ಪುರೋಹಿತ್ಗೆ ಜಾಮೀನಿಲ್ಲ
ಮುಂಬೈ: ಮಾಲೆಗಾಂವ್ ಸ್ಫೋಟದ ಸಂಬಂಧ ಬಂಧನಕ್ಕೊಳಗಾಗಿರುವ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಮತ್ತು ಇತರ ಇಬ್ಬರ ಜಾಮೀನು ಅರ್ಜಿಗಳನ್ನು ವಿಶೇಷ ಮೋಕಾ ನ್ಯಾಯಾಲಯವು ತಿರಸ್ಕರಿಸಿದೆ. ಆರೋಪಿಗಳು ಸಮಾಜದಲ್ಲಿ ದುಷ್ಕೃತ್ಯದಲ್ಲಿ ತೊಡಗಬಹುದು ಎಂಬ ಸರಕಾರಿ ವಕೀಲರ ವಾದದ ಹಿನ್ನೆಲೆಯಲ್ಲಿ ಕೋರ್ಟ್ ಈ ತೀರ್ಮಾನಕ್ಕೆ ಬಂದಿದೆ.