ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಶ್ಮೀರ ಭಾರತದ್ದೇ, ಪಾಕಿಸ್ತಾನದ್ದೇ? ಆಜಂ ಖಾನ್ ಪ್ರಶ್ನೆ (Kashmir | India | Azam Khan | Samajwadi Party)
Bookmark and Share Feedback Print
 
ಇಂತಹ ಮೂರ್ಖತನದ ಜಿಜ್ಞಾಸೆಯನ್ನು ಮುಂದಿಟ್ಟಿರುವುದು ಸಮಾಜವಾದಿ ಪಕ್ಷದ ಮುಖಂಡ ಆಜಂ ಖಾನ್. ದೇಶದ ಮುಸ್ಲಿಂ ಸಚಿವರುಗಳ ಬಗ್ಗೆ ಮಾತನಾಡುತ್ತಾ, ಕೇಂದ್ರ ಸರಕಾರದಲ್ಲಿ ಭಾರತದ ಯಾವನೇ ಮುಸ್ಲಿಂ ಮಂತ್ರಿಯಾಗಿಲ್ಲ. ಇರುವವರಲ್ಲಿ ಒಬ್ಬರು ಕಾಶ್ಮೀರದವರು. ಕಾಶ್ಮೀರ ನಮ್ಮ ದೇಶದ ಭಾಗವೇ ಎನ್ನುವುದು ಇನ್ನೂ ಖಚಿತವಾಗಿಲ್ಲ ಎಂದು ಅವರು ಹೇಳಿರುವುದು!

ಉತ್ತರ ಪ್ರದೇಶ ರಾಜಧಾನಿ ಲಕ್ನೋದಿಂದ 250 ಕಿಲೋ ಮೀಟರ್ ದೂರದಲ್ಲಿರುವ ಬಡೌನ್ ಎಂಬಲ್ಲಿ ಸಾರ್ವಜನಿಕ ಸಮಾರಂಭವನ್ನು ಉದ್ದೇಸಿಸಿ ಮಾತನಾಡುತ್ತಿದ್ದ ಮುಲಾಯಂ ಸಿಂಗ್ ಶಿಷ್ಯ, ಕೇಂದ್ರದ ಯುಪಿಎ ಸರಕಾರದಲ್ಲಿ ಮುಸ್ಲಿಮನೊಬ್ಬ ಸಚಿವನಾಗಿರುವುದು ಗುಲಾಂ ನಬೀ ಆಜಾದ್ ಮಾತ್ರ. ಆದರೆ ಅವರು ಕಾಶ್ಮೀರಿ ಎಂದು ಹೇಳುವ ಮೂಲಕ ವಿವಾದ ಹುಟ್ಟು ಹಾಕಿದ್ದಾರೆ.

ಕೇಂದ್ರದ ಸಂಪುಟದಲ್ಲಿ ಇರುವ ಏಕೈಕ ಮುಸಲ್ಮಾನ ಮಂತ್ರಿ ಗುಲಾಂ ನಬೀ ಆಜಾದ್. ಅವರು ಭಾರತದವರಲ್ಲ, ಕಾಶ್ಮೀರದವರು. ಆ ಕಾಶ್ಮೀರ ಭಾರತದ ಭಾಗವೇ ಅಥವಾ ಅಲ್ಲವೇ ಎನ್ನುವುದು ನಮಗಿನ್ನೂ ಗೊತ್ತಿಲ್ಲ. ಹಾಗಾಗಿ ಈಗಲೂ ವಿವಾದವಾಗಿ ಉಳಿದುಕೊಂಡಿದೆ ಎಂದು ಖಾನ್ ಹೇಳಿದ್ದಾರೆ.

ಆಜಾದ್ ಅವರನ್ನು ಉಲ್ಲೇಖಿಸುತ್ತಾ ಮಾತನಾಡುತ್ತಿದ್ದ ಖಾನ್, ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಅಲ್ಪಸಂಖ್ಯಾತರ ಬಗ್ಗೆ, ಅವರ ಹಿತಾಸಕ್ತಿಗಳನ್ನು ರಕ್ಷಿಸುವ ಬಗ್ಗೆ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಯಾಕೆಂದರೆ ಅವರ ಸರಕಾರದಲ್ಲಿ ಇರುವುದೇ ಒಬ್ಬ ಮುಸ್ಲಿಂ ಸಚಿವ ಎಂದಿದ್ದರು.

ಇದು ದುರೃಷ್ಟಕರ ಎಂದಿರುವ ಕಾಂಗ್ರೆಸ್, ಖಾನ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದೆ. ಇದು ಬೇಜವಾಬ್ದಾರಿತನದ್ದು ಎಂದು ಬಿಜೆಪಿ ಹೇಳಿದೆ. ಖಾನ್‌ ಮೇಲೆ ದೇಶದ್ರೋಹ ಆರೋಪ ಹೊರಿಸಿ ಪ್ರಕರಣ ದಾಖಲಿಸುವಂತೆಯೂ ಒತ್ತಾಯ ಮಾಡಲಾಗಿದೆ.

ಸದಾ ಸುದ್ದಿಯಲ್ಲಿರಲು ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವುದು ಅಭ್ಯಾಸವಾಗಿ ಹೋಗಿದೆ. ಆಜಂ ಖಾನ್ ಕೂಡ ಅಂತಹುದೇ ಹೇಳಿಕೆ ನೀಡಿದ್ದಾರೆ. ಆಜಾದ್ ಭಾರತದವರಲ್ಲ, ಕಾಶ್ಮೀರದವರು. ಅದು ಭಾರತ ಅಥವಾ ಪಾಕಿಸ್ತಾನಕ್ಕೆ ಸೇರಿರುವುದರ ಬಗ್ಗೆ ಸ್ಪಷ್ಟತೆಯಿಲ್ಲ ಎಂದು ಹೇಳಿರುವುದು ಅದಕ್ಕೆ ಒಂದು ಉದಾಹರಣೆಯಷ್ಟೇ ಎಂದು ಬಿಜೆಪಿ ವಕ್ತಾರ ವಿಜಯ್ ಪಾಠಕ್ ಅಭಿಪ್ರಾಯಪಟ್ಟರು.

ಈ ಹಿಂದೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, ರಾಷ್ಟ್ರೀಯ ಹಿತಾಸಕ್ತಿಗಳನ್ನು ಬದಿಗೊತ್ತಿ ವಿವಾದಿತ ಹೇಳಿಕೆಗಳನ್ನು ನೀಡಿದರು. ಈಗ ಅದೇ ಹಾದಿಯಲ್ಲಿ ಆಜಂ ಖಾನ್ ಸಾಗಿದ್ದಾರೆ. ಇವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಬೇಡಿಕೆ ಮುಂದಿಟ್ಟರು.

ಅದಕ್ಕಿಂತಲೂ ಪ್ರಮುಖ ವಿಚಾರವೆಂದರೆ, ಕೇಂದ್ರ ಸರಕಾರದಲ್ಲಿ ಗುಲಾಂ ನಬೀ ಆಜಾದ್ ಒಬ್ಬರೇ ಮುಸ್ಲಿಂ ಸಚಿವರು ಇದ್ದಾರೆ ಎನ್ನುವುದು ಸುಳ್ಳು ಎನ್ನುವುದು. ಹಲವು ಮುಸ್ಲಿಂ ಸಚಿವರು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಸಂಪುಟದಲ್ಲಿದ್ದಾರೆ ಎಂದು ಕಾಂಗ್ರೆಸ್ ವಕ್ತಾರರು ಸ್ಪಷ್ಟನೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ