ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರೈತರ ಆತ್ಮಹತ್ಯೆಗೆ ಅವರೇ ಮಾಡಿದ ಪಾಪ ಕಾರಣ: ಸಚಿವ (Past sins | farmer suicides | Madhya Pradesh | Ramkrishna Kusmaria)
Bookmark and Share Feedback Print
 
ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಯಾಕೆ ಎಂಬುದನ್ನು ಮಧ್ಯಪ್ರದೇಶದ ಬಿಜೆಪಿ ಸಚಿವರೊಬ್ಬರು 'ಪತ್ತೆ' ಮಾಡಿದ್ದಾರೆ. ಇದಕ್ಕೆ ಕಾರಣ ರೈತರು ಈ ಹಿಂದೆ ಮಾಡಿರುವ ಪಾಪವಂತೆ!

ಶಿವರಾಜ್ ಸಿಂಗ್ ಚೌಹಾನ್ ನೇತೃತ್ವದ ಬಿಜೆಪಿ ಸರಕಾರವು ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆಯನ್ನು ತಡೆಯಲು ಹರಸಾಹಸ ಪಡುತ್ತಿರುವ ಹೊತ್ತಿನಲ್ಲಿ ಅವರದ್ದೇ ಸರಕಾರದ ಸಚಿವ, ಅದರಲ್ಲೂ ಕೃಷಿ ಸಚಿವ ಇಂತಹ ಹೇಳಿಕೆಯನ್ನು ನೀಡಿ ತೀವ್ರ ವಿವಾದಕ್ಕೆ ತುತ್ತಾಗಿದ್ದಾರೆ.
PTI

ರೈತರು ಮಿತಿಮೀರಿದ ಪ್ರಮಾಣದಲ್ಲಿ ರಾಸಾಯನಿಕಗಳನ್ನು ಬಳಸಿದ ಕಾರಣದಿಂದ ಜಮೀನು ಫಲವತ್ತತೆ ಕಳೆದುಕೊಂಡಿದೆ. ಅದೇ ಕಾರಣದಿಂದ ಈಗ ಇಂತಹ ಸ್ಥಿತಿ ಉದ್ಭವಿಸಿದೆ ಎಂದು ಸಚಿವ ರಾಮಕೃಷ್ಣ ಕುಸ್ಮಾರಿಯಾ ಹೇಳಿರುವುದು.

ರೈತರು ಈಗ ಏನು ಎದುರಿಸುತ್ತಿದ್ದಾರೋ, ಅದಕ್ಕೆ ಕಾರಣ ಅವರು ಈ ಹಿಂದೆ ನಡೆದುಕೊಂಡಿರುವ ರೀತಿ. ಕಳೆದ ಹಲವು ವರ್ಷಗಳಿಂದ ಭಾರೀ ಪ್ರಮಾಣದಲ್ಲಿ ರಸಗೊಬ್ಬರ ಬಳಸಿದ ಪರಿಣಾಮ ಇಂದು ಜಮೀನು ಫಲವತ್ತತೆಯನ್ನು ಕಳೆದುಕೊಂಡಿದೆ. ಭೂಮಿಯ ಗುಣಮಟ್ಟ ಕುಸಿದಿದೆ. ಇದು ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯನ್ನು ಹೊಂದಿಲ್ಲ. ಅದೇ ಕಾರಣದಿಂದ ಕೀಟ ಬಾಧೆ ಹೆಚ್ಚಾಗಿದೆ ಮತ್ತು ಬೆಳೆ ಬೆಳೆಯುತ್ತಿಲ್ಲ ಎಂದು ಕುಸ್ಮಾರಿಯಾ ಪತ್ರಕರ್ತರ ಜತೆ ಮಾತನಾಡುತ್ತಾ ಆರೋಪಿಸಿದ್ದರು.

ತಾನು ನೀಡಿರುವ ಹೇಳಿಕೆ ತೀವ್ರ ವಿವಾದಕ್ಕೆ ತುತ್ತಾಗುತ್ತಿರುವಂತೆ ಎಚ್ಚೆತ್ತುಕೊಂಡಿರುವ ಸಚಿವ ರಾಮಕೃಷ್ಣ, ನನ್ನ ಹೇಳಿಕೆಯನ್ನು ತಿರುಚಲಾಗಿದೆ. ನಾನು ಹಾಗೆ ಹೇಳಿಯೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗೆ ದೆಮೋಹ್, ರೈಸೆನ್ ಮತ್ತು ಬೆತೂಲ್ ಜಿಲ್ಲೆಗಳಲ್ಲಿ ಕೆಲವೊಂದು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಸಾಲಬಾಧೆಯೇ ಕಾರಣ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ಆದರೆ ಇದನ್ನು ತಳ್ಳಿ ಹಾಕಿದ್ದ ರಾಜ್ಯ ಸರಕಾರ, ವೈಯಕ್ತಿಕ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ವಾದಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ