ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಿತಾರಿ ಸರಣಿ ಹಂತಕ ಕೋಲಿಗೆ ನಾಲ್ಕನೇ ಗಲ್ಲು ಶಿಕ್ಷೆ! (Nithari killings | CBI | Surender Koli | Deepali)
Bookmark and Share Feedback Print
 
ನೋಯ್ಡಾ ಹತ್ಯಾಕಾಂಡ ಪ್ರಕರಣದ ದೀಪಾಲಿ ಅತ್ಯಾಚಾರ-ಕೊಲೆಗೆ ಸಂಬಂಧಿಸಿದಂತೆ, ಪ್ರಮುಖ ಆರೋಪಿ ಸುರೀಂದರ್ ಕೋಲಿಗೆ ಗಾಝಿಯಾಬಾದ್‌ನ ಸಿಬಿಐ ವಿಶೇಷ ನ್ಯಾಯಾಲಯ ಮರಣ ದಂಡನೆ ವಿಧಿಸಿದೆ. ಇದು ಕೋಲಿಗೆ ನ್ಯಾಯಾಲಯ ಪ್ರಕಟಿಸುತ್ತಿರುವ ನಾಲ್ಕನೇ ಮರಣ ದಂಡನೆ ಆದೇಶ!

ಮೋನಿಂದರ್ ಸಿಂಗ್ ಪಂಧೇರ್‌ನ ಸಹಾಯದಿಂದ 12 ವರ್ಷದ ಬಾಲಕಿ ದೀಪಾಲಿಯನ್ನು ಆರೋಪಿ ಕೋಲಿ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ. ಈ ಪ್ರಕರಣದಲ್ಲಿ ಕೋಲಿಯ ಆರೋಪಗಳು ಸಾಬೀತಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಗರಿಷ್ಠ ಶಿಕ್ಷೆಯನ್ನು ಪ್ರಕಟಿಸಿದರು.

ಪಂಧೇರ್ ಬಂಗಲೆಯ ಪಕ್ಕದ ಚರಂಡಿಯಲ್ಲಿ ಇತರ ಮೃತದೇಹಗಳೊಂದಿಗೆ ದೀಪಾಲಿಯ ಮೃತದೇಹದ ಭಾಗಗಳು ಪತ್ತೆಯಾಗಿದ್ದವು. ಕೊಳೆತ ಸ್ಥಿತಿಯಲ್ಲಿದ್ದ ದೀಪಾಲಿ ಕಳೇಬರವನ್ನು ಆಕೆಯ ತಾಯಿ ಪಾದರಕ್ಷೆಯ ಗುರುತಿನಿಂದ ಪತ್ತೆ ಹಚ್ಚಿದ್ದರು.

ಆರೋಪಿ ಕೋಲಿ ಕಳೆದ ವರ್ಷ ಎಂಟು ವರ್ಷದ ಆರತಿ ಮತ್ತು ಈ ವರ್ಷ ಒಂಬತ್ತರ ಹರೆಯದ ರಚನಾ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ. ಅದಕ್ಕೂ ಮೊದಲು ರಿಂಪಾ ಹಲ್ದಾರ್ ಪ್ರಕರಣದಲ್ಲಿ ಮರಣ ದಂಡನೆ ಶಿಕ್ಷೆ ಘೋಷಣೆಯಾಗಿತ್ತು.

ನೋಯ್ಡಾದ ಸೆಕ್ಟರ್ 31ರ ಪಂಧೇರ್ ಬಂಗಲೆಯ ಬಳಿಯ ಚರಂಡಿಯಲ್ಲಿ ಮಕ್ಕಳ ಮತ್ತು ಯುವತಿಯರ ದೇಹಗಳ ಭಾಗಗಳನ್ನು 2006ರ ಡಿಸೆಂಬರ್ 29ರಂದು ಪೊಲೀಸರು ಪತ್ತೆ ಮಾಡಿದ್ದರು. ಇದರ ತನಿಖೆಯನ್ನು ಕೈಗೆತ್ತಿಕೊಂಡಿದ್ದ ಸಿಬಿಐ, ಫೆಬ್ರವರಿ 2009ರಲ್ಲಿ ಪಂಧೇರ್ ಮತ್ತು ಕೋಲಿಯ ಮೇಲೆ ರಿಂಪಾ ಹಲ್ದಾರ್ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಿಸಿತ್ತು.

19 ಅಪಹರಣ, ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ನಾಲ್ವರು ಮಹಿಳೆಯರು ಮತ್ತು 15 ಮಕ್ಕಳು (ಬಹುತೇಕ ಹೆಣ್ಮಕ್ಕಳು) ಸೇರಿದ್ದರು. ಈ ಸಂಬಂಧ ಸಿಬಿಐ 16 ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿತ್ತು. ಎಲ್ಲಾ ಪ್ರಕರಣಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುತ್ತಿದೆ. ಕೋಲಿ ಎಲ್ಲಾ ಅತ್ಯಾಚಾರ, ಅಪಹರಣ ಮತ್ತು ಕೊಲೆ ಪ್ರಕರಗಳಲ್ಲಿ ಭಾಗಿಯಾಗಿದ್ದಾನೆ ಎಂದು ಆಪಾದಿಸಲಾಗಿದ್ದರೆ, ಪಂಧೇರ್ ಆರು ಪ್ರಕರಣಗಳಲ್ಲಿ ಸಹ ಆರೋಪಿಯೆಂದು ಆರೋಪ ಹೊರಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ