ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮತ್ತೊಂದು ತಿರುವು; ಸೂರಿ ಹತ್ಯೆ ಹಿಂದೆ ಚಂದ್ರಬಾಬು ನಾಯ್ಡು ಕೈವಾಡ? (Suryanarayana Reddy | Andhra Pradesh | Paritala Ravi | Rakta Charitra)
Bookmark and Share Feedback Print
 
ಸೂರ್ಯನಾರಾಯಣ ರೆಡ್ಡಿ ಆಲಿಯಾಸ್ ಮದ್ದಲಚರವು ಸೂರಿಯನ್ನು ಹತ್ಯೆಗೈದ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದುಕೊಳ್ಳತೊಡಗಿದ್ದು, ಸೂರಿ ಹತ್ಯೆಯ ಹಿಂದೆ ಟಿಟಿಪಿ ವರಿಷ್ಠ ಚಂದ್ರಬಾಬು ನಾಯ್ಡು ಅವರ ಕೈವಾಡ ಇರುವುದಾಗಿ ಪತ್ನಿ ಭಾನುಮತಿ ಆರೋಪಿಸಿದ್ದಾರೆ.

ಸೂರಿಯ ಆಪ್ತರಾಗಿದ್ದ ಭಾನುಪ್ರಕಾಶ್ ಮತ್ತು ಮಧುಗೆ ಅವರನ್ನು ಹತ್ಯೆಗೈಯುವ ಧೈರ್ಯ ಇರಲಿಲ್ಲವಾಗಿತ್ತು. ಆದರೆ ಅವರಿಗೆ ಟಿಡಿಪಿ ವರಿಷ್ಠ ಚಂದ್ರಬಾಬು ನಾಯ್ಡು ಅವರ ಬೆಂಬಲ ಇದೆ ಎಂಬುದು ನನ್ನ ಶಂಕೆಯಾಗಿದೆ ಎಂದು ಭಾನುಮತಿ ಪತ್ರಿಕಾಗೋಷ್ಠಿಯಲ್ಲಿ ದೂರಿದ್ದಾರೆ. ಭಾನುಪ್ರಕಾಶ್ ವಿಜಯವಾಡದ ಟಿಡಿಪಿ ಅಧ್ಯಕ್ಷ ವಂಶಿ ಮೋಹನ್ ಅವರನ್ನು ಬಳಸಿಕೊಂಡು ಸೂರಿಯ ಹತ್ಯೆಗೈದಿರುವುದಾಗಿ ಈ ಸಂದರ್ಭದಲ್ಲಿ ಹೇಳಿದರು.

ಪೆರಿಟಾಲ ರವಿ ಹತ್ಯೆ ಆರೋಪದ ನಂತರ ನಮಗೆ ಸಾಕಷ್ಟು ಬೆದರಿಕೆ ಕೂಡ ಇತ್ತು. ಆದರೆ ಸೂರಿಯ ಜತೆಗಿದ್ದವರೇ ಅವರ ಕೊಲೆಗೈಯುತ್ತಾರೆಂಬ ನಿರೀಕ್ಷೆ ಇರಲಿಲ್ಲವಾಗಿತ್ತು ಎಂದು ಭಾನು ತಿಳಿಸಿದ್ದಾರೆ. ಒಟ್ಟಿನಲ್ಲಿ ಸೂರಿ ಹತ್ಯೆಗೆ ರಾಜಕೀಯ ವೈಷಮ್ಯವೇ ಕಾರಣ ಎಂಬುದು ಶಂಕೆ ಮೂಡುತ್ತಿರುವುದಾಗಿ ಹೇಳಿದರು.

ವಂಶಿ, ಚಂದ್ರಬಾಬು ನಾಯ್ಡು ಅವರ ಕೃಪಾಕಟಾಕ್ಷದೊಂದಿಗೆ ಬಾನುಪ್ರಕಾಶ್ ವ್ಯವಸ್ಥಿತ ಸಂಚು ರೂಪಿಸಿ ಸೂರಿಯನ್ನು ಹತ್ಯೆಗೈದಿರಬಹುದು. ಹಾಗಂತ ಇದಕ್ಕೆ ಯಾವುದೇ ಬಲವಾದ ಸಾಕ್ಷ್ಯಗಳಿಲ್ಲ. ನನ್ನ ಶಂಕೆ ಅಷ್ಟೇ ಎಂದು ಭಾನುಮತಿ ಸ್ಪಷ್ಟಪಡಿಸಿದ್ದಾರೆ.

ಆಂಧ್ರಪ್ರದೇಶದ ಮಾಜಿ ಸಚಿವ ಹಾಗೂ ತೆಲುಗು ದೇಶಂ ಪಕ್ಷದ ಮುಖಂಡ ಪೆರಿಟಾಲ ರವಿಯನ್ನು ಸೂರಿ 2005ರಲ್ಲಿ ಹತ್ಯೆ ಮಾಡಿದ್ದ ಎಂದು ಆರೋಪಿಸಲಾಗಿತ್ತು. ಪ್ರಕರಣದಲ್ಲಿ ಸೂರಿ ಜೈಲುಶಿಕ್ಷೆಯನ್ನೂ ಅನುಭವಿಸಿದ್ದ. ಇತ್ತೀಚೆಗಷ್ಟೇ ಸೂರಿ ಪ್ರಕರಣವೊಂದರ ಸಂಬಂಧ ವಕೀಲರೊಂದಿಗೆ ಮಾತುಕತೆ ನಡೆಸಿ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಸೂರಿಯ ಮೇಲೆ ದಾಳಿ ನಡೆಸಿ ಹತ್ಯೆಗೈಯಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ