ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮತದಾನದ ಕನಿಷ್ಠ ವಯೋಮಿತಿ 18ರಿಂದ 16ಕ್ಕೆ ಇಳಿಕೆ? (CEC | Voting Age | Election Commission | YS Quraishi)
Bookmark and Share Feedback Print
 
ಮತದಾನ ಮಾಡುವ ಕನಿಷ್ಠ ವಯಸ್ಸನ್ನು 18ರಿಂದ 16ಕ್ಕೆ ಇಳಿಸಲಾಗುತ್ತದೆಯೇ? ಇಂತಹ ಯೋಚನೆಯೊಂದು ಚುನಾವಣಾ ಆಯೋಗದ ಮುಂದಿದೆ. ಆ ಪ್ರಸ್ತಾವನೆಯ ಕುರಿತು ತಾನು ಚಿಂತಿಸುತ್ತಿರುವುದಾಗಿ ಮುಖ್ಯ ಚುನಾವಣಾ ಆಯುಕ್ತ ವೈ.ಎಸ್. ಖುರೇಷಿ ತಿಳಿಸಿದ್ದಾರೆ.

ಒರಿಸ್ಸಾ ರಾಜಧಾನಿ ಭುವನೇಶ್ವರದಲ್ಲಿ ಮಾತನಾಡುತ್ತಿದ್ದ ಅವರು, ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚು ಯುವಕ-ಯುವತಿಯರು ಪಾಲ್ಗೊಳ್ಳಲಿದ್ದಾರೆ ಎಂಬುದು ಕಂಡು ಬಂದಲ್ಲಿ ಮತದಾನದ ಕನಿಷ್ಠ ವಯೋಮಿತಿಯನ್ನು 18ರಿಂದ 16ಕ್ಕೆ ಇಳಿಕೆ ಮಾಡುವ ಕುರಿತು ನಾವು ಸರಕಾರಕ್ಕೆ ಶಿಫಾರಸು ಮಾಡಬಹುದು ಎಂದರು.
PTI

ಶೇ.35ಕ್ಕಿಂತಲೂ ಹೆಚ್ಚು ಮತದಾರರು ಯುವ ಜನತೆಯೇ ಆಗಿರುವ ಹೊರತಾಗಿಯೂ, ಮತದಾನದಲ್ಲಿ ಅವರ ಪಾಲ್ಗೊಳ್ಳುವಿಕೆ ಅತೀ ಕಡಿಮೆ. ಈ ಹಿಂದೆ ಇದ್ದ ಮತದಾನದ ಕನಿಷ್ಠ ವಯೋಮಿತಿಯನ್ನು 21ರಿಂದ 18ಕ್ಕೆ ಇಳಿಕೆ ಮಾಡಿದರೂ, ನಿರೀಕ್ಷೆಯಷ್ಟು ಮತದಾನ ಆ ವರ್ಗದಿಂದ ನಡೆದಿಲ್ಲ ಎಂದು ವಾಸ್ತವ ಅಂಶಗಳನ್ನು ಖುರೇಷಿ ಮುಂದಿಟ್ಟರು.

ವರ್ತಮಾನ ಸ್ಥಿತಿಯಲ್ಲಿ ಯುವ ಜನತೆ ತಂತ್ರಜ್ಞಾನದಲ್ಲಿ ಹೆಚ್ಚು ಪರಿಣತರಾಗಿರುವುದರಿಂದ ಮತ್ತು ವಿದ್ಯಮಾನಗಳ ಕುರಿತು ಹೆಚ್ಚು ತಿಳುವಳಿಕೆಯನ್ನು ಹೊಂದಿರುವುದರಿಂದ ಮತದಾನದ ಕನಿಷ್ಠ ವಯಸ್ಸನ್ನು 16 ವರ್ಷಗಳಿಗೆ ಇಳಿಕೆ ಮಾಡುವುದರಿಂದ ಏನೂ ಸಮಸ್ಯೆಯಿಲ್ಲ ಎಂದ ಖುರೇಷಿ, ವಿದ್ಯಾರ್ಥಿಗಳು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತಾಗಲು ಜಾಗೃತಿ ಮೂಡಿಸುವ ಕೆಲಸವನ್ನು ಮುಂದಿನ ದಿನಗಳಲ್ಲಿ ಚುನಾವಣಾ ಆಯೋಗ ಮಾಡಲಿದೆ ಎಂದು ತಿಳಿಸಿದರು.

ಈ ಜಾಗೃತಿ ಕಾರ್ಯಕ್ರಮದಲ್ಲಿ ಸಭೆಗಳು, ಮೆರವಣಿಗೆಗಳು, ವಿಚಾರಗೋಷ್ಠಿಗಳು ಮತ್ತು ಇತರ ಚಟುವಟಿಕೆಗಳಿರುತ್ತವೆ. ಚುನಾವಣೆಯಲ್ಲಿ ಪಾಲ್ಗೊಳ್ಳಲು ಹೊಸ ಪೀಳಿಗೆಯನ್ನು ಸೆಳೆಯುವುದೇ ನಮ್ಮ ಉದ್ದೇಶ ಎಂದರು.

ಐಐಟಿ ಮತ್ತು ಐಐಎಂನಂತೆ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಡೆಮಾಕ್ರಟಿಕ್ ಸ್ಟಡೀಸ್ (ಐಐಡಿ) ಅನ್ನು ಪರಿಚಯಿಸುವ ಬಗ್ಗೆ ಚುನಾವಣಾ ಆಯೋಗ ಗಂಭೀರವಾಗಿ ಕಾರ್ಯ ನಿರ್ವಹಿಸುತ್ತಿದೆ. ಸರಕಾರಿ ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಇತರರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಪ್ರಕ್ರಿಯೆಗಳ ಬಗ್ಗೆ ವಿವರಿಸುವ ಕಾರ್ಯ ಆ ಮೂಲಕ ನಡೆಯುತ್ತದೆ ಎಂದು ಆಯುಕ್ತರು ವಿವರಣೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ