ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಗರಣ ವಿಚಾರಣೆಗೆ ಹಾಜರಾಗಲು ಸಿದ್ಧ: ಪ್ರಧಾನಿ ಸಿಂಗ್ (PAC | Manmohan Singh | 2G spectrum scam | Murli Manohar Joshi)
Bookmark and Share Feedback Print
 
2ಜಿ ತರಂಗಾಂತರ ಹಂಚಿಕೆ ಹಗರಣದ ಕುರಿತು ಸಾರ್ವಜನಿಕ ಲೆಕ್ಕ ಸಮಿತಿ ಮುಂದೆ ಮಹಾಲೇಖಪಾಲರು ಹಾಜರಾಗಿ ತನ್ನ ಅಭಿಪ್ರಾಯವನ್ನು ಮಂಡಿಸುತ್ತಿದ್ದಂತೆ ಅತ್ತ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ತಾನು ವಿಚಾರಣೆಗೆ ಬರಲು ಸಿದ್ಧನಿದ್ದೇನೆ ಎಂದು ಪತ್ರ ಬರೆದಿದ್ದಾರೆ.

ತಾನು ಸಾರ್ವಜನಿಕ ಲೆಕ್ಕ ಸಮಿತಿಯ (ಪಿಎಸಿ) ವಿಚಾರಣೆಗೆ ಹಾಜರಾಗಲು ಸಿದ್ಧನಿದ್ದೇನೆ ಎಂದು ಕಾಂಗ್ರೆಸ್ ಅಧಿವೇಶನದಲ್ಲಿ ಹೇಳಿದ್ದ ಪ್ರಧಾನಿಯವರು ಇದೀಗ ಪಿಎಸಿ ಅಧ್ಯಕ್ಷ ಮುರಳಿ ಮನೋಹರ ಜೋಶಿಯವರಿಗೆ ಪತ್ರ ಬರೆದಿದ್ದಾರೆ.

ನಾನು ಸಾರ್ವಜನಿಕರಿಂದ ಮುಚ್ಚಿಡಲು ಏನೂ ಇಲ್ಲ. ಸಾರ್ವಜನಿಕ ಲೆಕ್ಕ ಸಮಿತಿಯು ಇಚ್ಛಿಸುವುದಾದರೆ, ನಾನು ವಿಚಾರಣೆಗೆ ಹಾಜರಾಗಲು ಸಿದ್ಧನಿದ್ದೇನೆ ಎಂದು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಯನ್ನು ತಳ್ಳಿ ಹಾಕುತ್ತಾ ಪ್ರಧಾನಿ ಹೇಳಿದ್ದರು.

ಅದರಂತೆ ಈಗ ನಡೆದುಕೊಂಡಿದ್ದಾರೆ. ಈ ಬಗ್ಗೆ ಪಿಎಸಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ನಡುವೆ ಮಹಾಲೇಖಪಾಲರು (ಸಿಎಜಿ) ಸಂಸತ್ತಿನ ಪಿಎಸಿ ಎದುರು ಸೋಮವಾರ ಹಾಜರಾಗಿದ್ದಾರೆ. 2ಜಿ ತರಂಗಾಂತರ ಹಂಚಿಕೆಯಲ್ಲಿ 1.76 ಲಕ್ಷ ಕೋಟಿ ರೂಪಾಯಿ ಅವ್ಯವಹಾರವಾಗಿದೆ ಎಂದು ವರದಿ ನೀಡಿದ್ದ ಸಿಎಜಿ, ಈ ಸಂಬಂಧ ವಿವರಣೆಯನ್ನು ಪಿಎಸಿ ಸಮಿತಿಗೆ ನೀಡುವ ನಿರೀಕ್ಷೆಗಳಿವೆ.

ಬಿಜೆಪಿ ಸಂಸದ ಹಾಗೂ ಹಿರಿಯ ರಾಜಕಾರಣಿ ಮುರಳಿ ಮನೋಹರ ಜೋಶಿ ನೇತೃತ್ವದ 22 ಸದಸ್ಯರ ಪಿಎಸಿ ಸಮಿತಿ ಎದುರು ಬೆಳಿಗ್ಗೆ 11 ಗಂಟೆ ಹೊತ್ತಿಗೆ ಸಿಎಜಿ ವಿನೋದ್ ರೈ ಹಾಜರಾದರು. ಮಧ್ಯಾಹ್ನದ ಎರಡು ಗಂಟೆ ಬಿಡುವು ಹೊರತುಪಡಿಸಿ ದಿನಪೂರ್ತಿ ಸಮಿತಿಯ ಮುಂದೆ ರೈ ಇರಲಿದ್ದಾರೆ.

ನವೆಂಬರ್ 16ರಂದು ತನ್ನ 96 ಪುಟಗಳ ವರದಿ ನೀಡಿದ್ದ ಸಿಎಜಿ, 2008ರಲ್ಲಿ 122 ತರಂಗಾಂತರ ಪರವಾನಗಿ ಮತ್ತು 35 ಡುಯೆಲ್ ತಂತ್ರಜ್ಞಾನದ ಪರವಾನಗಿಗಳನ್ನು ಹರಾಜು ಹಾಕದೆ ಹಂಚಿಕೆ ಮಾಡಿದ್ದರಿಂದ ಬೊಕ್ಕಸಕ್ಕೆ 1,76,645 ಕೋಟಿ ರೂಪಾಯಿ ನಷ್ಟವಾಗಿದೆ ಎಂದಿದ್ದರು.
ಸಂಬಂಧಿತ ಮಾಹಿತಿ ಹುಡುಕಿ