ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಾನು ಉಗ್ರರಿಗೆ ಸಹಕಾರ ನೀಡುತ್ತಿಲ್ಲ: ದಿಗ್ವಿಜಯ್ ಸ್ಪಷ್ಟನೆ (Digvijay Singh | Congress | Indira Gandhi | Hemant Karkare)
Bookmark and Share Feedback Print
 
ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ದಿವಂಗತ ಹೇಮಂತ್ ಕರ್ಕರೆಯವರ ಬಗ್ಗೆ ತಾನು ನೀಡಿರುವ ಹೇಳಿಕೆಗಳು ಭಾರತ ಅಥವಾ ಪಾಕಿಸ್ತಾನದಲ್ಲಿನ ಭಯೋತ್ಪಾದಕರಿಗೆ ಸಹಕಾರ ನೀಡುತ್ತವೆ ಎಂಬ ಬಿಜೆಪಿ ಆರೋಪವನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ತಳ್ಳಿ ಹಾಕಿದ್ದಾರೆ.

ಮುಂಬೈ ಉಗ್ರರ ದಾಳಿಯಲ್ಲಿ ಕರ್ಕರೆಯವರು ಹುತಾತ್ಮರಾಗುವ ಮೊದಲು ಅದೇ ದಿನ ಕರೆ ಮಾಡಿ, ತನಗೆ ಹಿಂದೂ ಬಲಪಂಥೀಯ ಸಂಘಟನೆಗಳಿಂದ ಜೀವ ಬೆದರಿಕೆ ಇದೆ ಎಂದು ಹೇಳಿದ್ದರು ಎಂದು ದಿಗ್ವಿಜಯ್ ಹೇಳಿ ತೀವ್ರ ವಿವಾದಕ್ಕೊಳಗಾಗಿದ್ದರು.
PTI

ಕರ್ಕರೆಯವರ ಬಗ್ಗೆ ನಾನು ನೀಡಿರುವ ಹೇಳಿಕೆಗಳು ಭಾರತ ಅಥವಾ ಪಾಕಿಸ್ತಾನದ ಭಯೋತ್ಪಾದಕರಿಗೆ ಸಹಕಾರ ನೀಡಿದೆ ಎಂಬ ವಾದವನ್ನು ನಾನು ಒಪ್ಪುವುದಿಲ್ಲ. ನನನ ಹೇಳಿಕೆಗಳು ಉಗ್ರರಿಗೆ ಸಹಕಾರ ನೀಡುವುದಿಲ್ಲ ಎಂದು ಮಧ್ಯಪ್ರದೇಶದ ರಾಜಧಾನಿಯಲ್ಲಿ ಮಾತನಾಡುತ್ತಾ ಸ್ಪಷ್ಟಪಡಿಸಿದರು.

ನನ್ನನ್ನು ಟೀಕಿಸಲು ಟೊಂಕ ಕಟ್ಟಿ ನಿಂತಿರುವ ಬಿಜೆಪಿ, ಆರೆಸ್ಸೆಸ್‌ ಮತ್ತು ಸಂಘ ಪರಿವಾರಕ್ಕೆ ನನ್ನ ಪ್ರಶ್ನೆಯೆಂದರೆ, ಅವರಿಗೆ ಸಂಬಂಧಪಟ್ಟವರಿಂದ ನಡೆದಿರುವ ಸ್ಫೋಟಗಳು ಮತ್ತು ಇತರ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡದ್ದರ ಬಗ್ಗೆ ನಿಮ್ಮ ಉತ್ತರ ಏನು ಎಂಬುದು ಎಂದರು.

ಸ್ವಾಮಿ ಅಸೀಮಾನಂದ್ ತಪ್ಪೊಪ್ಪಿಗೆ ಹೇಳಿಕೆಯಿಂದಾಗಿ ನಿಮ್ಮ ಮೇಲಿನ ಸಂಘ ಪರಿವಾರದ ವಾಗ್ದಾಳಿ ಮಹತ್ವ ಕಳೆದುಕೊಳ್ಳಲಿದೆ ಎಂದು ನಿಮಗೆ ಅನಿಸುತ್ತಿದೆಯೇ ಎಂದಾಗ, ಸ್ವಾಮಿ ಅಸೀಮಾನಂದ್‌ಗಿಂದ ದೊಡ್ಡ ಭಯೋತ್ಪಾದಕ ದಿಗ್ವಿಜಯ್ ಸಿಂಗ್ ಎಂದು ಸಂಘ ಪರಿವಾರ ಹೇಳಿದರೂ ಅಚ್ಚರಿಯಿಲ್ಲ ಎಂದರು.

ತುರ್ತು ಪರಿಸ್ಥಿತಿಯನ್ನು ಮರೆಯಬೇಕು...
ಕಾಂಗ್ರೆಸ್‌ನ ಕುಖ್ಯಾತ ತುರ್ತು ಪರಿಸ್ಥಿತಿಯನ್ನು ಜನ ಮರೆತು ಬಿಡಬೇಕಂತೆ. ಹೀಗೆಂದು ಹೇಳಿರುವುದು ದಿಗ್ವಿಜಯ್. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಸ್ವತಃ ಈ ಕುರಿತು ಕ್ಷಮೆ ಯಾಚಿಸಿರುವುದರಿಂದ ಜನ 1975ರ ಅವಸ್ಥೆಯನ್ನು ಮರೆಯಬೇಕು ಎಂದು ಕರೆ ನೀಡಿದರು.

ಜನಪ್ರಿಯ ಅಂಕಣಗಾರ್ತಿ ಜಯಂತಿ ಘೋಷ್ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ಸಿಂಗ್, ತನ್ನ ತಪ್ಪಿದ ನಡೆಗಾಗಿ ಸ್ವತಃ ಇಂದಿರಾ ಗಾಂಧಿ ಕ್ಷಮೆ ಯಾಚಿಸಿದ್ದಾರೆ. ಅದು ನಡೆದು ಹೋಗಿದೆ. ಕಳೆದು ಹೋದುದನ್ನು ಮರೆಯುವುದು ಯಾವತ್ತಿದ್ದರೂ ಒಳ್ಳೆಯದು ಎಂಬ ಹಾಸ್ಯಾಸ್ಪದ ಉತ್ತರ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ