ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಂಬೈ ದಾಳಿ; ದೇಸೀ ಉಗ್ರರನ್ನು ಖುಲಾಸೆಗೊಳಿಸಿದ್ದು ತಪ್ಪು (Faheem Ansari | Sabauddin Ahmed | Ujjwal Nikam | Bombay High Court)
Bookmark and Share Feedback Print
 
ಲಷ್ಕರ್ ಇ ತೋಯ್ಬಾದ ಶಂಕಿತ ಭಯೋತ್ಪಾದಕರಾದ ಫಹೀಂ ಅನ್ಸಾರಿ ಮತ್ತು ಸಬಾವುದ್ದೀನ್ ಅಹ್ಮದ್ ಎಂಬ ಇಬ್ಬರು ಭಾರತೀಯರನ್ನು ಮುಂಬೈ ದಾಳಿ ಪ್ರಕರಣದಲ್ಲಿ ಖುಲಾಸೆಗೊಳಿಸುವ ಮೂಲಕ ವಿಚಾರಣಾ ನ್ಯಾಯಾಲಯವು ತಪ್ಪು ಮಾಡಿದೆ ಎಂದು ಸರಕಾರಿ ವಕೀಲ ಉಜ್ವಲ್ ನಿಕ್ಕಂ ಬಾಂಬೆ ಹೈಕೋರ್ಟಿಗೆ ತಿಳಿಸಿದ್ದಾರೆ.

ಫಹೀಂ ಮತ್ತು ಸಬಾವುದ್ದೀನ್ ಇಬ್ಬರೂ ಮುಂಬೈ ದಾಳಿಯ ಪಿತೂರಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಪ್ರಮುಖ ಸ್ಥಳಗಳ ನಕಾಶೆಗಳನ್ನು ಲಷ್ಕರ್ ಉಗ್ರರಿಗೆ ಅವರು ಪೂರೈಸಿದ್ದರು ಎಂದು ನಿಕ್ಕಂ ವಾದಿಸಿದ್ದಾರೆ.

ನಿಕ್ಕಂ ಬಾಂಬೆ ಹೈಕೋರ್ಟ್ ಮುಂದಿಟ್ಟಿರುವ ಅಂಶಗಳು:
* ಫಹೀಂ ಮತ್ತು ಸಬಾವುದ್ದೀನ್‌ರನ್ನು ಸಿಆರ್‌ಪಿಎಫ್ ಜವಾನರ ಮೇಲಿನ ದಾಳಿ ಸಂಬಂಧ 2008ರ ಫೆಬ್ರವರಿಯಲ್ಲಿ ಬಂಧಿಸಲಾಗಿತ್ತು.
* ಈ ಸಂದರ್ಭದಲ್ಲಿ ಪೊಲೀಸರಿಗೆ, ಫಹೀಂ ಹೆಸರು ಮತ್ತು ಭಾವಚಿತ್ರವಿದ್ದ ಪಾಕಿಸ್ತಾನದ ನಕಲಿ ಪಾಸ್‌ಪೋರ್ಟ್ ಸಿಕ್ಕಿತ್ತು.
* ಲಷ್ಕರ್ ಭಯೋತ್ಪಾದಕರಿಗೆ ಕೊಡಲೆಂದು ಸಿದ್ಧಪಡಿಸಲಾಗಿದ್ದ ಮುಂಬೈಯ 10 ಸ್ಥಳಗಳ ನಕ್ಷೆಗಳು ಫಹೀಂನಲ್ಲಿದ್ದವು.
* ಲಷ್ಕರ್‌ಗೆ ನೀಡುವುದಕ್ಕಾಗಿ ನೇಪಾಳದಲ್ಲಿ ಸಬಾವುದ್ದೀನ್‌ಗೆ ನಕ್ಷೆಗಳನ್ನು ಫಹೀಂ ನೀಡುತ್ತಿರುವುದನ್ನು ಫಹೀಂನ ಬಾಲ್ಯ ಸ್ನೇಹಿತ ನೂರುದ್ದೀನ್ ಶೇಖ್ ನೋಡಿದ್ದ.
* ಪಾಕಿಸ್ತಾನಿ ಭಯೋತ್ಪಾದಕ ಅಜ್ಮಲ್ ಕಸಬ್ ಮತ್ತು ಆತನ ಇತರ ಒಂಬತ್ತು ಸಹಚರರಿಗೆ ಮುಂಬೈ ನಕ್ಷೆಗಳನ್ನು ನೀಡಿದ್ದ ಲಷ್ಕರ್ ನಾಯಕ ಅಬು ಕಾಫಾ, ಇದನ್ನು ಭಾರತೀಯರಾದ ಫಹೀಂ ಮತ್ತು ಸಬಾವುದ್ದೀನ್ ಒದಗಿಸಿದ್ದಾರೆ ಎಂದು ಹೇಳಿದ್ದ ಎಂಬುದನ್ನು ಕಸಬ್ ಒಪ್ಪಿಕೊಂಡಿದ್ದಾನೆ.

ಲಷ್ಕರ್ ಇ ತೋಯ್ಬಾದ ಇಬ್ಬರು ಸಕ್ರಿಯ ಭಾರತೀಯ ಕಾರ್ಯಕರ್ತರಾದ ಫಹೀಂ ಅನ್ಸಾರಿ ಮತ್ತು ಸಬಾವುದ್ದೀನ್ ಅಹ್ಮದ್ ಮೇಲಿನ ಆರೋಪಗಳಿಗೆ ಪೂರಕ ಸಾಕ್ಷ್ಯಗಳು ಸಿಗದ ಹಿನ್ನೆಲೆಯಲ್ಲಿ ಅವರನ್ನು ಮುಂಬೈ ವಿಶೇಷ ನ್ಯಾಯಾಲಯವು ಖುಲಾಸೆಗೊಳಿಸಿತ್ತು.

ಅನ್ಸಾರಿಯನ್ನು 2008ರ ಫೆಬ್ರವರಿಯಲ್ಲಿ ಉತ್ತರ ಪ್ರದೇಶದ ಲಕ್ನೋದಲ್ಲಿ ಹಾಗೂ ಸಬಾವುದ್ದೀನ್‌ನನ್ನು 2008ರ ಏಪ್ರಿಲ್‌ನಲ್ಲಿ ಬಂಧಿಸಲಾಗಿತ್ತು. 2008ರ ನವೆಂಬರ್ ಮುಂಬೈ ದಾಳಿಯ ನಂತರ ಅವರಿಬ್ಬರನ್ನೂ ಮುಂಬೈ ಪೊಲೀಸರ ವಶಕ್ಕೆ ಒಪ್ಪಿಸಲಾಗಿತ್ತು. ಇವರಿಬ್ಬರೂ ತಾವು ಬಂಧನಕ್ಕೆ ಒಳಗಾಗುವ ಮೊದಲು ಭಯೋತ್ಪಾದಕರಿಗೆ ಮುಂಬೈಯ ವಿವಿಧ 12 ಸ್ಥಳಗಳ ನಕ್ಷೆಗಳನ್ನು ಒದಗಿಸಿದ್ದರು.

ಮುಂಬೈ ದಾಳಿ ನಡೆಸುವ ಮೊದಲು ಗುರಿಯಾಗುವ ಸ್ಥಳಗಳನ್ನು ಗುರುತಿಸಿ, ಅವುಗಳ ನಕ್ಷೆಯನ್ನು ಸಬಾವುದ್ದೀನ್‌ಗೆ ಎಂಬ ವ್ಯಕ್ತಿಗೆ ಫಹೀಂ ಹಸ್ತಾಂತರಿಸಿದ್ದ. ಸಬಾವುದ್ದೀನ್ ಅದನ್ನು ಪಾಕಿಸ್ತಾನಿ ವ್ಯಕ್ತಿಗಳಿಗೆ ನೀಡಿದ್ದ. ಆದರೆ ಇದನ್ನು ನ್ಯಾಯಾಧೀಶ ಎಂ.ಎಲ್. ತಹಲಿಯಾನಿ ಅವರು, 'ಇದಕ್ಕಿಂತ ಗೂಗಲ್ ಅತ್ಯುತ್ತಮ ನಕ್ಷೆಗಳನ್ನು ನೀಡುತ್ತವೆ' ಎಂದು ಲಘುವಾಗಿ ಪರಿಗಣಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ