ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಈ ವರ್ಷ ರಾಹುಲ್ ಗಾಂಧಿ, ಈಶಾ ಮದುವೆ ಆಗ್ಲೇ ಬೇಕು! (Rahul Gandhi | Matrimonial portal | Shaadi | Celebrity weddings)
Bookmark and Share Feedback Print
 
ಪ್ರತಿ ಬಾರಿ ಒಂದಿಲ್ಲೊಂದು ಕಾರಣ ನೀಡಿ ಮದುವೆಯನ್ನು ಮುಂದಕ್ಕೆ ಹಾಕುತ್ತಾ ಬಂದಿರುವ ಕಾಂಗ್ರೆಸ್‌ನ 'ಯುವ'ರಾಜ ರಾಹುಲ್ ಗಾಂಧಿಗೆ ಈ ವರ್ಷ 41 ತುಂಬುತ್ತದೆ. ಈ ಹೊತ್ತಿನಲ್ಲೂ ಮದುವೆಯಾಗದಿದ್ದರೆ ಹೇಗೆ? ಹೀಗೆ ಉಳಿದು ಹೋದರೆ ಮತ್ತೊಬ್ಬ ಅವಿವಾಹಿತ ಪ್ರಧಾನ ಮಂತ್ರಿಯನ್ನು ಈ ದೇಶ ಕಾಣಬೇಕಾಗುತ್ತದೆ.

ಇದು ಸಹಜವಾಗಿಯೇ ಜನತೆಯನ್ನು ಮತ್ತು ಅವರ ಅಭಿಮಾನಿಗಳನ್ನು ಚಿಂತೆಗೀಡು ಮಾಡಿರುವುದು ಖಚಿತವಾಗಿದೆ. ರಾಹುಲ್ ಗಾಂಧಿ 2011ರ ವರ್ಷದಲ್ಲಿ ಮದುವೆ ಆಗಲೇ ಬೇಕು ಎಂದು ಒತ್ತಾಯಿಸಿದ್ದಾರೆ.

PTI
ಇದು ನಡೆದಿರುವುದು ವೈವಾಹಿಕ ಅಂತರ್ಜಾಲ ತಾಣ 'ಶಾದಿ ಡಾಟ್ ಕಾಮ್' ನಡೆಸಿರುವ ಸಮೀಕ್ಷೆಯೊಂದರಲ್ಲಿ. 2011ರಲ್ಲಿ ಬಹುತೇಕ ಮದುವೆಯಾಗುವ ದೇಶದ ಯುವಕ ಮತ್ತು ಯುವತಿ ಯಾರು ಎಂದು ಪ್ರಶ್ನೆ ಕೇಳಲಾಗಿತ್ತು. ಮೊದಲ ಪ್ರಶ್ನೆಗೆ ಕಣ್ಮುಚ್ಚಿ ಬಂದಿರುವ ಉತ್ತರ ರಾಹುಲ್ ಗಾಂಧಿ. ಎರಡನೇ ಪ್ರಶ್ನೆಗೆ ಹೇಮಮಾಲಿನಿ-ಧರ್ಮೇಂದ್ರ ಪುತ್ರಿ ಈಶಾ ಡಿಯೋಲ್ ಎಂಬ ಉತ್ತರ ಬಂದಿದೆ.

ಮದುವೆಯ ಪ್ರಶ್ನೆ ಬಂದಾಗಲೆಲ್ಲ ನುಣುಚಿಕೊಳ್ಳುತ್ತಿರುವ ರಾಹುಲ್ ಗಾಂಧಿ ಇತ್ತೀಚೆಗಷ್ಟೇ ಮಾತನಾಡುತ್ತಾ, ಶೀಘ್ರದಲ್ಲೇ ಶುಭ ಸುದ್ದಿ ನೀಡುವುದಾಗಿ ಹೇಳಿದ್ದರು. ಎರಡು ತಿಂಗಳ ಹಿಂದೆ ಲಕ್ನೋದಲ್ಲಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸುತ್ತಿದ್ದಾಗ ಬಂದ ಪ್ರಶ್ನೆಗೆ ಹೀಗೆಂದು ಉತ್ತರಿಸಿದ್ದರು. ಶೀಘ್ರದಲ್ಲೇ ಶುಭ ಸುದ್ದಿ ಕೊಡುತ್ತೇನೆ, ಮದುವೆಯನ್ನು ತುಂಬಾ ಸಮಯ ಮುಂದೂಡುವುದಿಲ್ಲ ಎಂದಿದ್ದರು.

ಕೆಲ ವರ್ಷಗಳ ಹಿಂದೆ ರಾಹುಲ್ ಗಾಂಧಿ ಸ್ಪೇನ್ ಯುವತಿ ವೆರೋನಿಕಾ ಜತೆ ಸಂಬಂಧ ಹೊಂದಿದ್ದರು. ತನ್ನ ತಂದೆಯಂತೆಯೇ ರಾಹುಲ್ ಕೂಡ ವಿದೇಶಿ ಯುವತಿಯನ್ನೇ ಮದುವೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವಾದರೂ, ಇತ್ತೀಚೆಗೆ ಇದರಲ್ಲಿ ಏನಾದರೂ ಬದಲಾವಣೆಗಳನ್ನು ಮಾಡಲಾಗಿದೆಯೇ ಎಂಬ ಸಂಶಯಗಳು ಹುಟ್ಟಿವೆ.

ಮೂಲಗಳ ಪ್ರಕಾರ ವೆರೋನಿಕಾ ಜತೆಗಿನ ಸಂಬಂಧವನ್ನು ರಾಹುಲ್ ಗಾಂಧಿ ಕಡಿದುಕೊಂಡಿದ್ದಾರೆ. ಅದಕ್ಕಿರುವ ಕಾರಣ ಕುಟುಂಬ ಮತ್ತು ಪಕ್ಷದಲ್ಲಿನ ಒತ್ತಡ. ರಾಜೀವ್ ಗಾಂಧಿ ವಿದೇಶಿ ಯುವತಿಯನ್ನು (ಸೋನಿಯಾ ಗಾಂಧಿ) ಮದುವೆಯಾದ ನಂತರ ಎದುರಿಸಿದ ಸಂಕಷ್ಟಗಳನ್ನು ಮತ್ತೆ ರಾಜಕೀಯದಲ್ಲಿ ರಾಹುಲ್ ಎದುರಿಸಬೇಕಾಗುವ ಭೀತಿಯ ಹಿನ್ನೆಲೆಯಲ್ಲಿ ಇಂತಹ ಬೆಳವಣಿಗೆ ಕಾಂಗ್ರೆಸ್ ನಾಯಕನ ವೈಯಕ್ತಿಕ ಜೀವನದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.

ಬಿಡಿ, ಶಾದಿ.ಕಾಮ್ ನಡೆಸಿರುವ ಸಮೀಕ್ಷೆಯ ಪ್ರಮುಖ ಅಂಶಗಳನ್ನು ನೋಡೋಣ. ಐದು ವಿಭಾಗಗಳಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿತ್ತು. ಉತ್ತರಿಸಿದ್ದು ಮುಂಬೈಗರು ಮಾತ್ರ. ಉಳಿದೆಡೆ ಸಮೀಕ್ಷೆ ನಡೆಸಿರಲಿಲ್ಲ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

2011ರಲ್ಲಿ ಮದುವೆಯಾಗುವ ಪುರುಷರು:
* ರಾಹುಲ್ ಗಾಂಧಿ 34.69%
* ವಿಜೇಂದರ್ ಸಿಂಗ್ 18.36%
* ನೆಸ್ ವಾಡಿಯಾ 16.32%
* ರಾಹುಲ್ ಖನ್ನಾ 12.24%
* ಕುನಾಲ್ ಕಪೂರ್ 10.23%
* ರಾಹುಲ್ ಬೋಸ್ 8.16%

2011ರಲ್ಲಿ ಮದುವೆಯಾಗುವ ಮಹಿಳೆಯರು:
* ಈಶಾ ಡಿಯೋಲ್ - 40.81%
* ಸುಷ್ಮಿತಾ ಸೇನ್ - 24.48%
* ಅನೂಷ್ಕಾ ಶರ್ಮಾ - 12.24%
* ಸೋನಮ್ ಕಪೂರ್ - 8.16%
* ಮಲ್ಲಿಕಾ ಶೆರಾವತ್ - 8.16%
* ಸೈನಾ ನೆಹ್ವಾಲ್ - 6.15%

2011ರಲ್ಲಿ ಮದುವೆಯಾಗುವ ಜೋಡಿ:
* ಸೈಫ್ ಆಲಿ ಖಾನ್ - ಕರೀನಾ ಕಪೂರ್ - 34.69%
* ಜಾನ್ ಅಬ್ರಹಾಂ - ಬಿಪಾಶಾ ಬಸು - 26.53%
* ಮಹೇಶ್ ಭೂಪತಿ - ಲಾರಾ ದತ್ತಾ - 28.57%
* ಕುನಾಲ್ ಖೇಮು - ಸೋಹಾ ಆಲಿ ಖಾನ್ - 10.21%

2010ರ ಅತ್ಯುತ್ತಮ ಸೆಲೆಬ್ರಿಟಿ ಮದುವೆ:
* ಮಹೇಂದ್ರ ಸಿಂಗ್ ಧೋನಿ - ಸಾಕ್ಷಿ ಸಿಂಗ್ ರಾವತ್ - 48.97%
* ಸಾನಿಯಾ ಮಿರ್ಜಾ - ಶೋಯಿಬ್ ಮಲಿಕ್ - 30.61%
* ಶಶಿ ತರೂರ್ - ಸುನಂದಾ ಪುಷ್ಕರ್ - 14.28%
* ಕೊಂಕಣಾ ಸೇನ್ - ರಣವೀರ್ ಶೋರೆ - 4.10%
* ವಿವೇಕ್ ಒಬೆರಾಯ್ - ಪ್ರಿಯಾಂಕಾ ಆಳ್ವ - 2.04%
ಸಂಬಂಧಿತ ಮಾಹಿತಿ ಹುಡುಕಿ