ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಜಕಾರಣದಲ್ಲಿ ನಾನೊಬ್ಬ ಪುರಾತನ ವಸ್ತು ಇದ್ದಂಗೆ: ಪ್ರಣಬ್ (Indian politics | Pranab Mukherjee | Kolkata | antique | Finance Minister)
Bookmark and Share Feedback Print
 
PTI
'ರಾಷ್ಟ್ರ ರಾಜಕಾರಣದಲ್ಲಿ ನಾನೊಂದು ಪುರಾತನ ವಸ್ತು ಇದ್ದಂತೆ'...ಹೀಗೆ ತಮ್ಮನ್ನು ತಾವು ವಿಮರ್ಶಿಸಿಕೊಂಡವರು ಹಿರಿಯ ಕಾಂಗ್ರೆಸ್ ಮುಖಂಡ, ಕೇಂದ್ರ ವಿತ್ತ ಸಚಿವ ಪ್ರಣಬ್ ಮುಖರ್ಜಿ.

ಕಳೆದ ಐದು ದಶಕಗಳಿಂದಲೂ ನಾನು ರಾಜಕೀಯದಾಟದ ವಿಕೆಟ್‌ಗೆ ಅಂಟಿಕೊಂಡಿದ್ದೇನೆ. ಈಗ ಜೀವಂತವಿರುವ ರಾಜಕಾರಣಿಗಳಲ್ಲಿ ನಾನೇ ಅತ್ಯಂತ ಹಳಬ ಎಂದು 75ರ ಹರೆಯದ ಮುಖರ್ಜಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಜಾಗತಿಕ ಆರ್ಥಿಕ ಅಸಮತೋಲನ ಮತ್ತು ಹಣದುಬ್ಬರದ ಇಳಿಕೆ ಕುರಿತಂತೆ ಇಂದಿನ ಯುವ ಪೀಳಿಗೆ ಉತ್ತಮವಾಗಿ ಸ್ಪಂದಿಸುತ್ತಿದೆ. ಅದೇ ರೀತಿ ಯುವ ಭಾರತೀಯರು ಯಾವುದೇ ಹೊರೆಯನ್ನು ಹೊರಲು ಸಿದ್ದರಿಲ್ಲ. ಯಾವುದೇ ಸಮಸ್ಯೆಯನ್ನೂ ಎದುರಿಸಲೂ ಕೂಡ ಹಿಂಜರಿಕೆಯೂ ಅವರಿಲ್ಲ ಇಲ್ಲ ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು.

ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆ ಏರ್ಪಡಿಸಿದ್ದ ಭವಿಷ್ಯದ ನಾಯಕರ ಮೇಲಿನ ನಿರೀಕ್ಷೆಗಳು ಎಂಬ ಸಂವಾದದಲ್ಲಿ ಮಾತನಾಡಿದರು. ಬಿಜೆಪಿ ಮುಖಂಡ ಅರುಣ್ ಶೌರಿ, ಪ್ರಣಬ್ ಮುಖರ್ಜಿ ನಾವು ಈ ದೇಶದಲ್ಲಿ ನೋಡಬೇಕಾಗಿರುವ ಅತ್ಯುತ್ತಮ ಪ್ರಧಾನಿ ಎಂದು ಮೆಚ್ಚುಗೆಯ ಮಾತನ್ನಾಡಿದರು. ಮುಖರ್ಜಿ ಅವರು ಭಾರತ ಸರಕಾರದ ಪ್ರಮುಖ ಮೈಲಿಗಲ್ಲು ಹಾಗೂ ನಂಬಿಗಸ್ಥ ವ್ಯಕ್ತಿಯಾಗಿದ್ದಾರೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ