ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಲ್ತುಳಿತದಿಂದ ಸ್ವಲ್ಪದರಲ್ಲೇ ಪಾರಾದ ವಿವೇಕ್ ಒಬೆರಾಯ್ (Sabarimala | Vivek Oberoi | Lord Ayyappa | Kerala)
Bookmark and Share Feedback Print
 
PR
ನೂರಕ್ಕೂ ಹೆಚ್ಚು ಅಯ್ಯಪ್ಪ ಸ್ವಾಮಿ ಭಕ್ತರ ಸಾವಿಗೆ ಕಾರಣವಾದ ಕಾಲ್ತುಳಿತದಿಂದ ಬಾಲಿವುಡ್ ನಟ ವಿವೇಕ್ ಒಬೆರಾಯ್ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಕೆಲವೇ ಹೊತ್ತಿನ ಮುಂಚೆಯಷ್ಟೇ ಅವರು ದರ್ಶನ ಪಡೆದು ಸ್ಥಳದಿಂದ ತೆರಳಿದ್ದರಿಂದ ಅಪಾಯಕಾರಿ ಸನ್ನಿವೇಶಕ್ಕೆ ಅವರು ಸಿಲುಕಿಕೊಂಡಿರಲಿಲ್ಲ.

ಇಡುಕ್ಕಿ ಜಿಲ್ಲೆಯ ವೆಂಡಿಪೆರಿಯಾರ್‌ನಲ್ಲಿ ಶುಕ್ರವಾರ ರಾತ್ರಿ 8.15ರ ಹೊತ್ತಿಗೆ ಜೀಪು ಅಪಘಾತದ ನಂತರ ನಡೆದ ಕಾಲ್ತುಳಿತಕ್ಕೂ ಮೊದಲು ಒಬೆರಾಯ್ ಆ ಸ್ಥಳದಿಂದ ಹೊರಟು ಹೋಗಿದ್ದರು. ಮಕರ ಜ್ಯೋತಿ ದರ್ಶನ ಪಡೆದೇ ಹೊರಟರೂ, ಇತರರಿಗಿಂತ ಮುಂಚೆಯೇ ಅಲ್ಲಿಂದ ಅವರು ಹೊರಟಿದ್ದರು ಎಂದು ಮೂಲಗಳು ಹೇಳಿವೆ.

ಕಳೆದ 13 ವರ್ಷಗಳಿಂದ ಅಯ್ಯಪ್ಪ ವ್ರತಧಾರಿಯಾಗಿ, ಮಾಲೆ ಹಾಕುತ್ತಿರುವ ವಿವೇಕ್ ಒಬೆರಾಯ್, ಪ್ರತಿವರ್ಷವೂ ಶಬರಿಮಲೆ ಯಾತ್ರೆ ಮಾಡುತ್ತಿದ್ದಾರೆ. ಶುಕ್ರವಾರ ಸಂಜೆ ಅವರು ಸುಮಾರು 12 ಗಂಟೆಗಳ ಕಾಲ ಸರದಿ ಸಾಲಿನಲ್ಲಿ ನಿಂತು ಅಯ್ಯಪ್ಪ ದರ್ಶನ ಪಡೆದಿದ್ದರು. ಜ್ಯೋತಿ ನೋಡಿದ ಬಳಿಕ ಶಬರಿಮಲೆಯಿಂದ ಇಳಿದು ಹೋಗಿದ್ದರು.

ಒಬೆರಾಯ್ ವ್ರತಾಚರಣೆ ಬಿಗು...
ಪತ್ರಿಕೆಯೊಂದರ ಜತೆ ಮಾತನಾಡಿರುವ ಒಬೆರಾಯ್, ತಾನು ಕಳೆದ ಮೂರು ವರ್ಷಗಳಿಂದ ಶುದ್ಧ ಸಸ್ಯಾಹಾರಿ. ಮೊಟ್ಟೆ ತಿನ್ನುವುದನ್ನು ಕೂಡ ನಿಲ್ಲಿಸಿದ್ದೇನೆ. 41 ದಿನಗಳ ವ್ರತಾಚರಣೆ ಸಂದರ್ಭದಲ್ಲಿ ನಾನು ಚಪ್ಪಲಿ ಹಾಕುವುದಿಲ್ಲ, ಎಲ್ಲಿ ಹೋದರೂ ನೆಲದಲ್ಲೇ ಮಲಗುತ್ತೇನೆ. ವಿಶೇಷ ಯಾತ್ರಾಸ್ಥಳದ ಪಾವಿತ್ರ್ಯ ಕಾಪಾಡುವ ಎಲ್ಲಾ ಸಂಪ್ರದಾಯಗಳನ್ನೂ ನಾನು ಪಾಲಿಸುತ್ತೇನೆ ಎಂದಿದ್ದಾರೆ.

ಒಬೆರಾಯ್ ಮೊತ್ತ ಮೊದಲು ಶಬರಿಮಲೆಗೆ ಬಂದದ್ದು 13 ವರ್ಷಗಳ ಹಿಂದೆ. ಆಗ ಸ್ವತಃ ಮಲಯಾಳಿ ನಟ ಮೋಹನ್‌ಲಾಲ್ ಮುಂದೆ ನಿಂತು ದರ್ಶನಕ್ಕೆ ಮತ್ತು ಅಲ್ಲಿ ಉಳಿದುಕೊಳ್ಳಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಮಾಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ