ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಜ್ಮೀರ್ ದರ್ಗಾಕ್ಕೆ ಪಾಕಿಸ್ತಾನದ ಡೊನೇಷನ್ ಬೇಡವಂತೆ (Ajmer Dargah | Pak donations | India | Khwaja Moinuddin Chisti)
Bookmark and Share Feedback Print
 
ಅಜ್ಮೀರ್ ದರ್ಗಾಕ್ಕೆ ಆರ್ಥಿಕ ಸಹಕಾರ ಮಾಡಿ ಎಂದು ಪಾಕಿಸ್ತಾನದಲ್ಲಿ ಹಲವು ಸಂಘಟನೆಗಳು ಹಣ ಸಂಗ್ರಹಿಸುತ್ತಿವೆ. ಟಿವಿಗಳಲ್ಲಿ ಜಾಹೀರಾತುಗಳನ್ನು ಪ್ರಕಟಿಸಿ ಹಣ ಸಂಗ್ರಹಿಸಲಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಅಜ್ಮೀರ್ ದರ್ಗಾ ಸಮಿತಿಯು, ಯಾರೂ ಧನ ಸಹಾಯ ಮಾಡದಂತೆ ಮನವಿ ಮಾಡಿಕೊಂಡಿದೆ.

ಖ್ವಾಜಾ ಮೊಯಿನುದ್ದೀನ್ ಕಿಸ್ತಿ ಹೆಸರಿನಲ್ಲಿ ಪಾಕಿಸ್ತಾನ ಮೂಲದ ಕೆಲವು ಸಂಘ-ಸಂಸ್ಥೆಗಳು ಹಣ ಸಂಗ್ರಹ ಮಾಡುತ್ತಿವೆ. ಇದನ್ನು ನಿಲ್ಲಿಸಬೇಕು, ನಾವು ಪಾಕಿಸ್ತಾನದಲ್ಲಿ ಧನ ಸಂಗ್ರಹ ಮಾಡುತ್ತಿಲ್ಲ ಎಂದು ಭಾರತದಲ್ಲಿನ ಪಾಕಿಸ್ತಾನದ ರಾಯಭಾರ ಕಚೇರಿ ಹಾಗೂ ಇಸ್ಲಾಮಾಬಾದ್‌ನಲ್ಲಿನ ಭಾರತೀಯ ರಾಯಭಾರ ಕಚೇರಿಗೆ ಅಜ್ಮೀರ್ ದರ್ಗಾದ ಆಡಳಿತಾಧಿಕಾರಿ ಅಹ್ಮದ್ ರಾಜಾ ಮಾಹಿತಿ ನೀಡಿದ್ದಾರೆ.

ಖ್ವಾಜಾ ಹೆಸರಿನಲ್ಲಿ ಪಾಕಿಸ್ತಾನದಲ್ಲಿ ಭಾರೀ ಪ್ರಮಾಣದಲ್ಲಿ ಧನ ಸಂಗ್ರಹ ಮಾಡಲಾಗುತ್ತಿದೆ. ಟಿವಿಗಳಲ್ಲಿ ಜಾಹೀರಾತು ನೀಡಲಾಗುತ್ತದೆ. ಇದಕ್ಕೆ ನಿರ್ದಿಷ್ಟ ಉದಾಹರಣೆಯನ್ನೇ ನೀಡುವುದಾದರೆ, ಅಜ್ಮೀರ್ ದರ್ಗಾದ ಆಡಳಿತ ಮಂಡಳಿಯ ಹೆಸರಿನಲ್ಲಿ 'ಕ್ಯೂಟಿವಿ'ಯಲ್ಲಿ ಧನ ಸಹಾಯಕ್ಕಾಗಿ ಮನವಿ ಮಾಡಿರುವುದು. ಖ್ವಾಜಾದ ಶ್ರದ್ಧಾಳುಗಳು ತಮ್ಮನ್ನು ಸಂಪರ್ಕಿಸಬಹುದು ಎಂದು ಇಸ್ಲಾಮಾಬಾದ್ ಮೂಲದ ಸಂಸ್ಥೆಗಳು ಜಾಹೀರಾತು ನೀಡಿವೆ. ಇದನ್ನು ಭಾರತದ 'ಕ್ಯೂಟಿವಿ'ಯಲ್ಲಿ ನಿರಂತರ ಪ್ರಸಾರ ಮಾಡಲಾಗುತ್ತಿದೆ ಎಂದು ರಾಜಾ ಆರೋಪಿಸಿದ್ದಾರೆ.

1955ರ ದರ್ಗಾ ಕಾಯ್ದೆ ಪ್ರಕಾರ ಖ್ವಾಜಾ ಹೆಸರಿನಲ್ಲಿ ಧನ ಸಂಗ್ರಹ ಮಾಡುವ ಅಥವಾ ಧನ ಸಹಾಯ ಸ್ವೀಕರಿಸುವ ಹಕ್ಕು ಇರುವುದು ಅಜ್ಮೀರ್ ದರ್ಗಾ ಸಮಿತಿಯಲ್ಲಿ ಮಾತ್ರ.

ಅಜ್ಮೀರ್ ದರ್ಗಾದ ಅಧಿಕಾರಿಗಳ ಪ್ರಕಾರ ಪಾಕಿಸ್ತಾನ ಮೂಲದ ಖ್ವಾಜಾ ಗರೀಪ್ ನವಾಜ್ ವೆಲ್ಫೇರ್ ಸಂಸ್ಥೆಗಳು ಪೂರ್ವ ಏಷಿಯಾವನ್ನು ಗುರಿಯಾಗಿಟ್ಟುಕೊಂಡಿವೆ. ಪಾಕಿಸ್ತಾನ ಸರಕಾರದಲ್ಲಿ ನೋಂದಣಿ ಮಾಡಿಸಿಕೊಂಡು, ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸುತ್ತಿದ್ದಾರೆ.

ಈ ಬಗ್ಗೆ ರಾಯಭಾರ ಕಚೇರಿಗಳಿಗೆ ದರ್ಗಾ ಸಮಿತಿಯು ವಿವರಗಳ ಜತೆ ಪುರಾವೆಗಳನ್ನು ಕೂಡ ಒದಗಿಸಿದೆ.

ಆ ಟ್ರಸ್ಟ್‌ಗಳನ್ನು ನಡೆಸುತ್ತಿರುವ ಮೌಲವಿಗಳನ್ನು ನಾವು ಗುರುತಿಸಿದ್ದೇವೆ. ಅವರ ಹೆಸರುಗಳನ್ನು ನಾವು ರಾಯಭಾರ ಕಚೇರಿಗೆ ನೀಡಲಾಗಿರುವ ದೂರಿನಲ್ಲಿ ನಮೂದಿಸಿದ್ದೇವೆ. ಜಾಹೀರಾತು ಮೊದಲ ಬಾರಿ ನವೆಂಬರ್ 23ರಂದು ಪ್ರಸಾರವಾದ ನಂತರ ಈ ಬಗ್ಗೆ ವಿದೇಶಾಂಗ ಸಚಿವಾಲಯಕ್ಕೆ ಮಾಹಿತಿ ನೀಡಲಾಗಿದೆ ಎಂದು ರಾಜಾ ತಿಳಿಸಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ
ಸಂಬಂಧಿತ ಮಾಹಿತಿ ಹುಡುಕಿ