ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಉಮಾ ಭಾರತಿ ಯು-ಟರ್ನ್; ಬಿಜೆಪಿಗೆ ಮತ್ತೆ ಬರುವುದಿಲ್ಲ! (BJP | Uma Bharti | Nitin Gadkari | LK Advani)
Bookmark and Share Feedback Print
 
ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ಹಿಂದೂ ನಾಯಕಿ ಉಮಾ ಭಾರತಿಯವರು ಬಿಜೆಪಿಗೆ ಇಂದು ಬರುತ್ತಾರೆ, ನಾಳೆ ಬರುತ್ತಾರೆ ಎಂಬ ಊಹಾಪೋಹಗಳಿಗೆ ಸ್ವತಃ ಅವರೇ ತೆರೆ ಎಳೆದಿದ್ದಾರೆ. ಸದ್ಯಕ್ಕೆ ಮಾತೃಪಕ್ಷಕ್ಕೆ ಮರಳುವ ಯಾವುದೇ ಯೋಚನೆ ನನ್ನಲ್ಲಿಲ್ಲ ಎಂದಿದ್ದಾರೆ.

ಬಿಜೆಪಿಗೆ ಮತ್ತೆ ಸೇರುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಇತ್ತೀಚಿನವರೆಗೆ ಸ್ವತಃ ಉಮಾ ಭಾರತಿಯವರೇ ಹೇಳಿಕೊಂಡಿದ್ದರು. ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಮತ್ತು ವರಿಷ್ಠ ಎಲ್.ಕೆ. ಅಡ್ವಾಣಿ ಕೂಡ ಒಂದೆರಡು ಕಡೆ ಇದೇ ರೀತಿಯ ಮಾತುಗಳನ್ನಾಡಿದ್ದರು. ಆದರೆ ಈಗ ಎಲ್ಲವೂ ಬದಲಾದಂತಿದೆ.
PTI

ಪಕ್ಷವನ್ನು ಬಲಪಡಿಸಲು ನಾನು ಕಠಿಣ ಶ್ರಮ ವಹಿಸಿದ್ದೆ. ಸಾಕಷ್ಟು ಚಳವಳಿಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದ್ದೆ. ಆದರೆ ಅದಕ್ಕೆ ಪ್ರತಿಫಲವಾಗಿ ನನಗೆ ಸಿಕ್ಕಿದ್ದೇನು ಎಂದು ಪ್ರಶ್ನಿಸಿರುವ ಉಮಾ, ವರಿಷ್ಠರ ಮೇಲಿನ ಆಕ್ರೋಶ ಇಂಗಿಲ್ಲ ಎಂಬುದನ್ನು ತೋರ್ಪಡಿಸಿದರು.

ಅದು ರಾಮಮಂದಿರ ವಿಚಾರವಾಗಿರಬಹುದು ಅಥವಾ ಇನ್ಯಾವುದೇ ಚಳವಳಿಗಳಿರಬಹುದು, ನನಗೆ ಕೊಟ್ಟಂತಹ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಅದರಲ್ಲಿ ಎದುರಾದ ಸಮಸ್ಯೆಗಳನ್ನು ಎದುರಿಸಿ, ಧನಾತ್ಮಕ ಫಲಿತಾಂಶಗಳನ್ನು ತಂದು ಕೊಟ್ಟಿದ್ದೇನೆ. ಆದರೆ ಪಕ್ಷದಿಂದ ಹೊರಗಿದ್ದ ಕಳೆದ ಐದು ವರ್ಷಗಳನ್ನು ಅಷ್ಟು ಸುಲಭವಾಗಿ ನಾನು ಹೇಗೆ ಮರೆಯಲಿ? ಅದನ್ನೆಲ್ಲ ಮರೆತು ಬಿಡಿ ಎಂದು ಹೇಳುವುದು ಅಷ್ಟು ಸುಲಭವಲ್ಲ ಎಂದು ಉಮಾ ಭಾರತಿ ಹೇಳಿದ್ದಾರೆ.

ತಾನು ಅಡ್ವಾಣಿ ಮತ್ತು ಗಡ್ಕರಿ ಜತೆ ಉತ್ತಮ ಸಂಬಂಧ ಹೊಂದಿದ್ದೇನೆ. ಆದರೆ ಸದ್ಯದ ಮಟ್ಟಿಗೆ ಹೇಳುವುದಾದರೆ, ನಾನು ಬಿಜೆಪಿಗೆ ಮರಳಲು ಆಸಕ್ತಿ ಹೊಂದಿಲ್ಲ. ಮುಂದೆ ನೋಡೋಣ ಎಂದಷ್ಟೇ ತಿಳಿಸಿದ್ದಾರೆ.

ಅಡ್ವಾಣಿ ವಿರುದ್ಧ ಟಿವಿ ಚಾನೆಲ್ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ತೀವ್ರವಾಗಿ ಟೀಕಿಸಿದ್ದಕ್ಕಾಗಿ ಅವರನ್ನು 2004ರ ನವೆಂಬರ್ ತಿಂಗಳಲ್ಲಿ ಬಿಜೆಪಿಯಿಂದ ಅಮಾನತು ಮಾಡಲಾಗಿತ್ತು. ಈ ಅಮಾನತನ್ನು ನಂತರದ ಕೆಲವೇ ತಿಂಗಳಲ್ಲಿ ರದ್ದು ಮಾಡಲಾಯಿತು. 2005ರ ಮೇ ತಿಂಗಳಲ್ಲಿ ಅವರು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆಯಾಗಿ ಆಯ್ಕೆಯಾದರು.

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ನೇಮಕವನ್ನು ಆಕ್ಷೇಪಿಸಿದ್ದಕ್ಕಾಗಿ ಮತ್ತೆ ಅದೇ ವರ್ಷ ಪಕ್ಷದಿಂದ ಆಕೆಯನ್ನು ಉಚ್ಛಾಟಿಸಲಾಯಿತು.
ಸಂಬಂಧಿತ ಮಾಹಿತಿ ಹುಡುಕಿ