ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತೀವ್ರ ಹದಗೆಟ್ಟ ಆರೋಗ್ಯ; ಭೀಮಸೇನ್ ಜೋಷಿ ಆಸ್ಪತ್ರೆಗೆ (Pandit Bhimsen Joshi | Gadag | Hindustani Classical vocalist | Kirana Gharana)
Bookmark and Share Feedback Print
 
PTI
ಖ್ಯಾತ ಹಿಂದೂಸ್ತಾನಿ ಗಾಯಕ, ಭಾರತ ರತ್ನ ಪುರಸ್ಕೃತ ಪಂಡಿತ್ ಭೀಮಸೇನ್ ಜೋಷಿಯವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದ್ದು, ಅವರನ್ನು ಪುಣೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

88ರ ಹರೆಯದ ಜೋಷಿಯವರು ಪ್ರಸಕ್ತ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ನಾಲ್ಕು ದಿನಗಳ ಹಿಂದಷ್ಟೇ ಅವರನ್ನು ಪುಣೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ. ಅವರಿಗೆ ಕೃತಕ ಉಸಿರಾಟ ವ್ಯವಸ್ಥೆ ಮಾಡಲಾಗಿದೆ ಎಂದು ವರದಿಗಳು ಹೇಳಿವೆ.

ಗದಗ ಮೂಲದವರಾಗಿರುವ ಸಂಗೀತ ಲೋಕದ ದಿಗ್ಗಜ ಜೋಷಿಯವರು ಹಲವಾರು ವರ್ಷಗಳಿಂದ ಮಹಾರಾಷ್ಟ್ರದ ಪುಣೆಯಲ್ಲಿ ನೆಲೆಸಿದ್ದಾರೆ. ಅವರ ಆರೋಗ್ಯ ಹದಗೆಟ್ಟ ಸುದ್ದಿ ಅಭಿಮಾನಿಗಳ ತೀವ್ರ ಆತಂಕಕ್ಕೂ ಕಾರಣವಾಗಿದೆ.

ಎರಡು ವರ್ಷಗಳ ಹಿಂದಷ್ಟೇ 2008ರಲ್ಲಿ ಭಾರತ ರತ್ನ ಪುರಸ್ಕಾರ ಜೋಷಿಯವರನ್ನು ಹುಡುಕಿಕೊಂಡು ಬಂದಿತ್ತು. ಆ ಮೂಲಕ 53 ವರ್ಷಗಳ ಬಳಿಕ ಕನ್ನಡ ನೆಲಕ್ಕೆ ಈ ಗೌರವ ಸಂದಿತ್ತು. ಅದಕ್ಕೂ ಮೊದಲು ಭಾರತ ರತ್ನ ಕನ್ನಡ ನೆಲದಲ್ಲಿ ಕಂಗೊಳಿಸಿದ್ದು ಸರ್ ಎಂ. ವಿಶ್ವೇಶ್ವರಯ್ಯ ಅವರ ಮೂಲಕ.
ಸಂಬಂಧಿತ ಮಾಹಿತಿ ಹುಡುಕಿ