ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಾರತಕ್ಕೆ ಕುಟುಂಬ ರಾಜಕಾರಣ ಅಗತ್ಯ: ರಾಹುಲ್ ಗಾಂಧಿ (Political dynasty | Rahul Gandhi | India | Congress)
Bookmark and Share Feedback Print
 
Nehru family tree
WD

ಇದು ಭಾರತೀಯರನ್ನು ಲೇವಡಿ ಮಾಡಿರುವ ರೀತಿಯೋ ಅಥವಾ ವಾಸ್ತವತೆಯ ವಿಶ್ಲೇಷಣೆಯೋ -- ಭಾರತದಲ್ಲಿ ಕುಟುಂಬ ರಾಜಕಾರಣ ಅಗತ್ಯ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, 'ಕಾಯುತ್ತಿರುವ ಪ್ರಧಾನ ಮಂತ್ರಿ' ರಾಹುಲ್ ಗಾಂಧಿ ಹೇಳಿರುವುದಂತೂ ಹೌದು!

ವಾರಣಾಸಿಯಲ್ಲಿನ ಬನಾರಸ್ ಹಿಂದೂ ಯುನಿವರ್ಸಿಟಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮಾಜಿ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಮರಿ ಮೊಮ್ಮಗ, ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಮೊಮ್ಮಗ, ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಮಗ ರಾಹುಲ್, ಭಾರತದಲ್ಲಿ ವಂಶ ರಾಜಕಾರಣ ಮಹತ್ವದ್ದು ಎಂದರು.

ರಾಹುಲ್ ಮದುವೆಯಾಗುವಂತೆ ಒತ್ತಾಯ...
ಈ ರೀತಿಯಾಗಿ ಒತ್ತಾಯಿಸಿದ್ದು ಅಲಹಾಬಾದ್‌ನ ಮೋತಿಲಾಲ್ ನೆಹರೂ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿಗಳು. ಆದಷ್ಟು ಬೇಗ ಮದುವೆಯಾಗಿ ಎಂದು ಭಿತ್ತಿಪತ್ರಗಳನ್ನು ಹಿಡಿದ ವಿದ್ಯಾರ್ಥಿಗಳು ಅಚ್ಚರಿ ಹುಟ್ಟಿಸಿದರು.

'ರಾಹುಲ್‌ಜೀ, ಶೀಘ್ರದಲ್ಲೇ ಮದುವೆಯಾಗುವುದಕ್ಕೆ ನಿಮಗೇನು ಅಡ್ಡಿ?' (ರಾಹುಲ್‌ಜೀ ಐಸೀ ಕ್ಯಾ ಮಜಬೂರಿ ಹೈ, ಶಾದಿ ಬಹುತ್ ಜರೂರಿ ಹೈ) ಎಂಬರ್ಥದಲ್ಲಿ ಬರೆದ ಭಿತ್ತಿಪತ್ರಗಳನ್ನು ಕಾಂಗ್ರೆಸ್ ವಿದ್ಯಾರ್ಥಿ ಘಟಕ ಎನ್‌ಎಸ್‌ಯುಐ ಸದಸ್ಯರು ಹಿಡಿದಿದ್ದರು. ಇದಕ್ಕೆ ಯಾವುದೇ ಉತ್ತರ ನೀಡುವ ಗೋಜಿಗೆ ರಾಹುಲ್ ಮುಂದಾಗಲಿಲ್ಲ.

ರಾಹುಲ್ ಪ್ರತಿಕೃತಿ ದಹನ...
ರಾಹುಲ್ ಗಾಂಧಿ ಭೇಟಿಯನ್ನು ಖಂಡಿಸಿ ಭಾರತೀಯ ಜನತಾ ಯುವ ಮೋರ್ಚಾ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದ್ದಲ್ಲದೆ, ಅವರ ಪ್ರತಿಕೃತಿಯನ್ನು ದಹಿಸಿ ಘೋಷಣೆಗಳನ್ನು ಕೂಗಿದರು.

ರಾಹುಲ್ ಗಾಂಧಿ ದೇಶದ ಯುವ ಜನತೆಯ ಹಾದಿ ತಪ್ಪಿಸುತ್ತಿದ್ದಾರೆ. ದೇಶದ ಪ್ರಗತಿಯ ಕುರಿತು ಅವರಿಗೆ ಜ್ಞಾನವೇ ಇಲ್ಲ. ಅವರು ಯುನಿವರ್ಸಿಟಿಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳ ಜತೆ ಸಂವಾದ ನಡೆಸುವ ಅಗತ್ಯವೇ ಇಲ್ಲ. ನಿಮ್ಮನ್ನು ಚಂದ್ರನಲ್ಲಿಗೆ ಕರೆದುಕೊಂಡು ಹೋಗುತ್ತೇನೆ ಎಂದು ಆಶ್ವಾಸನೆ ನೀಡುವುದಷ್ಟೇ ಈಗ ಅವರ ಕೆಲಸ. ಅದರ ಅಗತ್ಯವಿಲ್ಲ ಎಂದು ಸಂಘಟನೆಯ ಸದಸ್ಯರು ಟೀಕಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ