ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಹಿಂದೂ ಧರ್ಮಕ್ಕೆ ಮತಾಂತರವಾದ್ರೆ ವಿವಾಹಕ್ಕೆ ಮಾನ್ಯತೆ' (Hindu Marriage | non-Hindu | Delhi High Court | Hindu Marriage Act)
ಹಿಂದೂ ಹಾಗೂ ಹಿಂದೂಯೇತರರ ನಡುವಿನ ವಿವಾಹವನ್ನು ಹಿಂದೂ ವಿವಾಹ ಕಾಯ್ದೆ ಮಾನ್ಯ ಮಾಡುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಈ ಕಾಯ್ದೆಯಡಿ ಯಾವುದೇ ಸೌಲಭ್ಯಕ್ಕೆ ಹಕ್ಕು ಪ್ರತಿಪಾದಿಸಬೇಕಾದರೂ ವಿವಾಹಕ್ಕೆ ಮುನ್ನ ಹಿಂದೂ ಧರ್ಮಕ್ಕೆ ಮತಾಂತರವಾಗಬೇಕು ಎಂದು ನ್ಯಾಯಾಧೀಶ ಕೈಲಾಶ್ ಗಂಭೀರ್ ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.
ಮದುವೆಯಾಗುವ ಸಂದರ್ಭದಲ್ಲಿ ತಾವಿಬ್ಬರೂ ಹಿಂದೂಧರ್ಮದ ಪ್ರಕಾರವೇ ಶಾಸ್ತ್ರೋಕ್ತವಾಗಿಯೇ ಮದುವೆಯಾಗಿದ್ದೇವೆ ಎಂಬುದನ್ನು ಸಾಬೀತುಪಡಿಸಬೇಕಾಗುತ್ತದೆ. ಅಲ್ಲದೇ ತಾನು ಮದುವೆಯಾಗುವ ಸಂದರ್ಭದಲ್ಲಿ ಪತಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರು ಎಂಬ ವಾದವಪನ್ನು ನ್ಯಾಯಪೀಠ ತಳ್ಳಿಹಾಕಿದೆ.
ಬೇರೊಂದು ಧರ್ಮದಲ್ಲಿ ಜನಿಸಿರುವ ವ್ಯಕ್ತಿ ಮತ್ತೊಂದು ಧರ್ಮದ ನಂಬಿಕೆಯನ್ನು ಗೌರವಿಸುತ್ತಾನೆ ಎಂಬುದನ್ನು ಹೇಳಬಹುದು. ಹಾಗಂತ ನಂಬಿಕೆಯನ್ನೇ ಮತಾಂತರ ಎಂದು ಹೇಳಲಾಗದು. ಆತ ತಾನು ಹಿಂದೂ ಧರ್ಮಕ್ಕೆ ಮತಾಂತರ ಆಗಿದ್ದೇನೆ ಎಂಬುದನ್ನು ಕಾನೂನು ಬದ್ಧವಾಗಿ ಘೋಷಿಸಿಕೊಳ್ಳಬೇಕು ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದರೆ ಸಾಲದು. ಮದುವೆಯಾದವರಿಬ್ಬರೂ ಹಿಂದೂಗಳಾಗಿರಲೇಬೇಕು. 2007ರಲ್ಲಿ ಆರ್ಯ ಸಮಾಜದಲ್ಲಿ ಹಿಂದೂ ವಿವಾಹ ಪದ್ಧತಿಯಂತೆ ಕ್ರಿಶ್ಚಿಯನ್ ವರನನ್ನು ಮದುವೆಯಾಗಿದ್ದೇನೆ ಎಂದು ಮಹಿಳೆಯೊಬ್ಬರು ವಿಚ್ಛೇದನಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿರುವ ಕೋರ್ಟ್ ಈ ತೀರ್ಪು ನೀಡಿದೆ.