ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಹಾರ ಸಚಿವರ ಆಸ್ತಿಯನ್ನು ಬಹಿರಂಗಗೊಳಿಸಿದ ನಿತೀಶ್ (Nitish Kumar | Bihar | JDU | India)
Bookmark and Share Feedback Print
 
ಬಿಹಾರದಲ್ಲಿ ಭ್ರಷ್ಟಾಚಾರ ನಿರ್ಮೂಲನ ಮಾಡಲು ಹೊರಟಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್, ಆಡಳಿತದಲ್ಲಿ ಪಾರದರ್ಶಕತೆ ತರಲು ತನ್ನ ಸಚಿವರ ಹಿಂದೆ ಬಿದ್ದಿದ್ದಾರೆ. ತನ್ನದೂ ಸೇರಿದಂತೆ ಸುಮಾರು ಮೂವತ್ತು ಸಚಿವರ ಆಸ್ತಿ ವಿವರಗಳನ್ನು ಸರಕಾರಿ ವೆಬ್‌ಸೈಟ್‌ನಲ್ಲಿ ಹಾಕಿದ್ದಾರೆ.

ಸತತ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಜೆಡಿಯು ನಾಯಕ ನಿತೀಶ್ ಎನ್‌ಡಿಎ ಮೈತ್ರಿ ಸರಕಾರವನ್ನು ನಡೆಸುತ್ತಿರುವ ರೀತಿಗೆ ಎದುರಾಳಿಗಳೇ ಬೆಚ್ಚಿ ಬಿದ್ದಿದ್ದಾರೆ. ಇಂತಹ ಹೊತ್ತಿನಲ್ಲಿ ಬಿಹಾರವನ್ನು ಮತ್ತಷ್ಟು ಶುದ್ಧಗೊಳಿಸುವ ಪ್ರಕ್ರಿಯೆಗೆ ಕೈ ಹಾಕಿರುವ ಮುಖ್ಯಮಂತ್ರಿ, ಮೊದಲು ಅದು ಸಚಿವರಿಂದಲೇ ಆರಂಭವಾಗಬೇಕು ಎಂಬುದನ್ನು ಮಾಡಿ ತೋರಿಸಿದ್ದಾರೆ.

ನಿತೀಶ್ ಕುಮಾರ್ ಆಸ್ತಿ-ಪಾಸ್ತಿ:
31,760 ರೂ. ನಗದು, 57,770 ರೂ. ಬ್ಯಾಂಕ್ ಠೇವಣಿ, 2003 ಮಾಡೆಲ್‌ನ ಸ್ಯಾಂಟ್ರೊ ಕಾರು, ಮತ್ತು ಹಳೆ ಟಿವಿ, ಎಸಿ, ಫ್ರಿಡ್ಜ್, ದನ-ಕರುಗಳು ಸೇರಿದಂತೆ 1.67 ಲಕ್ಷ ಮೌಲ್ಯದ ಮನೆಯ ಸರಂಜಾಮುಗಳು.

34,475 ರೂ.ಮೌಲ್ಯದ ಕಂಪ್ಯೂಟರ್, 40 ಲಕ್ಷ ಮೌಲ್ಯದ ದೆಹಲಿಯ ಮನೆ, 35,000 ರೂ. ಮೌಲ್ಯದ ವ್ಯಾಯಾಮ ಯಂತ್ರ, ಭಾರತೀಯ ಸ್ಟೇಟ್ ಬ್ಯಾಂಕ್‌ನ ಸೆಕ್ರೆಟೇರಿಯಟ್ ಶಾಖೆಯಲ್ಲಿ 1.93 ಲಕ್ಷ ಸಾಲವಿದೆ ಎಂದು ನಿತೀಶ್ ತನ್ನ ಆಸ್ತಿ-ಪಾಸ್ತಿ ಕುರಿತು ವಿವರ ನೀಡಿದ್ದಾರೆ.

ನಿತೀಶ್ ಮಗ ನಿಶಾಂತ್ ಆಸ್ತಿ ವಿವರ:
1,769 ರೂ. ನಗದು, 41 ಲಕ್ಷ ರೂ. ಬ್ಯಾಂಕ್ ಠೇವಣಿ, ಅಂಚೆ ಇಲಾಖಾ ಠೇವಣಿಯಲ್ಲಿ 13.93 ಲಕ್ಷ, 9.20 ಲಕ್ಷ ಮೌಲ್ಯದ ಬಂಗಾರ, ಕಲ್ಯಾಣ್‌ಬಿಂಗ ಎಂಬಲ್ಲಿ 31.34 ಲಕ್ಷ ರೂ. ಮೌಲ್ಯದ ಕೃಷಿ ಭೂಮಿ ಮತ್ತು 1.31 ಲಕ್ಷದ ವಾಣಿಜ್ಯ ಕಟ್ಟಡ ಹಾಗೂ 8.27 ಲಕ್ಷ ಮೌಲ್ಯದ ಬಕ್ತಿಯಾರ್ ಪುರದ ವಾಣಿಜ್ಯ ಕಟ್ಟಡ.

ಎಸ್.ಕೆ. ಮೋದಿ ಆಸ್ತಿ ವಿವರ:
26,000 ರೂ. ನಗದು, 10.56 ಲಕ್ಷ ಬ್ಯಾಂಕ್ ಠೇವಣಿ, ವಿವಿದ ಷೇರು-ಬಾಂಡುಗಳಲ್ಲಿ 1.83 ಲಕ್ಷ, 1.89 ಲಕ್ಷದ ಎಲ್ಐಸಿ/ಎನ್ಎಸ್‌ಸಿ ಬಾಂಡ್, 1.52 ಲಕ್ಷ ಮೌಲ್ಯದ ಬಂಗಾರ, ಮಾರುತಿ ಸ್ವಿಫ್ಟ್ ಕಾರನ್ನು ಹೊರತು ಪಡಿಸಿ 5.26 ಲಕ್ಷ ಮೌಲ್ಯದ ಆಸ್ತಿ.

ಎಸ್.ಕೆ. ಮೋದಿ ಮತ್ತು ಪತ್ನಿ ಜಂಟಿಯಾಗಿ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಮನೆಗೆ 14.49 ಲಕ್ಷ ಹೂಡಿಕೆ ಮತ್ತು ಗೌತಮ ಬುದ್ಧನಗರದ ಮನೆಗೆ 36.7 ರೂ. ಲಕ್ಷ ಹೂಡಿಕೆ.

ನವದೆಹಲಿಯ ಐಸಿಐಸಿಐ ಬ್ಯಾಂಕ್‌ನಲ್ಲಿ 40 ಲಕ್ಷ ರೂ. ಸಾಲ, ಸರಕಾರಿ ಸಾಲ 2.5 ಲಕ್ಷವನ್ನು ಹೊರತುಪಡಿಸಿ ಸಂಬಂಧಿಕರಲ್ಲಿ 10.70 ಲಕ್ಷ ರೂ. ಸಾಲ ಹೊಂದಿದ್ದಾರೆ.

ಪತ್ನಿ ಮತ್ತು ಮಗ ಹೊಂದಿರುವ ಬಂಗಾರದ ಮೌಲ್ಯ 6.84 ಲಕ್ಷ, 9400 ರೂ. ನಗದು, 14.91 ಲಕ್ಷ ಬ್ಯಾಂಕ್ ಠೇವಣಿ ಮತ್ತು 5.28 ಲಕ್ಷ ರೂ. ಮೌಲ್ಯದ ಎನ್ಎಸ್‌ಸಿ ಮತ್ತಿತರ ಬಾಂಡ್.

ಮಾನವ ಸಂಪನ್ಮೂಲ ಸಚಿವ ಪ್ರಶಾಂತ್ ಕುಮಾರ್ ಶಶಿ ಅವರ ಸ್ಥಿರಾಸ್ತಿ-ಚರಾಸ್ತಿ ಸೇರಿ 4.5 ಕೋಟಿ ರೂ. ಇದೆ. ಆ ಮೂಲಕ ಬಿಹಾರದ ಶ್ರೀಮಂತ ಮಂತ್ರಿಯಾಗಿದ್ದಾರೆ.

ರಾಜ್ಯ ಕಾರ್ಮಿಕ ಸಂಪನ್ಮೂಲ ಇಲಾಖಾ ಸಚಿವ ಜನಾರ್ದನ್ ಸಿಂಗ್ ಸಿಗ್ರಿವಾಲ್ 16.77 ಲಕ್ಷ ಮೌಲ್ಯದ ಆಸ್ತಿ ಹೊಂದಿರುವ ಮೂಲಕ ರಾಜ್ಯದ ಅತೀ ಬಡ ಮಂತ್ರಿಯಾಗಿದ್ದಾರೆ.

ಇತರ ಸಚಿವರುಗಳ ಆಸ್ತಿ-ಪಾಸ್ತಿ ಇಂತಿದೆ:
ಕಬ್ಬು ಮತ್ತು ಸಣ್ಣ ನೀರಾವರಿ ಸಚಿವ ಅವದೇಶ್ ಪ್ರಸಾದ್ ಕುಶ್ವಾಹ- 2.59 ಕೋಟಿ
ಆರೋಗ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ- 1.18 ಕೋಟಿ
ನಗರಾಭಿವೃದ್ಧಿ ಮಂತ್ರಿ ಮತ್ತು ಗೃಹ ಸಚಿವ ಪ್ರೇಮ್ ಕುಮಾರ್- 1.12 ಕೋಟಿ
ಸಾರಿಗೆ ಸಚಿವ ಬ್ರಶೇನ್ ಪಟೇಲ್- 1.12 ಕೋಟಿ
ಕಟ್ಟಡ ನಿರ್ಮಾಣ ಸಚಿವ ದಾಮೋದರ್ ರಾವತ್- 1.03 ಕೋಟಿ
ಕೃಷಿ ಸಚಿವ ನರೇಂದ್ರ ಸಿಂಗ್- 2.07 ಕೋಟಿ
ಕಂದಾಯ ಮತ್ತು ಭೂ ಸುಧಾರಣಾ ಸಚಿವ ರಮಯ್ ರಾಮ್-1.08 ಕೋಟಿ
ಖನಿಜ ಮತ್ತು ಭೂವಿಜ್ಞಾನ ಇಲಾಖಾ ಸಚಿವ ಸತ್ಯ ಡಿಯೊ ನರೇನ್ ಆರ್ಯ- 1.35 ಕೋಟಿ
ಸಂಬಂಧಿತ ಮಾಹಿತಿ ಹುಡುಕಿ