ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 87ನೇ ಜನ್ಮದಿನಾಚರಣೆಯನ್ನು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಬಹು ವಿಜೃಂಭಣೆಯಿಂದ ಆಚರಿಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸತತ ಐದು ಬಾರಿ ಸಂಸತ್ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಮಾಜಿ ಪ್ರದಾನಿ ವಾಜಪೇಯಿ ಜನ್ಮದಿನಾಚರಣೆ ಅಂಗವಾಗಿ, ರಾಮಾಯಣದ ಕಥಾ ಪ್ರಸಂಗ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು ಎಂದು ಮುಖಂಡರು ತಿಳಿಸಿದ್ದಾರೆ.
ವಾಜಪೇಯಿ ಶ್ರೇಷ್ಠ ನಾಯಕರಾಗಿದ್ದಾರೆ.ರಾಜಕೀಯದಿಂದ ದೂರವಾಗಿದ್ದರೂ ದೇಶದ ಜನತೆಯ ಸ್ಪೂರ್ತಿಯ ಸಂಕೇತವಾಗಿದ್ದಾರೆ ಎಂದು ಬಿಜೆಪಿ ನಾಯಕ ಹಾಗೂ ಲಕ್ನೋ ಮೇಯರ್ ದಿನೇಶ್ ಶರ್ಮಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ವಾಜಪೇಯಿ ಅವರಿಗೆ ಶತಾಯಿಷಿಗಳಾಗಲೆಂದು ಕೋರಿ, ನಗರದ ಹನುಮಾನ ಮಂದಿರದಲ್ಲಿ 87 ಕೆಜಿ ಲಡ್ಡು ಸೇರಿದಂತೆ ಬಟ್ಟೆ ಆಹಾರ ಧಾನ್ಯಗಳನ್ನು ವಿತರಿಸಲಾಯಿತು ಎಂದು ಲಕ್ನೋ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಲಾಲ್‌ಜಿ ಟಂಡನ್ ಹೇಳಿದ್ದಾರೆ.