ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಾರತೀಯ ಮುಸ್ಲಿಮರಿಗೆ ಕರ್ಕರೆ ದೇವರಂತೆ: ದಿಗ್ವಿಜಯ್ (Indian Muslims | Digvijay Singh | Hemant Karkare | BJP)
Bookmark and Share Feedback Print
 
ಮುಸ್ಲಿಂ ಪರವಾಗಿದ್ದ ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ದಿವಂಗತ ಹೇಮಂತ್ ಕರ್ಕರೆ ವಿರುದ್ಧ ಹಿಂದೂ ಸಂಘಟನೆಗಳು ಮುಗಿ ಬಿದ್ದಿದ್ದವು ಎಂದಿರುವ ಕಾಂಗ್ರೆಸ್‌ನ ವಿವಾದಿತ ನಾಯಕ ದಿಗ್ವಿಜಯ್ ಸಿಂಗ್, ಭಾರತೀಯ ಮುಸ್ಲಿಮರ ಪಾಲಿಗೆ ಕರ್ಕರೆ ದೇವರಿದ್ದಂತೆ ಎಂದು ಬಣ್ಣಿಸಿದ್ದಾರೆ.

ಇಂತಹ ಮಾತುಗಳನ್ನು ದಿಗ್ವಿಜಯ್ ಹೇಳಿದ್ದು ಅವರಿಗೆ ಹೇಳಿ ಮಾಡಿಸಿದ ಕಾರ್ಯಕ್ರಮವೊಂದರಲ್ಲಿ. ಉರ್ದು ಪತ್ರಿಕೆಯ ಸಂಪಾದಕ ಅಜೀಜ್ ಬುರ್ನಿಯವರ 'ಮುಂಬೈ ದಾಳಿ ಆರೆಸ್ಸೆಸ್ ಪಿತೂರಿಯೇ?' ಎಂಬ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ನಾಯಕ ಎಂದಿನಂತೆ 'ಕೋಮುವಾದ'ದ ಮಾತುಗಳನ್ನಾಡಿದರು.
PTI

ವ್ಯಕ್ತಿಯೊಬ್ಬನನ್ನು ದೇವರಿಗೆ ಹೋಲಿಸುವುದು ಇಸ್ಲಾಂನಲ್ಲಿ ದೈವನಿಂದನೆ ಎಂಬುದನ್ನು ಮರೆತು ಕಾರ್ಯಕ್ರಮದಲ್ಲಿ ಮಾತನಾಡಿದ ದಿಗ್ವಿಜಯ್, 'ಕರ್ಕರೆಯವರು ಭಾರತೀಯ ಮುಸ್ಲಿಮರಿಗೆ ದೇವರಂತೆ ಇದ್ದರು. ಅವರು ಹುತಾತ್ಮ' ಎಂಬ ವಿವಾದಿತ ಹೇಳಿಕೆಯನ್ನು ನೀಡಿದರು.

ತನ್ನ ಪ್ರಾಮಾಣಿಕತೆ ಮತ್ತು ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದ ಆರೆಸ್ಸೆಸ್, ಶಿವಸೇನೆ ಮತ್ತು ಬಿಜೆಪಿಗಳಿಂದ ತೀವ್ರ ಒತ್ತಡವನ್ನು ಎದುರಿಸುತ್ತಿದ್ದ ಕರ್ಕರೆಯವರನ್ನು ಕೊಂದದ್ದು ಪಾಕಿಸ್ತಾನಿ ಭಯೋತ್ಪಾದಕರು ಎಂಬುದರಲ್ಲಿ ತನಗೆ ಯಾವುದೇ ಸಂಶಯವಿಲ್ಲ ಎಂದು ಅವರು ಮುಂಬೈ ದಾಳಿ ಕುರಿತ ತನ್ನ ನಿಲುವನ್ನು ಇದೇ ಸಂದರ್ಭದಲ್ಲಿ ಪುನರುಚ್ಛರಿಸಿದರು.

ಮುಂಬೈ ದಾಳಿ ಬಗ್ಗೆ ಬಂದಿರುವ ಎರಡೆರಡು ಪುಸ್ತಕಗಳ ಅಭಿಪ್ರಾಯಗಳನ್ನು ಒಪ್ಪಿಕೊಳ್ಳಲು ನಾನು ಸಿದ್ಧನಿಲ್ಲ. ಅದು ಅಜೀಜ್ ಬುರ್ನಿಯವರ 'ಮುಂಬೈ ದಾಳಿ ಆರೆಸ್ಸೆಸ್ ಪಿತೂರಿಯೇ?' ಇರಬಹುದು ಅಥವಾ ಮಹಾರಾಷ್ಟ್ರ ಮಾಜಿ ಐಜಿಪಿ ಎಸ್.ಎಂ. ಮುಶ್ರಿಫ್ ಬರೆದ 'ಕರ್ಕರೆಯವರನ್ನು ಕೊಂದವರು ಯಾರು?' ಎಂಬ ಪುಸ್ತಕವಿರಬಹುದು -- ಅವುಗಳ ಅಂಶಗಳು ಒಪ್ಪುವಂತದ್ದಲ್ಲ ಎಂದರು.

ಈ ಎರಡೂ ಪುಸ್ತಕಗಳ ಪ್ರಕಾರ, ಮುಂಬೈ ದಾಳಿ ಮತ್ತು ಕರ್ಕರೆಯವರ ಹತ್ಯೆ ಪ್ರತ್ಯೇಕ ಘಟನೆಗಳು. ಕರ್ಕರೆಯವರನ್ನು ಹಿಂದೂ ತೀವ್ರವಾದಿಗಳು ಕೊಂದಿದ್ದರು ಎಂದಿವೆ.

ತನ್ನ ಆರೆಸ್ಸೆಸ್ ವಿರುದ್ಧದ ಹೋರಾಟವನ್ನು ಭಿನ್ನ ದೃಷ್ಟಿಕೋನದಲ್ಲಿ ವಿವರಿಸಿರುವ ದಿಗ್ವಿಜಯ್ ಸಿಂಗ್, 'ನಾನು ಆರೆಸ್ಸೆಸ್ ವಿರುದ್ಧ ಹೋರಾಡುತ್ತಿರುವುದು ಮುಸ್ಲಿಮರಿಗಾಗಿ ಅಲ್ಲ, ಅದು ಹಿಂದೂಗಳಿಗಾಗಿ' ಎಂದರು.

ಆರೆಸ್ಸೆಸ್ ಮುಸ್ಲಿಂ ಮೂಲಭೂತವಾದಿಗಳನ್ನು ವಿರೋಧಿಸುತ್ತಿಲ್ಲ. ಹಿಂದೂ ಪ್ರಗತಿಪರ ಜಾತ್ಯತೀತವಾದಿಗಳು ಆರೆಸ್ಸೆಸ್‌ನವರ ಸಿದ್ಧಾಂತಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಅಭಿಪ್ರಾಯಪಟ್ಟ ದಿಗ್ವಿಜಯ್, ಪೈಪ್ ಬಾಂಬ್‌ಗಳನ್ನು ತಯಾರಿಸಲು ಆರೆಸ್ಸೆಸ್ ತರಬೇತಿ ನೀಡುತ್ತಿದೆ ಎಂದು 2000ದಿಂದಲೂ ನಾನು ಆರೋಪಿಸುತ್ತಾ ಬಂದಿದ್ದೇನೆ. ಇದೇ ರೀತಿಯ ಸ್ಫೋಟಗಳನ್ನು ಮೆಕ್ಕಾ ಮಸೀದಿ, ಸಮಜ್ಜೋತಾ ಎಕ್ಸ್‌ಪ್ರೆಸ್ ಮತ್ತು ಮಾಲೆಗಾಂವ್ ಸ್ಫೋಟಗಳಲ್ಲಿ ಬಳಸಲಾಗಿತ್ತು. ಹಿಂದೂಗಳು ಮತ್ತು ಮುಸ್ಲಿಮರ ಎರಡೂ ಮೂಲಭೂತವಾದಿತನಗಳು ದೇಶಕ್ಕೆ ಅಪಾಯಕಾರಿ ಎಂದು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ