ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಥಾಮಸ್ ವಿಚಾರಣೆಗೆ ಅಸ್ತು; ಕೇಂದ್ರಕ್ಕೆ ಮತ್ತೆ ಮುಜುಗರ (Supreme Court | palmolein case | P.J. Thomas | CVC)
Bookmark and Share Feedback Print
 
PTI
PTI
ಕೇಂದ್ರ ಜಾಗೃತ ಆಯುಕ್ತ ಪಿ.ಜೆ. ಥಾಮಸ್ ವಿಚಾರದಲ್ಲಿ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ಹಲವಾರು ಬಾರಿ ಮುಜುಗರಕ್ಕೊಳಗಾಗಿದೆ. ಆ ಸರದಿಯಲ್ಲಿ ಇದು ಮತ್ತೊಂದು. ಥಾಮಸ್ ಆರೋಪಿಯಾಗಿರುವ ಪಾಮೋಲಿವ್ ಆಮದು ಹಗರಣದ ವಿಚಾರಣೆಗಿದ್ದ ತಡೆಯಾಜ್ಞೆಯನ್ನು ಸರ್ವೋಚ್ಚ ನ್ಯಾಯಾಲಯವು ತೆರವುಗೊಳಿಸಿರುವುದೇ ಪ್ರಸಕ್ತ ಸೃಷ್ಟಿಯಾಗಿರುವ ನೂತನ ವಿದ್ಯಮಾನ.

ಕೇರಳ ಮಾಜಿ ಮುಖ್ಯಮಂತ್ರಿ ದಿವಂಗತ ಕೆ.ಕರುಣಾಕರಣ್ ಮತ್ತು ಥಾಮಸ್ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿರುವ ಬಹುಕೋಟಿ ಪಾಮೋಲಿವ್ ಆಮದು ಹಗರಣದ ವಿಚಾರಣೆಯನ್ನು ಮುಂದುವರಿಸಲು ಕೇರಳದ ನ್ಯಾಯಾಲಯವೊಂದಕ್ಕೆ ಸುಪ್ರೀಂ ಕೋರ್ಟ್ ಅನುಮತಿಸಿದೆ.

ಕರುಣಾಕರಣ್ ಅವರು ಡಿಸೆಂಬರ್ 23ರಂದು ನಿಧನರಾಗಿರುವುದರಿಂದ, ಈ ಹಗರಣಕ್ಕೆ ಸಂಬಂಧಿಸಿ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅಫ್ತಾಬ್ ಆಲಂ ಮತ್ತು ಆರ್.ಎಂ. ಲೋಧಾ ಅವರನ್ನೊಳಗೊಂಡ ನ್ಯಾಯಪೀಠ ವಜಾಗೊಳಿಸಿದೆ.

ಎಂಟು ಮಂದಿ ಆರೋಪಿಗಳು ಎಂದು ಹೆಸರಿಸಲಾಗಿದ್ದ ಪಾಮೋಲಿವ್ ಆಮದು ಪ್ರಕರಣದ ವಿಚಾರಣೆ ಸಿಬಿಐ ನಡೆಸುತ್ತಿತ್ತು. ಇದಕ್ಕೆ ಆಗಸ್ಟ್ 3, 2007ರಂದು ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತ್ತು. ಇದರ ವಿರುದ್ಧ ಕೇರಳ ಸರಕಾರವು ಮೇಲ್ಮನವಿ ಮಾಡಿಕೊಂಡಿತ್ತು.

ಕರುಣಾಕರನ್, ಕೇರಳ ಆಹಾರ ಕಾರ್ಯದರ್ಶಿಯಾಗಿದ್ದ ಥಾಮಸ್ ಸೇರಿದಂತೆ ರಾಜ್ಯದ ಏಳು ಮಂದಿ ಹಿರಿಯ ಅಧಿಕಾರಿಗಳ ವಿರುದ್ಧ

2000ನೇ ಇಸವಿಯಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿತ್ತು.

ಅಂತರಾಷ್ಟ್ರೀಯ ಬೆಲೆಗಿಂತ ಹೆಚ್ಚು ಬೆಲೆಯನ್ನು ತೆತ್ತು ಪಾಮೋಲಿವ್‌ ಅನ್ನು ಸಿಂಗಾಪುರದ ಕಂಪನಿಯೊಂದರಿಂದ ಆಮದು ಮಾಡಿಕೊಳ್ಳಲಾಗಿತ್ತು. ಮಾರುಕಟ್ಟೆ ಬೆಲೆ ಪ್ರತಿ ಟನ್ನಿಗೆ 392.25 ಡಾಲರ್ ಇದ್ದ ಹೊರತಾಗಿಯೂ, 405 ಡಾಲರುಗಳಂತೆ ಖರೀದಿಸಲು ಕರುಣಾಕರನ್ ಸಂಪುಟವು ಸಮ್ಮತಿ ನೀಡಿತ್ತು.

ಪಾಮೋಲಿವ್ ಹಗರಣ, 2ಜಿ ಹಗರಣಗಳಲ್ಲಿ ಥಾಮಸ್ ಅವರನ್ನು ರಕ್ಷಿಸುತ್ತಾ ಬಂದಿರುವ ಕೇಂದ್ರಕ್ಕೆ ಈಗ ಸುಪ್ರೀಂ ನೀಡಿರುವ ಆದೇಶ ಮತ್ತೊಂದು ಬಿಸಿ ತುಪ್ಪವಾಗಿ ಪರಿಣಮಿಸಿದೆ. ಬಿಜೆಪಿಯ ತೀವ್ರ ವಿರೋಧದ ಹೊರತಾಗಿಯೂ ಅವರನ್ನು ಪ್ರಧಾನಿ ಸಿವಿಸಿ ಆಯುಕ್ತರನ್ನಾಗಿ ನೇಮಕ ಮಾಡಿದ್ದರು. ಇತ್ತೀಚೆಗಷ್ಟೇ ಈ ಕುರಿತು ಸುಪ್ರೀಂ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ