ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೇಸರಿ ಬೇರೆ, ಭಯೋತ್ಪಾದನೆ ಬೇರೆ: ಗೋವಿಂದಾಚಾರ್ಯ (Saffron | terrorism | K N Govindacharya | Nitin Gadkari)
Bookmark and Share Feedback Print
 
ಕೇಸರಿ ಮತ್ತು ಭಯೋತ್ಪಾದನೆ ಎರಡು ಪ್ರತ್ಯೇಕ ಪದಗಳು ಮತ್ತು ಅವುಗಳನ್ನು ಜತೆಯಾಗಿ ಬಳಸಲಾಗದು ಎಂದು ಹೇಳಿರುವ ಬಿಜೆಪಿಯ ಮಾಜಿ ಸಿದ್ದಾಂತವಾದಿ ಕೆ.ಎನ್. ಗೋವಿಂದಾಚಾರ್ಯ, ಬಾಂಬ್ ಸ್ಫೋಟಗಳಲ್ಲಿ ಸಂಘ ಪರಿವಾರದ ಸದಸ್ಯರು ಭಾಗವಹಿಸಿದ್ದಾರೆ ಎಂದು ಈಗಲೇ ಹೇಳುವುದು ಅಪಕ್ವ ತೀರ್ಪು ಎನಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಇಂದು (ಸೋಮವಾರ) ನಾಗ್ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕೇಸರಿ ಮತ್ತು ಭಯೋತ್ಪಾದನೆ ಎಂಬ ಎರಡು ಪದಗಳನ್ನು ಜತೆಯಾಗಿ ಬಳಸಲಾಗದು. ಇದು ಹಾಲು ಕಪ್ಪು ಬಣ್ಣ ಎಂದು ಬಣ್ಣಿಸಿದಂತೆ. ಯೂರೋಪ್ ದೃಷ್ಟಿಕೋನದಿಂದ ಭಾರತವನ್ನು ನೋಡುವವರಿಂದ ಹುಟ್ಟಿಕೊಂಡ ವಿಚಿತ್ರ ವ್ಯಾಖ್ಯಾನವಿದು ಎಂದರು.

ಸ್ಫೋಟ ಪ್ರಕರಣಗಳಲ್ಲಿ ಹಿಂದೂಗಳ ಹೆಸರು ಕೇಳಿ ಬಂದಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ತನಿಖೆ ಪೂರ್ಣಗೊಳ್ಳುವ ಮೊದಲು ಯಾವುದೇ ನಿರ್ಣಯವನ್ನು ತೆಗೆದುಕೊಳ್ಳುವುದು ಅಪಕ್ವ ಎನಿಸುತ್ತದೆ. ರಾಷ್ಟ್ರೀಯ ತನಿಖಾ ದಳವು (ಎನ್ಐಎ) ಒಂದು ತನಿಖಾ ಸಂಸ್ಥೆ. ನಾವು ಅಂತಿಮ ನಿರ್ಧಾರವೊಂದಕ್ಕೆ ಬರುವ ಮೊದಲು ಕೊಂಚ ಕಾಯೋಣ ಎಂದು ತಾಳ್ಮೆಯ ಮಾತುಗಳನ್ನಾಡಿದರು.

ಭಯೋತ್ಪಾದನೆಯನ್ನು ಧರ್ಮಗಳಿಗೆ ವರ್ಗೀಕರಣ ಮಾಡಿದ ಕಾಂಗ್ರೆಸ್ ಉಲ್ಲೇಖವನ್ನು ಗೋವಿಂದಾಚಾರ್ಯ ಜಾಗಕೂರತೆಯಿಂದ ಮಾಡಿದರು.

'ಕೇಸರಿ ಭಯೋತ್ಪಾದನೆ ಎಂಬ ವ್ಯಾಖ್ಯಾನವನ್ನು ನಿರಂತರವಾಗಿ ಮಾಡುತ್ತಾ ಬಂದ ಕಾಂಗ್ರೆಸ್, ಅದು ತನಗೆ ತಿರುಗುಬಾಣವಾಗುತ್ತದೆ ಎಂಬ ಭೀತಿ ಉಂಟಾದಾಗ ಮೆಲ್ಲಗೆ ಹಿಂದಕ್ಕೆ ಸರಿಯಿತು. ಆರಂಭದಲ್ಲಿ ಹಿಂದೂ ಭಯೋತ್ಪಾದನೆ, ನಂತರ ಕೇಸರಿ ಭಯೋತ್ಪಾದನೆ, ಈಗ ಸಂಘ ಭಯೋತ್ಪಾದನೆಗೆ ಅದು ಇಳಿದಿದೆ' ಎಂದರು.

ಭಾರತ ವಿಕಾಸ ಸಂಘ ಸಂಸ್ಥೆಯನ್ನು ಹುಟ್ಟು ಹಾಕಿ ಭ್ರಷ್ಟಾಚಾರ ವಿರೋಧಿ ಪ್ರಚಾರ ಆಂದೋಲನ ನಡೆಸುತ್ತಿರುವ ಗೋವಿಂದಾಚಾರ್ಯ, ಆರೆಸ್ಸೆಸ್ ವರಿಷ್ಠ ಮೋಹನ್ ಭಾಗವತ್ ಅವರನ್ನೂ ಕೂಡ ಭೇಟಿ ಮಾಡಿದರು. ಆದರೆ ತಾನು ರಾಜಕೀಯಕ್ಕೆ ಮರಳುತ್ತಿದ್ದೇನೆ ಎಂಬ ವರದಿಗಳನ್ನು ಅವರು ತಳ್ಳಿ ಹಾಕಿದರು.

2000ದಿಂದಲೇ ನಾನು ಸಕ್ರಿಯ ರಾಜಕಾರಣದಿಂದ ಹೊರಗುಳಿದಿದ್ದೇನೆ. ಈಗಲೂ ನನ್ನ ಆ ನಿಲುವಿಗೆ ಬದ್ಧನಾಗಿದ್ದೇನೆ ಎಂದು ಗೋವಿಂದಾಚಾರ್ಯ ಸ್ಪಷ್ಟನೆ ನೀಡಿದರು.

ಗಡ್ಕರಿ ಪ್ರದರ್ಶನಕ್ಕೆ ಅತೃಪ್ತಿ...
ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಪುತ್ರ ನಿಖಿಲ್ ಗಡ್ಕರಿ ಮದುವೆಯ ಹೆಸರಿನಲ್ಲಿ ವೈಭವೋಪೇತ ಪ್ರದರ್ಶನ ಮೆರೆದಿರುವುದು ಗೋವಿಂದಾಚಾರ್ಯ ಅವರಿಗೆ ಸಮಾಧಾನ ತಂದಂತಿಲ್ಲ. ಇದು ಬೇಕಾಗಿರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಯಾರ ಹೆಸರನ್ನೂ ಉಲ್ಲೇಖಿಸದೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಬಿಜೆಪಿ ಅಧ್ಯಕ್ಷರು ಈ ಹಿಂದೆ ಮಿತವ್ಯಯಕ್ಕೆ ಕರೆ ನೀಡಿದವರು ಮತ್ತು ಎಬಿವಿಪಿ ಸದಸ್ಯರಾಗಿ ಜೀವನ ಪೂರ್ತಿ ಅದನ್ನು ಅನುಸರಿಸಿದವರು. ಆದರೆ ತನ್ನ ಮಗನ ಮದುವೆಗೆ ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣ ವ್ಯಯಿಸಿದ್ದಾರೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ