ಯೇಸುಕ್ರಿಸ್ತನ ಜನ್ಮದಿನದ ಅಂಗವಾಗಿ ದೇಶಾದ್ಯಂತ ಕ್ರೈಸ್ತ ಬಾಂಧವರು ಕ್ರಿಸ್‌ಮಸ್ ಹಬ್ಬವನ್ನು ಸಡಗರ ಸಂಭ್ರಮೋಲ್ಲಾಸಗಳಿಂದ ಇಂದು ಆಚರಿಸಿದರು.
ರಾಜ್ಯಾದ್ಯಂತ ಕ್ರೈಸ್ತ ಭಾಂದವರು ನಿನ್ನೆ ರಾತ್ರಿಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಚರ್ಚುಗಳಿಗೆ ಭೇಟಿ ನೀಡಿ, ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಿದ್ದಾರೆ. ರಾತ್ರಿ 12 ಗಂಟೆಯಾಗುತ್ತಿದ್ದಂತೆ ಪಟಾಕಿಗಳ ಸದ್ದು ಮೊಳಗಿದವು. ಚರ್ಚುಗಳಲ್ಲಿ ಪಾದ್ರಿಗಳು, ಧರ್ಮೋಪದೇಶಕರು ವಿಶೇಷ ಸಂದೇಶ ನೀಡಿದರು.
ಮನೆಮನೆಗಳಲ್ಲಿ ಹೊಸಬಟ್ಟೆಗಳನ್ನು ಧರಿಸಿ, ವಿಶೇಷ ಭಕ್ಷ್ಯ ಭೋಜನಗಳನ್ನು ಸವಿದು ಕ್ರೈಸ್ತ ಬಾಂಧವರು ಸಂಭ್ರಮಿಸಿದರು.
ಮೈಸೂರಿನ ಪ್ರಸಿದ್ಧ ಸೇಂಟ್ ಫಿಲೋಮಿನಾ ಚರ್ಚು, ಬೆಂಗಳೂರಿನ ಸೇಂಟ್ ಪ್ಯಾಟ್ರಿಕ್ಸ್ ಚರ್ಚುಗಳು ಸೇರಿದಂತೆ, ಹಲವಾರು ಚರ್ಚುಗಳಲ್ಲಿ ಕ್ರೈಸ್ತ ಭಾಂಧವರು ಯೇಸುಕ್ರಿಸ್ತನ ಆಶೀರ್ವಾದ ಪಡೆದು ಧನ್ಯರಾದರು.
ಕ್ರಿಸ್‌ಮಸ್ ಹಬ್ಬದ ನಿಮಿತ್ತ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಪ್ರದಾನಿ ಮನಮೋಹನ್ ಸಿಂಗ್. ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ, ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಹಲವಾರು ಗಣ್ಯರು ಶುಭಾಶಯಗಳನ್ನು ಕೋರಿದ್ದಾರೆ.