ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಪ್ರಾಪ್ತಳ ಅತ್ಯಾಚಾರ: ಮಾಯಾವತಿಯಿಂದ ಸಿಐಡಿ ತನಿಖೆಗೆ ಆದೇಶ (Purushottam Naresh Dwivedi | mayawati | Dalit girl rape case | CB - CID | BSP)
Bookmark and Share Feedback Print
 
PTI
ದಲಿತ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ಶಾಸಕನ ವಿರುದ್ಧ ವಿರೋಧ ಪಕ್ಷಗಳು ಭಾರಿ ಪ್ರತಿಭಟನೆ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಮಾಯಾವತಿ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ್ದಾರೆ.

ಬಂಡ ಜಿಲ್ಲೆಯ ನರೇನಿ ಕ್ಷೇತ್ರದ ಬಿಎಸ್‌ಪಿ ಶಾಸಕ ದ್ವಿವೇದಿ, ದಲಿತ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ ಸುಳ್ಳು ಕಳ್ಳತನ ಪ್ರಕರಣ ದಾಖಲಿಸಿ ಆಕೆಯನ್ನೇ ಜೈಲಿಗೆ ತಳ್ಳಿದ ಘಟನೆ ಉತ್ತರ ಪ್ರದೇಶದ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದೆ.

ಜನಪ್ರತಿನಿಧಿಗಳೆಂದರೆ ಜನರ ಹಿತಕ್ಕಾಗಿ ಸೇವೆ ಮಾಡಬೇಕಾದವರು. ಅದು ಹಳೆಯ ಮಾತು. ಈಗ ಅನಾಚಾರ ಮಾಡುವುದು, ದೋಚುವುದೇ ರಾಜಕಾರಣ ಎನ್ನುವುದು ಜಾರಿಯಲ್ಲಿರುವ ಹೊತ್ತು. ಈ ಪ್ರಕರಣವೂ ಅದೇ ಸಾಲಿಗೆ ಸೇರಿದ್ದಾಗಿದೆ. ದಲಿತ ಅಪ್ರಾಪ್ತ ಬಾಲಕಿಯೊಬ್ಬಳನ್ನು ಅತ್ಯಾಚಾರ ಮಾಡಿದ್ದಲ್ಲದೆ, ಸುಳ್ಳು ಪ್ರಕರಣದಲ್ಲಿ ಜೈಲಿಗೂ ತಳ್ಳಿದ್ದಾನೆ ಶಾಸಕ ಮಹಾಶಯ!

ಕೆಲವು ದಿನಗಳ ಹಿಂದೆ ತನ್ನ ತಂದೆಯನ್ನು ತೀವ್ರವಾಗಿ ಹೆದರಿಸಿ, ತನ್ನನ್ನು ಬೇರೆಯವರಿಗೆ ಮಾರಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷನ ಬಿಗಿ ಹಿಡಿತದಿಂದ ಪಾರಾಗಲು, ಶಾಸಕನ ಸಹಾಯ ಯಾಚಿಸಿದ ಬಾಲಕಿ, ಮನವಿ ಪತ್ರದೊಂದಿಗೆ ತೆರಳಿದಾಗ ಈ ಘಟನೆ ನಡೆಯಿತು.

ಇದು ಆಡಳಿತಾರೂಢ ಬಿಎಸ್‌ಪಿಯ (ಮುಖ್ಯಮಂತ್ರಿ ಮಾಯಾವತಿ ಪಕ್ಷ) ಶಾಸಕ ಪುರುಷೋತ್ತಮ್ ನಾರಾಯಣ್ ದ್ವಿವೇದಿ ಎಂಬಾತನ ಕೃತ್ಯ. ಅತ್ಯಾಚಾರ ಎಸಗಿದ ನಂತರ, ತನ್ನ ಮನೆಯಿಂದ ಕಳ್ಳತನ ಮಾಡಿದ್ದಾಳೆ ಎಂದು ಆರೋಪಿಸಿ ಆಕೆಯನ್ನೇ ಜೈಲಿಗೆ ತಳ್ಳಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಬಂಡ ಜಿಲ್ಲೆಯಲ್ಲಿ ನಡೆದಿದೆ.

ಈ ಬಗ್ಗೆ ದೂರು ನೀಡಲು ಯತ್ನಿಸಿದಾಗ ಶಾಸಕರ ಗೂಂಡಾಗಳು ಬಡಿದರು. ಮತ್ತು ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಜೈಲಿನಲ್ಲಿಯೇ ಮಟ್ಟಹಾಕುವುದಾಗಿಯೂ ಬೆದರಿಸಿದ್ದರು ಎಂದು ಅತ್ಯಾಚಾರಕ್ಕೊಳಗಾದ ಬಾಲಕಿ ಆರೋಪಿಸಿದ್ದಾಳೆ.

ಆದರೆ, ಈ ಎಲ್ಲ ಆರೋಪಗಳನ್ನು ತಳ್ಳಿಹಾಕಿ, ನಾನೇನೂ ಮಾಡಿಲ್ಲ ಎಂದಿರುವ ಶಾಸಕ ದ್ವಿವೇದಿ, ಆ ಹುಡುಗಿ ತನ್ನ ಮನೆಯಿಂದ ಬಟ್ಟೆ ಮತ್ತು ಹಣ ದೋಚಿಕೊಂಡು ಹೋಗಿದ್ದಾಳೆ. ಮತ್ತು ಇದೆಲ್ಲ ತನ್ನ ಜನಪ್ರಿಯತೆಯ ಮೇಲೆ ಮಸಿ ಬಳಿಯಲು ರಾಜಕೀಯ ವಿರೋಧಿಗಳ ಕುತಂತ್ರ ಎಂದಿದ್ದಾರೆ.

ಈ ಬಗ್ಗೆ ಕೇಸು ದಾಖಲಿಸಿರುವ ಸ್ಥಳೀಯ ಮಹಿಳಾ ಸಂಘಟನೆ, ಆರೋಪಿಯನ್ನು ಕೂಡಲೇ ಬಂಧಿಸಬೇಕೆಂದು ಅನಿರ್ದಿಷ್ಟ ಉಪವಾಸ ಕೈಗೊಂಡಿದೆ. ಪ್ರಕರಣವನ್ನು ಎತ್ತಿಹಿಡಿದಿರುವ ಪ್ರತಿಪಕ್ಷ ಕಾಂಗ್ರೆಸ್‌ನ ಅಧ್ಯಕ್ಷೆ ರೀಟಾ ಬಹುಗುಣ ಜೋಶಿ, ಬಾಲಕಿಯನ್ನು ಭೇಟಿಮಾಡಲು ಮುಂದಾಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ