ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಂದಿನ ಅಯೋಧ್ಯಾ ಚಳವಳಿ ಮತ್ತೆ ಮಾಡ್ತೇವೆ: ತೊಗಾಡಿಯಾ (VHP | Ram temple | Ayodhya | Pravin Togadia)
Bookmark and Share Feedback Print
 
90ರ ದಶಕದಲ್ಲಿ ನಡೆದ ಆಕ್ರಮಣಕಾರಿ ಅಯೋಧ್ಯಾ ಚಳವಳಿಯನ್ನು ವಿಶ್ವ ಹಿಂದೂ ಪರಿಷತ್ ಮತ್ತೆ ಆರಂಭಿಸಲಿದೆಯೇ? ಸ್ವತಃ ಅದರ ಹಿರಿಯ ನಾಯಕ ಪ್ರವೀಣ್ ತೊಗಾಡಿಯಾ ಹೇಳಿರುವ ಪ್ರಕಾರ ಹೌದು. ಹಿಂದೂಗಳ ಶ್ರದ್ಧಾಕೇಂದ್ರವೆನಿಸಿರುವ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಇಂತಹ ಹೋರಾಟಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಅಯೋಧ್ಯೆಯಲ್ಲಿನ ವಿವಾದಿತ 67 ಎಕರೆ ಪ್ರದೇಶದಲ್ಲಿ ರಾಮಮಂದಿರ ನಿರ್ಮಿಸುವ ಕುರಿತು ನಡೆಸಬೇಕೆಂದು ಉದ್ದೇಶಿಸಲಾಗಿರುವ ಚಳವಳಿಯ ರೂಪುರೇಷೆಗಳನ್ನು ಇದೇ ಶುಕ್ರವಾರ ಆರಂಭವಾಗಿರುವ, ಮೂರು ದಿನಗಳ ಕಾಲ ನಡೆಯಲಿರುವ ವಿಶ್ವ ಹಿಂದೂ ಪರಿಷತ್ ಟ್ರಸ್ಟಿಗಳ ಉನ್ನತ ಸಭೆಯು ನಿರ್ಧರಿಸಲಿದೆ ಎಂದು ತೊಗಾಡಿಯಾ ಹೇಳಿದರು.
PTI

ಈ ಸಭೆಯಲ್ಲಿ ಹಿಂದುತ್ವದ ವಿರುದ್ಧ ನಡೆಯುತ್ತಿರುವ ಪಿತೂರಿಗಳು, ಕ್ರೈಸ್ತ ಮಿಷನರಿಗಳ ಕುಕೃತ್ಯಗಳ ವಿರುದ್ಧ ಹೋರಾಟ ಮತ್ತು ಹಿಂದೂ ಭಯೋತ್ಪಾದನೆ ಆರೋಪಗಳ ಬಗ್ಗೆ ಚರ್ಚೆ ನಡೆಯಲಿದೆ.

ಗೋವಾದ ಪಣಜಿ ಸಮೀಪವಿರುವ ಪ್ರಸಿದ್ಧ ರಾಮನಾಥಿ ದೇವಳದಲ್ಲಿ ಮಾತನಾಡುತ್ತಿದ್ದ ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಅಯೋಧ್ಯೆಯನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು ಎಂದು ಸಂಸತ್ ಶಾಸನವನ್ನು ರೂಪಿಸಲು ನಾವು ಕೈಗೊಳ್ಳುವ ಚಳವಳಿಯು ಹಿಂದೂಗಳ ಸಾಮರ್ಥ್ಯವನ್ನು ತೋರಿಸಲಿದೆ ಎಂದರು.

ಈ ಬಾರಿಯ ಅಯೋಧ್ಯೆ ಚಳವಳಿಗೆ 'ಹನುಮಾನ್ ಶಕ್ತಿ ಜಾಗರಣ್' ಎಂದು ಹೆಸರಿಸಲಾಗಿದೆ. ಅದನ್ನು ಆರಂಭಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುತ್ತದೆ. 90ರ ದಶಕದಲ್ಲಿ ನಾವು ನಡೆಸಿದ ಹೋರಾಟದ ತದ್ರೂಪಿ ಹೋರಾಟವನ್ನು ನಾವು ನಡೆಸಲಿದ್ದೇವೆ. ಈ ಪ್ರಕರಣದಲ್ಲಿ ನಾವು ಒಂದು ಪಕ್ಷ ಅಲ್ಲದೇ ಇದ್ದರೂ, ರಾಮಮಂದಿರ ನಿರ್ಮಾಣವಾಗಬೇಕು ಎನ್ನುವುದು ನಮ್ಮ ಆಸೆ. ಕೇವಲ 35 ಅಡಿ ಜಾಗದಲ್ಲಿ ಮಂದಿರ ನಿರ್ಮಿಸಲಾಗದು. ನಮಗೆ ಸಂಪೂರ್ಣ 67 ಎಕರೆ ಬೇಕು ಎಂದು ತೊಗಾಡಿಯಾ ವಿವರಣೆ ನೀಡಿದರು.

ಅಯೋಧ್ಯೆ ಬೌದ್ಧರಿಗೆ ಸೇರಿದ್ದಂತೆ!
ಬಾಬ್ರಿ ಮಸೀದಿ ಇದ್ದ ಜಾಗದಲ್ಲಿ ಬೌದ್ಧ ವಿಹಾರ ಇತ್ತು. ಹಾಗಾಗಿ ವಿವಾದಿತ ಸ್ಥಳವನ್ನು ನಮಗೆ ಹಸ್ತಾಂತರಿಸಬೇಕು ಎಂದು ಬೌದ್ಧರು ಸರ್ವೋಚ್ಚ ನ್ಯಾಯಾಲಯಕ್ಕೆ ವಿಶೇಷ ರಜಾಕಾಲದ ಅರ್ಜಿ ಸಲ್ಲಿಸಿದ್ದಾರೆ.

ಅಯೋಧ್ಯೆ ಒಡೆತನದ ಕುರಿತು ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಬೌದ್ಧ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಉದಿತ್ ರಾಜ್ ಮತ್ತು ಅಖಿಲ ಭಾರತ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಂಘಟನೆಗಳ ಒಕ್ಕೂಟ ಈ ಅರ್ಜಿಯನ್ನು ಸುಪ್ರೀಂ ಕೋರ್ಟಿಗೆ ಸಲ್ಲಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ