ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದೇ ನಮ್ಮ ಗುರಿ: ಬಿಜೆಪಿ (BJP | Venkaiah Naidu | NDA | UPA)
Bookmark and Share Feedback Print
 
ಯುಪಿಎ ಸರಕಾರ ಹಲವು ಹಗರಣಗಳಲ್ಲಿ ಸಿಲುಕಿ ನಲುಗುತ್ತಿರುವುದನ್ನು ಕಂಡು ಗಹಗಹಿಸಿ ನಗುತ್ತಿರುವ ಬಿಜೆಪಿಯ ಮುಂದಿರುವುದು ಕೇಂದ್ರದಲ್ಲಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯುವುದು. ಆ ನಿಟ್ಟಿನಲ್ಲಿ ಇನ್ನಷ್ಟು ಹೋರಾಟ ನಡೆಸುವ ರೂಪುರೇಷೆಗಳು ಇಂದು ಅಸ್ಸಾಂನಲ್ಲಿ ಆರಂಭವಾಗಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಅಂತಿಮ ಹಂತ ತಲುಪಲಿವೆ.

ಗುವಾಹತಿಯಲ್ಲಿ ನಾಳೆಯೂ ಮುಂದುವರಿಯಲಿರುವ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಿರುವ ಬಿಜೆಪಿ ಹಿರಿಯ ನಾಯಕ ವೆಂಕಯ್ಯ ನಾಯ್ಡು ಪತ್ರಕರ್ತರೊಂದಿಗೆ ಮಾತನಾಡುತ್ತಾ, ಯುಪಿಎಗೆ ಪರ್ಯಾಯವಾಗಿ ಎನ್‌ಡಿಎ ದೆಹಲಿಯಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಕುರಿತು ಪಕ್ಷವು ವಿಸ್ತೃತ ಚರ್ಚೆ ನಡೆಸಲಿದೆ ಎಂದರು.

ಸಭೆಯಲ್ಲಿ ಪ್ರಮುಖವಾಗಿ ಚರ್ಚೆಯಾಗಲಿರುವ ವಿಷಯಗಳೆಂದರೆ ಭ್ರಷ್ಟಾಚಾರ, ಬೆಲೆಯೇರಿಕೆ, ಭಯೋತ್ಪಾದನೆ, ಬಾಂಗ್ಲಾದೇಶದಿಂದ ಅಸ್ಸಾಂ ಮೂಲಕ ಭಾರತಕ್ಕೆ ನಡೆಯುತ್ತಿರುವ ಒಳನುಸುಳುವಿಕೆ. ಬೆಲೆಯೇರಿಕೆ ಕುರಿತು ಸಂಸತ್ತಿನಲ್ಲಿ ದನಿಯೆತ್ತಲಾಗುತ್ತದೆ. ಅದನ್ನು ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಾಗುತ್ತದೆ ಎಂದು ನಾಯ್ಡು ತಿಳಿಸಿದ್ದಾರೆ.

ಅಸ್ಸಾಂ ಚುನಾವಣೆಗಳಲ್ಲಿ ಪ್ರಮುಖವಾಗಿರುವ ಅಲ್ಪಸಂಖ್ಯಾತರನ್ನು ಬಿಜೆಪಿ ಹೇಗೆ ತನ್ನತ್ತ ಸೆಳೆಯುತ್ತದೆ ಎಂಬ ಪ್ರಶ್ನೆಗೆ, ನಾವು ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರು ಎಂದು ಯೋಚಿಸುವುದಿಲ್ಲ. ನಮ್ಮ ಧೋರಣೆ ಒಟ್ಟಾರೆ ರಾಜಕೀಯ ಎಂದರು.

ಮುಂಬರುವ ಅಸ್ಸಾಂ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಜಯ ಸಾಧಿಸುವ ವಿಶ್ವಾಸವನ್ನು ಲೋಕಸಭೆಯ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಕೂಡ ವ್ಯಕ್ತಪಡಿಸಿದರು.

ನಾವು ಬಿಹಾರದಲ್ಲಿ ಗೆದ್ದಿದ್ದೇವೆ. ಈಗ ನಮ್ಮ ಗುರಿ ಅಸ್ಸಾಂ. ಇಲ್ಲಿ ಕೂಡ ಅದೇ ಪುನರಾವರ್ತನೆಯಾಗಲಿದೆ ಎಂದು ಸುಷ್ಮಾ ತಿಳಿಸಿದರು.

ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ನಡೆದಿರುವ ಗೇಮ್ಸ್ ಹಗರಣ ಮತ್ತು 2ಜಿ ಹಗರಣಗಳು ಬಿಜೆಪಿ ಪಾಲಿಗೆ ವರದಾನ. ಈ ನಡುವೆ ಬೊಫೋರ್ಸ್ ಲಂಚ ನೀಡಿರುವುದು ಇತ್ತೀಚೆಗಷ್ಟೇ ತೆರಿಗೆ ಇಲಾಖೆಯ ಮೂಲಕ ಬಹಿರಂಗವಾಗಿರುವುದು ಕೂಡ ಪ್ರತಿಪಕ್ಷಕ್ಕೆ ಆಗಿರುವ ಲಾಭ. ಇವೆಲ್ಲವನ್ನೂ ಸಮರ್ಥವಾಗಿ ತನ್ನ ಪರ ಲಾಭವಾಗುವಂತೆ ಮಾರ್ಪಡಿಸುವುದು ಕೇಸರಿ ಪಕ್ಷದ ಯೋಜನೆ.
ಸಂಬಂಧಿತ ಮಾಹಿತಿ ಹುಡುಕಿ