8 ತಿಂಗಳ ಹಿಂದೆ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿದ ಮಹಿಳೆಯೊಬ್ಬಳು ಬಿಹಾರದ ಪುರ್ನಿಯಾ ಶಾಸಕರನ್ನು ಇರಿದು ಕೊಂದುಹಾಕಿದ ಘಟನೆ ಮಂಗಳವಾರ ನಡೆದಿದೆ.
ಪುರ್ನಿಯಾ ಶಾಸಕ ರಾಜ್ ಕಿಶೋರ್ ಕೇಸರಿ ಎಂಬಾತ ಮಹಿಳೆಯಿಂದ ಇರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಈ ಮಹಿಳೆಯನ್ನು ಜನರು ಹಿಗ್ಗಾಮುಗ್ಗ ಥಳಿಸಿದ್ದಾರೆ.
ಪುರ್ನಿಯಾದಲ್ಲಿರುವ ತನ್ನ ನಿವಾಸದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸುತ್ತಿದ್ದ ಸಂದರ್ಭ ಬಿಜೆಪಿ ಶಾಸಕನ ಮೇಲೆ ರೂಪಾ ಪಾಠಕ್ ಎಂಬ ಶಿಕ್ಷಕಿ ದಾಳಿ ನಡೆಸಿದ್ದಾಳೆ. ಕಳೆದ ಮೂರು ವರ್ಷಗಳಿಂದ ಈತ ತನ್ನ ಮೇಲೆ ಅತ್ಯಾಚಾರ ನಡೆಸುತ್ತಿದ್ದ ಎಂಬುದು ಮಹಿಳೆಯ ಆರೋಪವಾಗಿತ್ತು. ಈ ಕುರಿತು ಪೊಲೀಸ್ ತನಿಖೆ ನಡೆಯುತ್ತಿದ್ದು, ಈ ಆರೋಪ ಸುಳ್ಳು ಎಂದು ಶಾಸಕ ಹೇಳುತ್ತಿದ್ದ.