ಪಿಎಸಿ ಸಮಿತಿ ಎದುರು ಪ್ರಧಾನಿ ಹಾಜರಾಗುವ ಅಗತ್ಯವಿಲ್ಲ:ಪ್ರಣಬ್
ನವದೆಹಲಿ, ಭಾನುವಾರ, 2 ಜನವರಿ 2011( 14:46 IST )
PTI
2ಜಿ ಹಗರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಲೆಕ್ಕ ಸಮಿತಿಯ ಎದುರು ಪ್ರಧಾನಿ ಹಾಜರಾಗುವುದಾಗಿ ಹೇಳಿರಬಹುದು. ಆದರೆ, ಪ್ರಧಾನಿಯವರು ಸಾರ್ವಜನಿಕ ಲೆಕ್ಕ ಸಮಿತಿ ಎದುರು ಹಾಜರಾಗುವುದಿಲ್ಲ ಎನ್ನುವ ವಿಶ್ವಾಸವಿದೆ ಎಂದು ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಪ್ರಣಬ್ ಪ್ರಕಾರ, ಪ್ರಧಾನಿ ಮನಮೋಹನ್ ಸಿಂಗ್ ಸಂಸತ್ತಿಗೆ ಸಂಬಂಧಿಸಿದ ವ್ಯಕ್ತಿಯಾಗಿದ್ದರಿಂದ, ಯಾವುದೇ ಸಮಿತಿಯ ಎದುರು ಹಾಜರಾಗುವುದು ಸೂಕ್ತವಲ್ಲ ಎನ್ನುವುದು ತಮ್ಮ ಭಾವನೆಯಾಗಿದೆ ಎಂದು ತಿಳಿಸಿದ್ದಾರೆ.
2ಜಿ ಹಗರಣವನ್ನು ಜಂಟಿ ಸದನ ಸಮಿತಿಗೆ ಒಪ್ಪಿಸುವಂತೆ ಒತ್ತಾಯಿಸಿ ಬಿಜೆಪಿ ನೇತೃತ್ವದ ವಿರೋಧ ಪಕ್ಷಗಳು ಚಳಿಗಾಲದ ಅಧಿವೇಶನ ನಡೆಸದಂತೆ ಸಂಸತ್ತಿನಲ್ಲಿ ಪ್ರತಿಭಟನೆಯನ್ನು ವ್ಯಕ್ತಪಡಿಸಿದ ನಂತರ, ಪ್ರಧಾನಿ ಮನಮೋಹನ್ ಸಿಂಗ್ ಸಮಿತಿ ಮುಂದೆ ಹಾಜರಾಗಲು ಸಿದ್ಧ ಎಂದು ಘೋಷಿಸಿದ್ದರು.
ಮಾಜಿ ಟೆಲಿಕಾಂ ಸಚಿವ ಎ.ರಾಜಾ 2ಜಿ ಹಗರಣದಲ್ಲಿ ಭ್ರಷ್ಟಾಚಾರವೆಸಗಿದ ಪ್ರಕರಣವನ್ನು ಜೆಪಿಸಿಗೆ ಒಪ್ಪಿಸುವಂತೆ ವಿರೋಧ ಪಕ್ಷಗಳ ಒತ್ತಡವನ್ನು ಕೇಂದ್ರ ಸರಕಾರ ತಿರಸ್ಕರಿಸಿತ್ತು.
ಟೆಲಿಕಾಂ ಸಚಿವರಾಗಿದ್ದ ಎ.ರಾಜಾ ಅವರ ರಾಜೀನಾಮೆ ಹಾಗೂ ಸಾರ್ವಜನಿಕ ಲೆಕ್ಕ ಸಮಿತಿಯ ಎದುರು ಹಾಜರಾಗುವುದಗಿ ಪ್ರಧಾನಿ ಘೋಷಿಸದ ನಂತರವೂ ಬಿಜೆಪಿ ನೇತೃತ್ವದ ಎನ್‌ಡಿಎ ಪಕ್ಷಗಳು ಜೆಪಿಸಿ ತನಿಖೆಯೇ ಸೂಕ್ತ ಎಂದು ತಿರುಗೇಟು ನೀಡಿವೆ.