ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶಬರಿಮಲೆ ದುರಂತ-ಸಾವಿನ ಸಂಖ್ಯೆ 102; ನ್ಯಾಯಾಂಗ ತನಿಖೆಗೆ ಆದೇಶ (Sabarimala tragedy | Crime Branch | stampede | Lord Ayyappa)
Bookmark and Share Feedback Print
 
ಅಯ್ಯಪ್ಪಸ್ವಾಮಿ ದರ್ಶನಕ್ಕೆ ತೆರಳಿದ್ದ ಭಕ್ತಸ್ತೋಮ ಮಕರಜ್ಯೋತಿ ನೋಡಿ ವಾಪಸಾಗುತ್ತಿದ್ದ ವೇಳೆ ಸಂಭವಿಸಿದ್ದ ಕಾಲ್ತುಳಿತದಲ್ಲಿ ಕರ್ನಾಟಕದ 33 ಮಂದಿ ಸೇರಿದಂತೆ ಒಟ್ಟು 102 ಮಂದಿ ಸಾವನ್ನಪ್ಪಿದ್ದಾರೆ. ಏತನ್ಮಧ್ಯೆ ಕಾಲ್ತುಳಿತ ದುರಂತದ ನ್ಯಾಯಾಂಗ ತನಿಖೆ ನಡೆಸಲು ಕೇರಳ ಮುಖ್ಯಮಂತ್ರಿ ಅಚ್ಯುತಾನಂದನ್ ಆದೇಶ ನೀಡಿದ್ದಾರೆ.

ಶಬರಿಮಲೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ರಸ್ತೆ ಮತ್ತು ಕಾಲ್ತುಳಿತದಲ್ಲಿ ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಬಳ್ಳಾರಿ, ಬೆಂಗಳೂರು, ಅರಸೀಕೆರೆ, ಎಚ್.ಡಿ.ಕೋಟೆ, ಪಿರಿಯಾಪಟ್ಟಣ ಸೇರಿದಂತೆ ರಾಜ್ಯದ 33 ಮಂದಿ ಭಕ್ತರು ಸಾವನ್ನಪ್ಪಿದ್ದಾರೆ. ಈ ಪೈಕಿ 23 ಮಂದಿಯನ್ನು ಗುರುತಿಸಲಾಗಿದೆ. ಉಳಿದವರ ಗುರುತು ಪತ್ತೆಯಾಗಿಲ್ಲ.

ಕೇರಳದ ಕ್ರೈಮ್ ಬ್ರಾಂಚ್ ಅಧಿಕಾರಿಗಳು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದ್ದಾರೆ. ಅಷ್ಟೇ ಅಲ್ಲ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಕೂಡ ಪುಲ್ಲಮೇಡು ಪ್ರದೇಶಕ್ಕೆ ಭೇಟಿ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಮನೆಯವರಿಗಾಗಿ ಹುಡುಕಾಟ;
ಅಯ್ಯಪ್ಪಸ್ವಾಮಿ ದರ್ಶನಕ್ಕೆ ತೆರಳಿ ಸಾವನ್ನಪ್ಪಿದವರ ಕುಟುಂಬಗಳಲ್ಲಿ ರೋದನ ಮುಗಿಲುಮುಟ್ಟಿದ್ದರೆ, ಮತ್ತೊಂದೆಡೆ ಮನೆಗೆ ಹಿಂದಿರುಗದ ಭಕ್ತರ ಸಂಬಂಧಿಕರು ವಿವಿಧ ರಾಜ್ಯಗಳಿಂದ ಬಂದು ಆಸ್ಪತ್ರೆಗಳಲ್ಲಿ ತಮ್ಮ ಕುಟುಂಬದವರಿಗಾಗಿ ಶೋಧ ನಡೆಸುತ್ತಿದ್ದಾರೆ. ಘಟನೆಯಲ್ಲಿ ಕರ್ನಾಟಕದ 33, ತಮಿಳುನಾಡಿನ 31, ಆಂಧ್ರಪ್ರದೇಶದ 20, ಕೇರಳದ ಐವರು, ಪುದುಚೇರಿಯ ಇಬ್ಬರು ಸೇರಿದಂತೆ 102 ಮಂದಿ ಸಾವನ್ನಪ್ಪಿದ್ದರು.

ಶಬರಿಮಲೆಯ ಅತಿದೊಡ್ಡ ದುರಂತ...
ಮೂಲಗಳ ಪ್ರಕಾರ ಶಬರಿಮಲೆಯಲ್ಲಿ ನಡೆದ ಅತಿದೊಡ್ಡ ದುರಂತವಿದು. ಈ ಹಿಂದೆ ಇಷ್ಟೊಂದು ಪ್ರಮಾಣದಲ್ಲಿ ಭಕ್ತರು ಬಲಿಯಾದ ಉದಾಹರಣೆಗಳು ನಡೆದಿಲ್ಲ.

1952ರಲ್ಲಿ ಪಟಾಕಿ ದಾಸ್ತಾನು ಮಳಿಗೆಯೊಂದು ಸ್ಫೋಟಿಸಿದ್ದರಿಂದ 65 ಮಂದಿ ಭಕ್ತರು, 1999ರಲ್ಲಿ ಪಂಪಾ ಸಮೀಪ ಕಾಲ್ತುಳಿತಕ್ಕೆ 53 ಮಂದಿ ಭಕ್ತರು ಬಲಿಯಾದುದು ಶಬರಿಮಲೆಯ ಇತ್ತೀಚಿನ ದುರ್ಘಟನೆಗಳು.

ಹೆಚ್ಚಿನ ವಿವರಗಳಿಗೆ ಈ ಕೆಳಗೆ ನೀಡಲಾಗಿರುವ ಕೇರಳ ಸರಕಾರದ ವೆಬ್‌ಸೈಟನ್ನು (www.sdma.kerala.gov.in) ನೋಡಬಹುದು. ಅಲ್ಲಿ Sabarimala Stampede ಎಂಬ ಪ್ರತ್ಯೇಕ ವಿಭಾಗದಲ್ಲಿ ಬಲಿಯಾದವರ ಮತ್ತು ಗಾಯಗೊಂಡವರ ವಿವರಗಳನ್ನು ಪ್ರಕಟಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ