ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಯೋತ್ಪಾದನೆಯೇ ಪಾಕಿಸ್ತಾನದ ನೀತಿ: ಭಾರತ ಆರೋಪ (India | Pakistan | terrorism | Nirupama Rao)
Bookmark and Share Feedback Print
 
ಪಾಕಿಸ್ತಾನವು ಭಯೋತ್ಪಾದನೆಯನ್ನೇ ತನ್ನ ರಾಜ್ಯನೀತಿಯ ಅಸ್ತ್ರವಾಗಿ ಸ್ವೀಕರಿಸಿದೆ ಎಂದು ಆರೋಪಿಸಿರುವ ಭಾರತ, ಇಂತಹ ತಂತ್ರಗಳಿಂದಾಗಿ ಆ ದೇಶದ ಮೇಲೆಯೇ ಕಳಂಕ ಅಂಟಿಕೊಳ್ಳುವುದಲ್ಲದೆ, ಸ್ವತಃ ತನ್ನಿಂದಲೇ ತಾನು ಸೋಲು ಅನುಭವಿಸುತ್ತದೆ ಎಂದಿದೆ.

ಹೀಗೆಂದು ಹೇಳಿರುವುದು ಭಾರತದ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್. ತಿಂಫುವಿನಲ್ಲಿ ನಡೆಯಲಿರುವ ಸಾರ್ಕ್ ಸಮಿತಿ ಸಭೆಯಲ್ಲಿ ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಬಶೀರ್ ಅವರನ್ನು ರಾವ್ ಭೇಟಿಯಾಗುವ ಸಾಧ್ಯತೆಗಳಿವೆ ಎಂದು ವರದಿಗಳು ಹೇಳಿವೆ.

'ಅಂತಾರಾಷ್ಟ್ರೀಯ ಸಮುದಾಯದಲ್ಲಿ ತಮ್ಮ ಸ್ಥಾನಕ್ಕೆ ಅಥವಾ ಸ್ವತಃ ತಮಗೆ ಅಪಾಯವಿಲ್ಲದೆ ತಾವು ಭಯೋತ್ಪಾದನೆ ಎಂಬುದನ್ನು ರಾಜ್ಯನೀತಿಯ ಒಂದು ಅಸ್ತ್ರವಾಗಿ ಪರಿಗಣಿಸಬಹುದು ಎಂದು ಕೆಲವು ದೇಶಗಳು ಭಾವಿಸಿವೆ'

'ಭಯೋತ್ಪಾದನೆಯ ವಿರುದ್ಧದ ಯುದ್ಧವು ಆಯ್ದ ಬಗೆಯಲ್ಲಿ ಸಾಗಲು ಸಾಧ್ಯವಿಲ್ಲ. ಹಾಗಾಗಿ ಇದು ಸ್ವತಃ ಕಳಂಕ ಮತ್ತು ಸ್ವ-ಸೋಲನ್ನು ಕಂಡುಕೊಳ್ಳುವ ಹಾದಿ. ಒಂದು ಸ್ಥಿರ ಮತ್ತು ಸಮೃದ್ಧ ಪಾಕಿಸ್ತಾನವನ್ನು ನೋಡಬೇಕೆನ್ನುವುದು ಭಾರತದ ಆಸಕ್ತಿ. ಇದನ್ನು ನಾವು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇವೆ. ಭಾರತದ ವಿರುದ್ಧ ಭಯೋತ್ಪಾದನೆಯನ್ನು ಒಂದು ಅಸ್ತ್ರವನ್ನಾಗಿ ಬಳಸುವುದನ್ನು ಪಾಕಿಸ್ತಾನ ನಿಲ್ಲಿಸಬೇಕು, ಅದರಿಂದ ಹಿಂದಕ್ಕೆ ಸರಿಯಬೇಕು' ಎಂದು ನಿರುಪಮಾ ರಾವ್ ಒತ್ತಾಯಿಸಿದರು.

'ಏಷಿಯಾದ ಭದ್ರತೆಗಿರುವ ಸವಾಲುಗಳು' ಎಂಬ ವಿಚಾರಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಜಾಗತಿಕ ಭಯೋತ್ಪಾದನೆಯ ಕೇಂದ್ರ ಬಿಂದು ನಮ್ಮ ಪಕ್ಕದಲ್ಲೇ ಇದೆ ಎಂದು ಚುಚ್ಚಿದರು.

ಭಾರತ ವಿರೋಧಿ ಚಟುವಟಿಕೆಗಳಿಗೆ ತನ್ನ ನೆಲದಲ್ಲಿ ಅವಕಾಶ ನೀಡುವುದಿಲ್ಲ ಎಂಬ ಭರವಸೆಯನ್ನು ಈಡೇರಿಸುವುದು ಮಾತ್ರವಲ್ಲದೆ, ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಇತ್ತೀಚೆಗಷ್ಟೇ ನೀಡಿದ್ದ ಹೇಳಿಕೆಯನ್ನು ಕೂಡ ರಾವ್ ಉಲ್ಲೇಖಿಸಿ, ಮುಂಬೈ ದಾಳಿಗೆ ಕಾರಣರಾಗಿರುವ ವ್ಯಕ್ತಿಗಳಿಗೆ ತ್ವರಿತವಾಗಿ ಶಿಕ್ಷೆ ನೀಡಬೇಕು ಎಂಬ ಭಾರತದ ಬೇಡಿಕೆಯನ್ನು ಪೂರೈಸಬೇಕು ಎಂದರು.

ಮುಂಬೈ ಭಯೋತ್ಪಾದನಾ ದಾಳಿ ರೂವಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಂಬಂಧ ಪಾಕಿಸ್ತಾನವು ಒಂದು ಇಂಚು ಕೂಡ ಮುಂದಕ್ಕೆ ಹೋಗಿಲ್ಲ ಎಂದು ಪಿಳ್ಳೈ ಕೆಲ ದಿನಗಳ ಹಿಂದಷ್ಟೇ ಹೇಳಿದ್ದರು.
ಸಂಬಂಧಿತ ಮಾಹಿತಿ ಹುಡುಕಿ