ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಲ್ಮಾಡಿ 'ಗೇಮ್ಸ್' ಹಗರಣ; ಮತ್ತೆ 10 ಕಡೆ ಸಿಬಿಐ ದಾಳಿ (CBI | FIR | Commonwealth Games | Sports)
Bookmark and Share Feedback Print
 
PTI
PTI
ಕಾಮನ್‌ವೆಲ್ತ್ ಗೇಮ್ಸ್‌ನ ಬಹುಕೋಟಿ ಹಗರಣದಲ್ಲಿ ಶಾಮೀಲಾಗಿರುವ ಹತ್ತು ಕಂಪನಿಗಳ ಮೇಲೆ ಇಂದು ದಾಳಿ ನಡೆಸಿದ ಸಿಬಿಐ, ಹಗರಣಕ್ಕೆ ಸಂಬಂಧಿಸಿ ನಾಲ್ಕನೇ ಕೇಸು ದಾಖಲಿಸಿದೆ.

ಕಾಮನ್‌ವೆಲ್ತ್ ಗೇಮ್ಸ್‌ನ ಸಂಘಟನಾ ಸಮಿತಿ ಮುಖ್ಯಸ್ಥ ಸುರೇಶ್ ಕಲ್ಮಾಡಿ ಅವರನ್ನು ನಿನ್ನೆ ವಿಚಾರಣೆ ನಡೆಸಿದ ಮರುದಿನವಾಗಿರುವ ಇಂದು ಹಗರಣದಲ್ಲಿ ಭಾಗಿಯಾಗಿರುವ ಇತರರ ಮೇಲೆ ದಾಳಿ ನಡೆಸಿದೆ. ಈ ಕಂಪನಿಗಳ ಜತೆಗೆ ಕಲ್ಮಾಡಿಯವರು ಯಾವ ರೀತಿಯ ಸಂಬಂಧಗಳನ್ನು ಹೊಂದಿದ್ದರು ಎಂಬುದು ಇನ್ನಷ್ಟೇ ಬಯಲಾಗಬೇಕಿದೆ.

ಗೇಮ್ಸ್ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ನಾಲ್ಕು ಕಂಪನಿಗಳಿಗೆ ಕಾನೂನು ಬಾಹಿರವಾಗಿ ಗುತ್ತಿಗೆಗಳನ್ನು ನೀಡಿರುವ ಕುರಿತಂತೆ ನಿನ್ನೆಯೇ ಸಿಬಿಐ ತನ್ನ ನಾಲ್ಕನೇ ಪ್ರಕರಣವನ್ನು ದಾಖಲಿಸಿದ್ದು, ಇಂದು ದಾಳಿ ನಡೆಸಿದೆ. ಈ ಒಪ್ಪಂದಗಳ ಮೌಲ್ಯ ಸುಮಾರು 600 ಕೋಟಿ ರೂಪಾಯಿಗಳು ಎಂದು ಅಧಿಕೃತ ಮೂಲಗಳು ಹೇಳಿವೆ.

ವಿದೇಶಿ ಮೂಲದ ಭಾರತೀಯ ಕಂಪನಿಗಳು ಇಂತಹ ಒಪ್ಪಂದಗಳನ್ನು ಅಕ್ರಮವಾಗಿ ಪಡೆದುಕೊಂಡಿದ್ದವು ಎಂದು ಹೇಳಲಾಗಿದೆ. ಇವುಗಳ ಮೇಲೆ ಇಂದು ಮುಂಜಾನೆಯಿಂದಲೇ ಸಿಬಿಐ ದಾಳಿ ಆರಂಭಿಸಿದೆ. ಹಗರಣದಲ್ಲಿ ಶಾಮೀಲಾಗಿರುವ ಇನ್ನೂ ಹಲವು ಅಧಿಕಾರಿಗಳನ್ನು ತನಿಖೆಗೊಳಪಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ನಿಯಮಗಳನ್ನು ಉಲ್ಲಂಘಿಸಿ ನೀಡಲಾಗಿರುವ ಗುತ್ತಿಗೆಗಳ ಮೇಲೆ ಈಗಾಗಲೇ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯದ ಹದ್ದಿನ ಕಣ್ಣಿಟ್ಟಿತ್ತು.

ಇಂದು ದಾಖಲಾಗಿರುವುದು ನಾಲ್ಕನೇ ಪ್ರಕರಣ. ಲಂಡನ್‌ನಲ್ಲಿ ನಡೆದ ಕ್ವೀನ್ಸ್ ಬೇಟನ್ ರಿಲೆ ಸೇರಿದಂತೆ ಅಕ್ರಮಕ್ಕೆ ಸಂಬಂಧಿಸಿ ಮೂರು ಎಫ್ಐಆರ್‌ಗಳು ಈ ಹಿಂದೆಯೇ ದಾಖಲಾಗಿದ್ದವು.

ಪ್ರಥಮ ಚಿಕಿತ್ಸಾ ಪೊಟ್ಟಣ, ಕುಡಿಯುವ ನೀರು ಹಂಚಿಕೆ, ಮರದ ಪೀಠೋಪಕರಣ, ಕಚೇರಿ ಸಾಮಗ್ರಿ, ವೇದಿಕೆ ನಿರ್ಮಾಣ, ಬಟ್ಟೆ ಪರದೆ, ಮ್ಯಾಟು, ತಾತ್ಕಾಲಿಕ ಬೇಲಿ, ಬೆಂಕಿ ಆರಿಸುವ ಸಾಧನಗಳು, ಎಮರ್ಜೆನ್ಸಿ ಲೈಟು ಮುಂತಾದ ಸಾಮಗ್ರಿಗಳ ಗುತ್ತಿಗೆ ಸಂಬಂಧಿಸಿದ ಸುಮಾರು 600 ಕೋಟಿ ಅವ್ಯವಹಾರದಲ್ಲಿ ಭಾಗಿಯಾಗಿರುವ ನಾಲ್ಕು ಕಂಪನಿಗಳ ಮೇಲೆ ಬುಧವಾರ ದಾಳಿ ನಡೆಸಿ ಕೇಸು ದಾಖಲಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ