ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕುಮಾರಸ್ವಾಮಿ ಆಸ್ತಿ ಐದು ವರ್ಷದಲ್ಲಿ 16 ಪಟ್ಟು ಏರಿಕೆ! (Congress | Lok Sabha | Citizens' Report | HD Kumaraswamy)
Bookmark and Share Feedback Print
 
ರಾಜ್ಯ ರಾಜಕೀಯದ ಶಕುನಿ ಎಂದು ಟೀಕಾಕಾರರಿಂದ ಕರೆಸಿಕೊಳ್ಳುತ್ತಿರುವ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಸಂಸದ ಎಚ್.ಡಿ. ಕುಮಾರಸ್ವಾಮಿಯವರ ಆಸ್ತಿಯ ಕುರಿತ ಪಕ್ಕಾ ಲೆಕ್ಕವಲ್ಲ ಇದು, ಆದರೆ ಕಳೆದ ಐದು ವರ್ಷದ ಅವಧಿಯಲ್ಲಿ ಬರೋಬ್ಬರಿ 16 ಪಟ್ಟು ಆಸ್ತಿಯಲ್ಲಿ ಹೆಚ್ಚಳವಾಗಿರುವುದು ಮೌತ್ರ ಹೌದು!

ಮಾಜಿ ಪ್ರಧಾನ ಮಂತ್ರಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಪುತ್ರನಾಗಿರುವ ಕುಮಾರಸ್ವಾಮಿ ಕಳೆದ ಐದು ವರ್ಷಗಳ ಹಿಂದೆ ಅಧಿಕೃತವಾಗಿ ಹೊಂದಿದ್ದ ಆಸ್ತಿ ಕೇವಲ 3.06 ಕೋಟಿ ರೂಪಾಯಿಗಳು. ಅದು ಪ್ರಸಕ್ತ 16.3ರಷ್ಟು ಅಂದರೆ 49.85 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.
NRB

ಹೀಗೆಂದು ಯಾರೋ ರಾಜಕಾರಣಿಗಳು ಆರೋಪಿಸಿರುವುದಲ್ಲ. 2010ರ ಆಡಳಿತ ಮತ್ತು ಅಭಿವೃದ್ಧಿ ಕುರಿತು 'ನ್ಯಾಷನಲ್ ಸೋಷಿಯಲ್ ವಾಚ್' ಎಂಬ ಸಂಘಟನೆಯು ತಯಾರಿಸಿರುವ 'ದಿ ಸಿಟಿಜನ್ಸ್ ರಿಪೋರ್ಟ್'ನಲ್ಲಿ ವಿವರಿಸಲಾಗಿರುವ ನಮ್ಮ ಸಂಸದರ ಸಾಧನೆಗಳ ಪುಟದಲ್ಲಿ ಕುಮಾರಸ್ವಾಮಿಯವರ 'ಸಾಧನೆ'ಯನ್ನೂ ಸೇರಿಸಲಾಗಿದೆ.

ಇದು ಕೇವಲ ಕುಮಾರಸ್ವಾಮಿಯವರಿಗೆ ಮೀಸಲಲ್ಲ. ಇತ್ತೀಚೆಗಷ್ಟೇ ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ ಮೇಲೆ ಹರಿ ಹಾಯ್ದಿದ್ದ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಮದ್ಯ ದೊರೆ ವಿಜಯ್ ಮಲ್ಯ ಮುಂತಾದವರ ಆಸ್ತಿಯಲ್ಲೂ ಭಾರೀ ಏರಿಕೆ ದಾಖಲಾಗಿದೆ.

ಆದರೆ ಆಂಧ್ರಪ್ರದೇಶದ ಕಾಂಗ್ರೆಸ್ ಸಂಸದ ಲಗಡಪತಿ ರಾಜಗೋಪಾಲ್ ಅವರದ್ದು ವಿಶ್ವದಾಖಲೆ. ಐದು ವರ್ಷದ ಹಿಂದೆ ಕೇವಲ 9.25 ಕೋಟಿ ರೂಪಾಯಿ ಆಸ್ತಿ ಹೊಂದಿದ್ದ ಅವರೀಗ 289 ಕೋಟಿ ರೂಪಾಯಿಗಳ ಒಡೆಯ. ಅಂದರೆ ಸರಿಸುಮಾರು ಶೇ.3,024ರಷ್ಟು ಹೆಚ್ಚಳ ಕಂಡು ಬಂದಿದೆ. ತಾನು ರಾಜಕೀಯ ಮತ್ತು ಸಾರ್ವಜನಿಕ ಸೇವಕ ಎಂದು ಈ ಸಂಸದ ಹೇಳಿಕೊಳ್ಳುತ್ತಿರುವವರು.

ನ್ಯಾಷನಲ್ ಸೋಷಿಯಲ್ ವಾಚ್ ಸಂಸ್ಥೆಯ ಪ್ರಕಾರ ಒಟ್ಟು ಲೋಕಸಭಾ ಸದಸ್ಯರಲ್ಲಿ ಶೇ.25ರಷ್ಟು ಮಂದಿ (543ರಲ್ಲಿ 128) ಉದ್ಯಮಿಗಳು, ಕಟ್ಟಡ ನಿರ್ಮಾಣ ಸಂಸ್ಥೆಗಳನ್ನು ಹೊಂದಿರುವವರು.

ತಾವು ದೇಶಭಕ್ತರ ತುಂಡು ಎಂದು ಹೇಳಿಕೊಳ್ಳುವ ಬಿಜೆಪಿಯವರೂ ಆಸ್ತಿ ಮಾಡಿಕೊಳ್ಳುವುದರಲ್ಲಿ ಹಿಂದೆ ಬಿದ್ದಿಲ್ಲ. ಬಿಜೆಪಿಯ ಮೇನಕಾ ಗಾಂಧಿ (ವರುಣ್ ಗಾಂಧಿ ತಾಯಿ) 2004ರಲ್ಲಿ 6.32 ಕೋಟಿ ರೂ.ಗಳಾಗಿದ್ದವು. ಇದು 2009ರ ಹೊತ್ತಿಗೆ 17.6 ಕೋಟಿಗಳಿಗೆ ಏರಿಕೆಯಾಗಿದೆ. ಅವರದ್ದೇ ಪಕ್ಷದ ಬಿಹಾರ ಸಂಸದ ಉದಯ್ ಸಿಂಗ್ ಎಂಬವರ ಆಸ್ತಿ ಇದೇ ಅವಧಿಯಲ್ಲಿ 3.06 ಕೋಟಿ ರೂಪಾಯಿಗಳಿಂದ 43.86 ಕೋಟಿ ರೂಪಾಯಿಗಳಿಗೆ ಹೆಚ್ಚಳ ಕಂಡಿದೆ.

ಕೆಲಸ ಮಾಡುವವರಿಗೆ ಬೆಂಬಲವಿಲ್ಲ...
ಕಳೆದ ಲೋಕಸಭೆಯಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಣೆ ತೋರಿಸಿದ ಟಾಪ್ 10 ಸಂಸದರಲ್ಲಿ ಐವರು ಸಂಸದರು ಮರು ಆಯ್ಕೆಯಾಗಿಲ್ಲ. ಅವರನ್ನು 15ನೇ ಲೋಕಸಭೆಗೆ ಮತದಾರರು ಆರಿಸಿಲ್ಲ ಎಂಬ ವಿಚಾರವೂ ಇದರಿಂದ ಬೆಳಕಿಗೆ ಬಂದಿದೆ.

ತ್ರಿಶೂರ್‌ನ ಸಿಪಿಐ ಸಂಸದ ಸಿ.ಕೆ. ಚಂದ್ರಪ್ಪನ್, ಪಂದಾರ್ಪುರದ ಆರ್‌ಪಿಐ ಸಂಸದ ರಾಮದಾಸ್ ಅಠಾವಳೆ, ಪುರಿಯ ಬಿಜೆಡಿ ಸಂಸದ ಬ್ರಜಾ ಕಿಶೋರ್ ತ್ರಿಪಾಠಿ, ಫಳನಿಯ ಕಾಂಗ್ರೆಸ್ ಸಂಸದ ಎಸ್. ಕುಪ್ಪುಸ್ವಾಮಿ ಹಾಗೂ ಸಮಾಜವಾದಿ ಪಕ್ಷದ ಫಿರೋಜಾಬಾದ್ ಸಂಸದ ರಾಮಜಿಲಾಲ್ ಸುಮನ್ ಈ ನತದೃಷ್ಟರು. ಇವರು 14ನೇ ಲೋಕಸಭೆಯ ಅಗ್ರ 10 ಸಂಸದರಲ್ಲಿ ಐವರಾಗಿದ್ದರು.
ಸಂಬಂಧಿತ ಮಾಹಿತಿ ಹುಡುಕಿ