ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಜೀನಾಮೆ ಕೊಡ್ತೇನೆ ಎಂದು ಪ್ಲೇಟ್ ಬದಲಿಸಿದ ಮಮತಾ (Mamata Banerjee | CPI (M) | TMCP | M K Narayanan)
Bookmark and Share Feedback Print
 
ಪಶ್ಚಿಮ ಬಂಗಾಳದಲ್ಲಿನ ಹಿಂಸಾಚಾರದ ವಿರುದ್ಧ ಕೇಂದ್ರ ಸರಕಾರ ಕ್ರಮ ತೆಗೆದುಕೊಳ್ಳದೇ ಇದ್ದಲ್ಲಿ ಸಚಿವೆ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದ ಕೇಂದ್ರ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ, ಕೆಲವೇ ಹೊತ್ತಿನಲ್ಲಿ ಹೇಳಿಕೆ ತಿರುಚಿದ್ದಾರೆ.

ಎಡರಂಗದ ಸರಕಾರ ಭದ್ರತಾ ಪಡೆಗಳನ್ನು ದುರುಪಯೋಗ ಪಡಿಸಿಕೊಂಡಿರುವುದು ಸಾಬೀತಾದರೆ ತಕ್ಷಣವೇ ಕೇಂದ್ರ ಸರಕಾರ ಪಡೆಗಳನ್ನು ಹಿಂಪಡೆದುಕೊಳ್ಳಬೇಕು ಎಂದು ನಾನು ಹೇಳಿದ್ದೆ. ಆದರೆ ಮಾಧ್ಯಮಗಳು ಅದನ್ನು ತಪ್ಪಾಗಿ ವರದಿ ಮಾಡಿವೆ ಎಂದು ಮಮತಾ ಸಮಜಾಯಿಷಿ ನೀಡಿದ್ದಾರೆ.

ಮಮತಾ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಿಪಿಐ(ಎಂ) ಲೇವಡಿ ಮಾಡಿದೆ. ಆಕೆ ಮುಂದಿನ ವಿಧಾನಸಭಾ ಚುನಾವಣೆಯವರೆಗೆ ಅಂತಹ ಯಾವುದೇ ನಿರ್ಧಾರಕ್ಕೆ ಬರುವುದಿಲ್ಲ ಎಂದು ನಾನು ಸವಾಲು ಹಾಕುತ್ತೇನೆ ಎಂದು ಸಿಪಿಐ(ಎಂ) ಮುಖ್ಯಸ್ಥ ಮೊಹಮ್ಮದ್ ಸಲೀಂ ಹೇಳಿದ್ದಾರೆ.

ಬುಧವಾರ ಬೆಳಿಗ್ಗೆ ಪತ್ರಕರ್ತರ ಜತೆ ಮಾತನಾಡುತ್ತಿದ್ದ ಮಮತಾ, ಸಚಿವೆ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದರು.

ಯುಪಿಎ ಒಕ್ಕೂಟವು ಅಂಗ ಪಕ್ಷದ ಮೇಲೆ ಗೌರವ ಉಳಿಸಿಕೊಳ್ಳದೇ ಇದ್ದರೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿಯೂ ಅವರು ಹೇಳಿದ್ದರು.

ಸಿಪಿಐ(ಎಂ)ನ ಕಾರ್ಯಕರ್ತರು, ಕೇಂದ್ರದ ಪಡೆಗಳೊಂದಿಗೆ ಸೇರಿಕೊಂಡು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಸೇನೆಯ ದುರುಪಯೋಗವಾಗುತ್ತಿದೆ. ಇದನ್ನು ಸಾಬೀತುಪಡಿಸಲು ನನಗೆ ಸಾಧ್ಯವಾಗದಿದ್ದರೆ ಯಾವುದೇ ತ್ಯಾಗಕ್ಕೂ ತಾನು ಸಿದ್ಧ ಎಂದು ಮಮತಾ ಹೇಳಿದ್ದರು.

ಇತ್ತೀಚೆಗೆ ನಡೆದ ಘಟನೆಯನ್ನು ವಿವರಿಸಿದ್ದ ಅವರು, 'ಸಿಪಿಐ(ಎಂ)ನ ಬಾಡಿಗೆ ರೌಡಿಗಳು ತೃಣಮೂಲ ಛತ್ರ ಪರಿಷತ್‌(ಟಿಎಂಸಿಪಿ)ನ ಮುಖಂಡರ ಮೇಲೆ ಹಲ್ಲೆ ಮಾಡಿದ್ದರು. ಈ ಮಾರಾಮಾರಿಯಿಂದ ಸಿಪಿಐ(ಎಂ)ನ ವಿದ್ಯಾರ್ಥಿ ನಾಯಕ ಗಾಯಗೊಂಡಿದ್ದ. ಹಿಂಸೆಗೆ ಪ್ರಚೋದನೆ ನೀಡುತ್ತಿರುವುದೇ ಸಿಪಿಐ(ಎಂ)' ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಮುಂದಿನ ವರ್ಷ ವಿಧಾನಸಭೆ ಚುನಾವಮೆ ನಡೆಯಲಿರುವುದರಿಂದ ಆಡಳಿತ ಪಕ್ಷ ಎಡರಂಗದ ಮೇಲೆ ತೃಣಮೂಲ ಕಾಂಗ್ರೆಸ್ ಆಗಾಗ ಹಲವು ಆರೋಪಗಳನ್ನು ಮಾಡುತ್ತಾ ಬರುತ್ತಿದೆ. ಮಮತಾ ಮೊದಲಿನಿಂದಲೂ ನಕ್ಸಲರನ್ನು ಬೆಂಬಲಿಸುತ್ತಾ ಬಂದವರು. ಇದಕ್ಕೆ ಕಾಂಗ್ರೆಸ್ ಬೆಂಬಲ ನೀಡುತ್ತಿಲ್ಲ ಎನ್ನುವುದೇ ಅವರು ಆಗೀಗ ತೆಗೆಯುತ್ತಿರುವ ತಕರಾರು.
ಸಂಬಂಧಿತ ಮಾಹಿತಿ ಹುಡುಕಿ