ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಳ್ಳರ ಹೆಸರು ಹೇಳಲು ಹಿಂಜರಿಕೆ ಯಾಕೆ? ಕೇಂದ್ರಕ್ಕೆ ಸುಪ್ರೀಂ (Black money | Supreme Court | India | foreign bank)
Bookmark and Share Feedback Print
 
ವಿದೇಶಿ ಬ್ಯಾಂಕುಗಳಲ್ಲಿ ಕಪ್ಪ ಹಣವನ್ನು ಅಕ್ರಮವಾಗಿ ಕೂಡಿಟ್ಟಿರುವ ಭಾರತೀಯ ಪ್ರಜೆಗಳ ಹೆಸರನ್ನು ಬಹಿರಂಗ ಪಡಿಸಲು ಕೇಂದ್ರ ಸರಕಾರ ಹಿಂದೇಟು ಹಾಕುತ್ತಿರುವುದು ಯಾಕೆ ಎಂದು ಸರ್ವೋಚ್ಚ ನ್ಯಾಯಾಲಯವು ಪ್ರಶ್ನಿಸುವುದರೊಂದಿಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಮತ್ತೊಮ್ಮೆ ತೀವ್ರ ಮುಜುಗರಕ್ಕೊಳಗಾಗಿದೆ.

ವಿದೇಶಿ ಬ್ಯಾಂಕುಗಳಲ್ಲಿ ಕಪ್ಪು ಹಣ ಹೊಂದಿರುವ ಭಾರತೀಯರ ಹೆಸರುಗಳು ಸಿಕ್ಕಿವೆ. ಆದರೆ ಅದನ್ನು ಸರಕಾರ ಬಹಿರಂಗಪಡಿಸುತ್ತಿಲ್ಲ ಎಂದು ಸಾಲಿಸಿಟರ್ ಜನರಲ್ ಗೋಪಾಲ ಸುಬ್ರಮಣ್ಯಂ ಹೇಳಿದ್ದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ಮತ್ತು ಎಸ್.ಎಸ್. ನಿಜ್ಜಾರ್ ಅವರನ್ನೊಳಗೊಂಡ ಪೀಠವು, ಆ ಮಾಹಿತಿಯನ್ನು ಬಹಿರಂಗಪಡಿಸಲು ನಿಮಗಿರುವ ಕಷ್ಟ ಏನು ಎಂದು ಪ್ರಶ್ನಿಸಿತು.

ಲೈಚೆನ್‌ಸ್ಟೈನ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಭಾರತೀಯ ಪ್ರಜೆಗಳ ವಿವರಗಳನ್ನು ಜರ್ಮನಿ ಸರಕಾರದಿಂದ ಭಾರತ ಸರಕಾರವು ಪಡೆದುಕೊಂಡಿದೆ. ಆದರೆ ಅದನ್ನು ಬಹಿರಂಗಪಡಿಸುವುದು ಸರಕಾರಕ್ಕೆ ಇಷ್ಟವಿಲ್ಲ ಎಂದು ಸುಬ್ರಮಣ್ಯಂ ಹೇಳಿದ್ದರು.

'ವಿದೇಶಗಳ ಬ್ಯಾಂಕುಗಳಲ್ಲಿ ಹಣವನ್ನು ಠೇವಣಿ ಇಟ್ಟಿರುವ ವ್ಯಕ್ತಿಗಳ ಮಾಹಿತಿಯನ್ನು ಬಹಿರಂಗಪಡಿಸದೇ ಇರುವುದನ್ನು ನೀವು ಯಾವ ವಿಶೇಷ ಹಕ್ಕು ಎಂದು ಭಾವಿಸಿದ್ದೀರಿ' ಎಂದು ಇದನ್ನು ಪೀಠವು ತರಾಟೆಗೆ ತೆಗೆದುಕೊಂಡಿತು.

ಕೋರ್ಟ್ ಪ್ರಶ್ನೆಯಿಂದ ತಬ್ಬಿಬ್ಬಾದ ಸರಕಾರಿ ವಕೀಲರು, ವಿದೇಶಗಳಲ್ಲಿನ ಬ್ಯಾಂಕುಗಳಲ್ಲಿ ಖಾತೆ ಹೊಂದಿರುವ ಭಾರತೀಯರ ಹೆಸರುಗಳ ಕುರಿತು ಸರಕಾರದಿಂದ ತಾನು ಸೂಚನೆಗಳನ್ನು ಪಡೆಯುವುದಾಗಿ ತಿಳಿಸಿದರು.

ವಿದೇಶಗಳ ಬ್ಯಾಂಕುಗಳಲ್ಲಿ ಕೊಳೆಯುತ್ತಾ ಬಿದ್ದಿರುವ ಕಪ್ಪು ಹಣವನ್ನು ವಾಪಸ್ ತರಲು ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿ ಖ್ಯಾತ ಕ್ರಿಮಿನಲ್ ವಕೀಲ ರಾಮ್ ಜೇಠ್ಮಲಾನಿ ಮತ್ತು ಇತರ ಕೆಲವು ನಿವೃತ್ತ ಅಧಿಕಾರಿಗಳು ಮನವಿ ಸಲ್ಲಿಸಿದ್ದರು.

ಒಂದು ಅಂದಾಜಿನ ಪ್ರಕಾರ ಭಾರತೀಯರು ವಿದೇಶಿ ಬ್ಯಾಂಕುಗಳಲ್ಲಿ ಸುಮಾರು 70 ಲಕ್ಷ ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಶೇಖರಿಸಿಟ್ಟಿದ್ದಾರೆ. ಭಾರತ ಹೊಂದಿರುವ ಸಾಲ ಕೇವಲ 12.3 ಲಕ್ಷ ಕೋಟಿ. ಅಂದರೆ, ವಿದೇಶಿ ಹಣವನ್ನು ಭಾರತಕ್ಕೆ ತಂದು, ಸಾಲ ತೀರಿಸಿದ ನಂತರ ಭಾರತದ ಪ್ರತಿಯೊಬ್ಬ ಪ್ರಜೆಯ ಹೆಸರಿನಲ್ಲಿ 50,000 ರೂಪಾಯಿ ಬ್ಯಾಂಕಿನಲ್ಲಿ ಠೇವಣಿ ಇಡಬಹುದು!
ಸಂಬಂಧಿತ ಮಾಹಿತಿ ಹುಡುಕಿ