ ಇದು ಮತ್ತೆ ಸಾಧ್ಯವಾಗಲಿದೆ. ಅದರಲ್ಲೂ ಯುವ ಜನತೆ ಕಠಿಣ ಶ್ರಮವಹಿಸಿ, ಪಕ್ಷದ ಏಳ್ಗೆಗಾಗಿ ಕೆಲಸ ಮಾಡಬೇಕು ಎಂದು ರಾಹುಲ್ ಒತ್ತಾಯಿಸಿದರು.

ಯುವ ಜನತೆ ಕಾರ್ಯಪ್ರವೃತ್ತರಾದಲ್ಲಿ ಕಳೆದ ಮೂರು ದಶಕಗಳಿಂದ ಅಧಿಕಾರಕ್ಕೆ ಬರದ ಕಾಂಗ್ರೆಸ್, ಪ್ರಬಲವಾಗಿ ಮೂಡಿ ಬರಬಹುದು. ಹಾಗಾದಲ್ಲಿ ನಮ್ಮದೇ ಪಕ್ಷದಿಂದ ಮುಖ್ಯಮಂತ್ರಿಯನ್ನು ಆರಿಸಲು ಸಾಧ್ಯವಾಗಬಹುದು. ಯಾರು ಮುಖ್ಯಮಂತ್ರಿಯಾಗಬೇಕೆಂಬುದನ್ನು ವರಿಷ್ಠರು ನಿರ್ಧರಿಸುತ್ತಾರೆ ಎಂದರು.

ಇನ್ನು ಕೆಲವು ವರ್ಷಗಳ ನಂತರ ಇಲ್ಲಿ ಪ್ರಸಕ್ತ ನೆರೆದಿರುವ ನಿಮ್ಮಲ್ಲಿ ಯಾರಾದರೊಬ್ಬರು ಮುಖ್ಯಮಂತ್ರಿಯಾಗಬೇಕು. ಆ ನಿರೀಕ್ಷೆ ನಿಜವಾಗಬೇಕಾದರೆ ಮೈ ಮುರಿದು ಪಕ್ಷಕ್ಕಾಗಿ ಕೆಲಸ ಮಾಡಬೇಕು ಎಂದು ಅವರು ಪ್ರೋತ್ಸಾಹದ ಮಾತುಗಳನ್ನಾಡಿದರು.

ಅದರ ಮೊದಲ ಹೆಜ್ಜೆಯಾಗಿ ಮುಂದಿನ ವರ್ಷ ನಡೆಯಲಿರುವ ಪಂಚಾಯತ್ ಚುನಾವಣೆಗಳನ್ನು ಕಾಂಗ್ರೆಸ್ ಗೆಲ್ಲುವಂತೆ ಮಾಡಬೇಕು ಎಂದು ರಾಹುಲ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

2011ರ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ತಮಿಳುನಾಡಿನಲ್ಲಿ ನಡೆಯುವ ಗ್ರಾಮ ಪಂಚಾಯತ್ ಚುನಾವಣೆ ಯುವ ಕಾಂಗ್ರೆಸ್ ಘಟಕಕ್ಕೆ ಸವಾಲಿನ ಕೆಲಸ. ನೀವು ಪಂಚಾಯತ್ ಚುನಾವಣೆಯ್ನು ಗೆಲ್ಲಬೇಕು ಎನ್ನುವುದು ನನ್ನ ನಿರೀಕ್ಷೆ ಎಂದು ಚೆನ್ನೈ ಹೊರವಲಯದ ವನಾಗರಂನಲ್ಲಿನ ಕಲ್ಯಾಣ ಮಂಟಪದಲ್ಲಿ ಯುವ ಕಾಂಗ್ರೆಸ್ಸಿಗರನ್ನು ಉದ್ದೇಶಿಸಿ ಹೇಳಿದರು.

ಕಾಂಗ್ರೆಸ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿಯವರ ಡಿಎಂಕೆ ನಡುವೆ ಅಂತರಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಹುಲ್ ನೀಡಿರುವ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಒಂದು ಅರ್ಥದಲ್ಲಿ ಗಾಯದ ಮೇಲೆ ಉಪ್ಪು ಸುರಿದಂತಾಗಿದೆ.

ಚೆನ್ನೈಯಲ್ಲಿನ ಮದ್ರಾಸು ಯುನಿವರ್ಸಿಟಿ ಸಭಾಂಗಣದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಜತೆಗಿನ ಸಂವಾದಕ್ಕೆ ಅವಕಾಶ ಮಾಡಿಕೊಡಬೇಕು ಎಂಬ ಮನವಿಯನ್ನು ಯುನಿವರ್ಸಿಟಿ ತಳ್ಳಿ ಹಾಕಿತ್ತು. ಇದರ ಹಿಂದೆ ಡಿಎಂಕೆ ಇದೆ ಎಂದು ಕಾಂಗ್ರೆಸ್ ಆರೋಪಿಸಿದೆ. 2ಜಿ ಹಗರಣ ಸಂಬಂಧ ಸಿಬಿಐ ದಾಳಿ ನಡೆದಿರುವುದು ಮತ್ತು ಇತರ ಬೆಳವಣಿಗೆಗಳಿಗೆ ಕಾಂಗ್ರೆಸ್ ಕಾರಣವಾಗಿರುವುದರಿಂದ ಸೇಡು ತೀರಿಸಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ