ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದೇವರೆದುರೇ ಸೆಕ್ಸ್ ಮಾಡಿ, ಸಿಡಿ ಮಾಡುತ್ತಿದ್ದ ಸ್ವಾಮಿ ಸೆರೆ (Vrindavan | Porn Swamy | Mathura | Bhagwatacharya)
Bookmark and Share Feedback Print
 
ಪತ್ನಿ, ಮಕ್ಕಳು ಮತ್ತು ವಿದೇಶೀಯರೊಂದಿಗೆ ಹಿಂದೂ ದೇವರುಗಳ ವಿಗ್ರಹ, ದೇಗುಲಗಳು, ಯಮುನಾ ನದಿ ಸೇರಿದಂತೆ ಅಲ್ಲಿನ ಪವಿತ್ರ ಸ್ನಾನಘಟ್ಟಗಳಲ್ಲಿ ಕಾಮಕೇಳಿ ನಡೆಸಿ, ಅದನ್ನು ವಿದೇಶದಲ್ಲಿರುವ ತನ್ನ ಅನುಯಾಯಿಗಳಿಗೆ ತಲುಪಿಸಿ ಅಡ್ಡದಾರಿಯ ಮೂಲಕ ಸಂಪಾದಿಸುತ್ತಿದ್ದ ವೃಂದಾವನದ 'ಸೆಕ್ಸ್ ಸ್ವಾಮಿ' ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಕಳೆದ ಹತ್ತು ದಿನಗಳಿಂದ ಈತನಿಗಾಗಿ ಬಲೆ ಬೀಸಿದ್ದ ಪೊಲೀಸರು ಸೋಮವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಕಲಿ ಸ್ವಾಮಿಯನ್ನು ಬಂಧಿಸಬೇಕು ಎಂದು ಇತ್ತೀಚೆಗಷ್ಟೇ ಉತ್ತರ ಪ್ರದೇಶದ ದೇಗುಲಗಳ ನಗರ ಮಥುರಾದಲ್ಲಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿ ಒತ್ತಾಯಿಸಿದ್ದವು.

ಆತನದ್ದು ಧರ್ಮಲೇಪಿತ ಸೆಕ್ಸ್...
ಹೆಸರು ಭಗವತಾಚಾರ್ಯ. ಹೊರ ಜಗತ್ತಿಗೆ ಸಿಂಪಲ್ ಸ್ವಾಮಿ. ಆದರೆ ಬಹುಮುಖಿ ವ್ಯಕ್ತಿತ್ವದವ. ಈತನಿಗೆ ಹಿಂದೂ ದೇವರ ವಿಗ್ರಹಗಳು, ದೇವಸ್ಥಾನಗಳು, ಪವಿತ್ರ ಸ್ನಾನಘಟ್ಟಗಳು, ಯಮುನಾ ನದಿ ತಟದಲ್ಲೇ ಲೈಂಗಿಕ ಚಟುವಟಿಕೆ ನಡೆಸಬೇಕು ಮತ್ತು ಅದನ್ನು ಚಿತ್ರೀಕರಿಸಬೇಕು. ಇದರ ಉದ್ದೇಶ ವಿದೇಶಗಳಲ್ಲಿ ಮಾರಾಟ ಮಾಡುವುದು.

ಇಂತಹ ವಿಕೃತ ಕೃತ್ಯದಲ್ಲಿ ನಕಲಿ ಸ್ವಾಮಿ ಭಗವತಾಚಾರ್ಯ‌ ಒಬ್ಬನೇ ತೊಡಗಿಸಿಕೊಂಡಿರುವುದಲ್ಲ. ಈತನಿಗೆ ಮಥುರಾದ ಪುರಾಣವನ್ನು ವಿವರಿಸುವ ಕಥಾ ವಾಚಕ, ಚಿತ್ರ ಕಲಾವಿದ ರಾಜೇಂದ್ರ ಎಂಬಾತ ಕೂಡ ಸಹಕಾರ ನೀಡಿದ್ದಾನೆ. ಸ್ವಾಮಿಯ ಘನಂಧಾರಿ ಕಾರ್ಯಗಳನ್ನು ಸಿಡಿ ಮಾಡಿ, ಅದನ್ನು ವಿದೇಶದಲ್ಲಿನ ತನ್ನ ಸಹಚರರಿಗೆ ಕೊಟ್ಟು, ಇಂಟರ್ನೆಟ್ ಮೂಲಕ ವ್ಯವಹಾರ ಕುದುರಿಸುವಲ್ಲಿ ಈ ರಾಜೇಂದ್ರನ ಪಾತ್ರ ಮಹತ್ವದ್ದು.

ಪತ್ನಿ-ಮಕ್ಕಳ ಜತೆ ಅಸಹಜ ಕ್ರಿಯೆ...
ಈತ ಅದೆಂತಹಾ ಕಿರಾತಕನೆಂದರೆ ಸ್ವತಃ ತನ್ನ ಪತ್ನಿ ಜತೆ ಕಾಮಕೇಳಿ ನಡೆಸಿದ್ದನ್ನು ಕೂಡ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದ. ಕೆಲವು ಮಕ್ಕಳು ಮತ್ತು ವಿದೇಶಿ ಪ್ರಜೆಗಳೊಂದಿಗೆ ಕೂಡ ವಿಕೃತವಾಗಿ ಸುಖಿಸಿ, ಅದನ್ನು ಸಿಡಿ ಮಾಡಿದ್ದ.

ಈ ಕುರಿತು ವಿವರಣೆ ನೀಡಿರುವ ಪೊಲೀಸರು, ಭಗವತಾಚಾರ್ಯ ತನ್ನ ಪತ್ನಿ ಮತ್ತು ವಿದೇಶೀಯರ ಜತೆ ಸೆಕ್ಸ್ ಮಾಡುತ್ತಿದ್ದ. ಆದರೆ ಈ ಸಂದರ್ಭದಲ್ಲಿ ಕೆಲವು ಮಕ್ಕಳನ್ನು ಕೂಡ ತನ್ನ ಕೃತ್ಯಕ್ಕೆ ಬಳಸಿಕೊಂಡಿದ್ದಾನೆ. ಅಶ್ಲೀಲವಾಗಿ ಮಕ್ಕಳನ್ನು ಕೂಡ ತೋರಿಸಲಾಗಿದೆ ಎಂದಿದ್ದಾರೆ.

ಇವೆಲ್ಲ ಕರ್ಮಕಾಂಡದ ಸಿಡಿಗಳ ಜತೆಗೆ ವೀಡಿಯೋ ಕ್ಯಾಮರಾವನ್ನೂ ಮಥುರಾದಿಂದ 15 ಕಿಲೋ ಮೀಟರ್ ದೂರದಲ್ಲಿರುವ ವೃಂದಾವನ ಎಂಬಲ್ಲಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಾನು ಮಾಡಿದ್ದು ನನಗಾಗಿ...!
ನಾನು ನನ್ನ ಪತ್ನಿಯ ಜತೆ ನಡೆಸಿದ ಲೈಂಗಿಕ ಚಟುವಟಿಕೆಯನ್ನು ಚಿತ್ರೀಕರಿಸಿದ್ದು ನನ್ನ ವೈಯಕ್ತಿಕ ಬಳಕೆಗಾಗಿ. ಆದರೆ ಅದನ್ನು ಕೆಲವು ವ್ಯಕ್ತಿಗಳು ಕಳ್ಳತನ ಮಾಡಿ ದುರುಪಯೋಗಪಡಿಸಿಕೊಂಡರು ಎಂದು ಬಂಧಿತ ಸ್ವಾಮಿ ಹೇಳಿಕೊಂಡಿದ್ದಾನೆ.

ನಾನು ಮೂಲತಃ ಓರ್ವ ಚಿತ್ರ ಕಲಾವಿದ. ಹಾಗಾಗಿ ಚಿತ್ರಗಳನ್ನು ಬಿಡಿಸಲು ನಾನು ನನ್ನ ಪತ್ನಿಯನ್ನೇ ಓರ್ವ ಮಾಡೆಲ್ ಆಗಿ ಪರಿಗಣಿಸಿದ್ದೆ. ಇದನ್ನೇ ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾನೆ.

ಇದಕ್ಕೆ ಆತನ ಪತ್ನಿಯೂ ಬೆಂಬಲ ನೀಡಿದ್ದಾಳೆ. 'ನಮ್ಮ ಲ್ಯಾಪ್‌ಟಾಪನ್ನು ರಿಪೇರಿಗೆಂದು ಕೊಟ್ಟಿದ್ದೆವು. ಅದರಲ್ಲಿದ್ದ ವೀಡಿಯೋವನ್ನು ತಿರುಚಿದ ನಂತರ ರಿಪೇರಿ ಅಂಗಡಿಯವರು ನಮ್ಮನ್ನು ಬ್ಲ್ಯಾಕ್‌ಮೇಲ್ ಮಾಡಿದರು. ನಾವು ಒಪ್ಪದೇ ಇದ್ದಾಗ ಈ ರೀತಿಯಾಗಿ ನಮ್ಮನ್ನು ಸಿಲುಕಿಸಿ ಹಾಕಲಾಗಿದೆ' ಎಂದು ಆರೋಪಿಸಿ ಪ್ರಕರಣವನ್ನೂ ದಾಖಲಿಸಿದ್ದಾಳೆ.
ಸಂಬಂಧಿತ ಮಾಹಿತಿ ಹುಡುಕಿ