ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಕ್ಷರಧಾಮ ದೇಗುಲಕ್ಕೆ ಪರಿಸರ ಅನುಮತಿಯಿಲ್ಲ: ಜೈರಾಮ್ (Akshardham Temple | environmental clearance | Jairam Ramesh | Congress)
Bookmark and Share Feedback Print
 
PTI
PTI
ರಾಷ್ಟ್ರ ರಾಜಧಾನಿಯ ಯಮುನಾ ನದಿ ದಡದಲ್ಲಿರುವ ವಿಶ್ವಪ್ರಸಿದ್ಧ ಅಕ್ಷರಧಾಮ ದೇಗುಲ ಪರಿಸರ ಇಲಾಖೆಯ ಪರವಾನಗಿ ಇಲ್ಲದೆ ನಿರ್ಮಾಣವಾಗಿದೆ ಎಂಬ ಆಘಾತಕಾರಿ ಅಂಶವನ್ನು ಪರಿಸರ ಸಚಿವ ಜೈರಾಮ್ ರಮೇಶ್ ಬಹಿರಂಗಪಡಿಸಿದ್ದಾರೆ. ಆದರೆ ಇನ್ನೇನು ಮಾಡುವಂತಿಲ್ಲ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಅಕ್ಷರಧಾಮವು ಪರಿಸರ ಇಲಾಖೆಯಿಂದ ಅನುಮತಿ ಪಡೆದಿರಲಿಲ್ಲ. ಅದು ಯಾವುದೇ ಅನುಮತಿ ಪತ್ರಕ್ಕೆ ಅರ್ಜಿ ಸಲ್ಲಿಸಿರಲಿಲ್ಲ ಎಂದು ಸುಮಾರು 30 ಎಕರೆ ಪ್ರದೇಶದಲ್ಲಿ ವಿಸ್ತರಿಸಿರುವ ದೇವಾಲಯದ ಕುರಿತು ಪತ್ರಕರ್ತರಿಗೆ ತಿಳಿಸಿದರು.

ಪರಿಸರ ಇಲಾಖೆಯ ನಿಯಮ ಉಲ್ಲಂಘಿಸಿ ದೇವಾಲಯ ನಿರ್ಮಿಸಲಾಗಿದೆಯೇ ಎಂಬ ಪ್ರಶ್ನೆಗೆ, ಈಗಾಗಲೇ ಉಲ್ಲಂಘಿಸಿಯಾಗಿದೆ ಇನ್ನೇನು ಮಾಡಲು ಸಾಧ್ಯವಿಲ್ಲ. ದೇವಾಲಯದ ಸಂಕೀರ್ಣವನ್ನು ಒಡೆಯಲು ಸಾಧ್ಯವಿಲ್ಲ, ಆದರೆ ಇನ್ನುಳಿದಿರುವ ನದಿ ದಡವನ್ನು ರಕ್ಷಿಸಬೇಕಿದೆ ಎಂದರು.

ಐದು ವರ್ಷಗಳ ಮೊದಲೇ ನಿರ್ಮಾಣಗೊಂಡಿದ್ದರೂ, 2005ರ ನವೆಂಬರ್ 6ರಂದು ಲೋಕಾರ್ಪಣೆಗೊಂಡ ಅಕ್ಷರಧಾಮ ದೇವಾಲಯ ಆರಂಭದಿಂದಲೂ ಪರಿಸರ ಕುರಿತ ಹಲವು ವಿವಾದಗಳಲ್ಲಿ ಸಿಲುಕಿತ್ತು.

ನದಿದಡ ರಕ್ಷಣೆ ಕುರಿತು ಗಂಭೀರವಾಗಿ ಚಿಂತಿಸಲು ಹೊರಟಿರುವ ಸಚಿವ ರಮೇಶ್, ಈಗಾಗಲೇ ಯಮುನಾ ನದಿ ದಡದಲ್ಲಿ ನಿರ್ಮಾಣಗೊಂಡಿರುವ ಕಟ್ಟಡಗಳಿಂದಾಗಿಯಾದರೂ ನಾವು ಎಚ್ಚೆತ್ತುಕೊಳ್ಳಬೇಕಿದೆ. ಅದು ಅಕ್ಷರಧಾಮ ದೇಗುಲವಿರಬಹುದು ಅಥಾವ ಇನ್ಯಾವುದೇ ಕಟ್ಟಡವಿರಬಹುದು. ಮುಂದಿನ ದಿನಗಳಲ್ಲಿ ಹೆಚ್ಚಿನ ಜಾಗರೂಕತೆ ವಹಿಸಬೇಕು, ನದಿತಟವನ್ನು ರಕ್ಷಿಸಬೇಕು ಎಂದರು.

ಅಕ್ಷರಧಾಮದ ಸಮೀಪದಲ್ಲೇ ನಿರ್ಮಿಸಲಾಗಿರುವ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಗ್ರಾಮ ಕೂಡ ಪರಿಸರ ನಿಯಮವನ್ನು ಉಲ್ಲಂಘಿಸಿದೆಯೇ ಎಂಬ ಪ್ರಶ್ನೆಗೆ, ಹೌದು, ಕ್ರೀಡಾಗ್ರಾಮಕ್ಕೂ ಪರಿಸರ ಇಲಾಖೆ ಪೂರ್ಣವಾಗಿ ಸಮ್ಮತಿ ನೀಡಿರಲಿಲ್ಲ. ಹಳೆಯದನ್ನು ಕೆದಕಲು ಇಷ್ಟವಿಲ್ಲ, ಈ ಸಂಬಂಧ ಎಲ್ಲಾ ಅನುಮತಿಗಳನ್ನು ಪತ್ರಗಳನ್ನು ಗೇಮ್ಸ್ ಸಮಿತಿ ಪಡೆದಿತ್ತು ಎಂದರು.
ಸಂಬಂಧಿತ ಮಾಹಿತಿ ಹುಡುಕಿ