ಬೆಲೆಯೇರಿಕೆ ಬಗ್ಗೆ ಗಡ್ಕರಿ ಜೋಕ್; ಈರುಳ್ಳಿ ತಿಂದ್ರೆ ಶ್ರೀಮಂತ!
ಭುವನೇಶ್ವರ, ಬುಧವಾರ, 19 ಜನವರಿ 2011( 07:23 IST )
ಬೆಲೆಯೇರಿಕೆಯನ್ನು ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ವಿರುದ್ಧ ಗಂಭೀರವಾಗಿ ವಾಗ್ದಾಳಿ ನಡೆಸಿ ಪ್ರತಿಪಕ್ಷಗಳು ಸುಸ್ತಾದಂತಿವೆ. ಈಗ ಹಾಸ್ಯ ಮಾಡುವ ಮೂಲಕ, ಲೇವಡಿ ಮಾಡುವ ಮೂಲಕ ಸರಕಾರವನ್ನು ಸಾರ್ವಜನಿಕವಾಗಿ ಜರೆಯುವ ಕಾರ್ಯಕ್ಕೆ ಕೈ ಹಾಕಿವೆ.
ಸಮಾಜದಲ್ಲಿ ಏನಾದರೊಂದು ಗಮನ ಸೆಳೆಯುವ ಪ್ರಸಂಗ ನಡೆದಾಗ ಎಸ್ಎಂಎಸ್ ಜೋಕುಗಳು ಹರಿದಾಡುವುದು ಸಾಮಾನ್ಯ. ಇದನ್ನೇ ಬಿಜೆಪಿ ಕೂಡ ಬಳಸಿಕೊಂಡಿದೆ. ಯಾರೋ ಕಳುಹಿಸಿದ ಜೋಕುಗಳನ್ನು ಸಾರ್ವಜನಿಕ ಸಭೆಗಳಲ್ಲಿ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಹೇಳಿ, ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.
ಇದು ನಡೆದಿರುವುದು ಒರಿಸ್ಸಾ ರಾಜಧಾನಿ ಭುವನೇಶ್ವರದಲ್ಲಿ. ಬೆಲೆಯೇರಿಕೆ, ಭ್ರಷ್ಟಾಚಾರವನ್ನು ವಿರೋಧಿಸಿ ಏರ್ಪಡಿಸಲಾಗಿದ್ದ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಗಡ್ಕರಿ ಮೊಬೈಲ್ ತೆಗೆದು ಕೆಲವು ಜೋಕ್ ಓದಿದರು.
** ಇಬ್ಬರು ಕಾಲೇಜು ಹುಡುಗಿಯರ ನಡುವಿನ ಸಂಭಾಷಣೆಯಿದು.
ಹುಡುಗಿ: ತುಂಬಾ ಸ್ಮಾರ್ಟಾಗಿದ್ದಾನೆ ಕಣೇ, ಆತ ಖಂಡಿತಾ ಶ್ರೀಮಂತನಾಗಿರುತ್ತಾನೆ.
ಇನ್ನೊಬ್ಬ ಹುಡುಗಿ: ಅದು ಹೇಗೆ ಹೇಳ್ತಿದ್ದೀಯಾ?
ಹುಡುಗಿ: ಯಾಕೆಂದರೆ ಆತನ ಬಾಯಿಯಿಂದ ಈರುಳ್ಳಿ ವಾಸನೆ ಬರುತ್ತಿದೆ!
**
ತಂದೆ: ಡಾಕ್ಟರೇ, ನನ್ನ ಮಗಳು ಉದ್ದ ಆಗ್ತಾನೇ ಇಲ್ಲ. ಏನು ಮಾಡಬೇಕೆಂದೇ ತೋಚುತ್ತಿಲ್ಲ. ಏನಾದರೂ ಪರಿಹಾರ ಸೂಚಿಸಿ.
ವೈದ್ಯ: ನನಗೂ ಇದೇ ಸಮಸ್ಯೆ ಎದುರಾಗಿತ್ತು. ಕೊನೆಗೆ ನಾನು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಲ್ಲಿಗೆ ನನ್ನ ಮಗಳನ್ನು ಕರೆದುಕೊಂಡು ಹೋಗಿದ್ದೆ. ನೀವೂ ಹಾಗೆ ಮಾಡಿ.
ತಂದೆ: ಪ್ರಧಾನಿಯವರೇ, ನನ್ನ ಮಗಳ ಸಮಸ್ಯೆಗೆ ನೀವೇ ಪರಿಹಾರ ಸೂಚಿಸಬೇಕು.
ಪ್ರಧಾನಿ: ನೀವು ನಿಮ್ಮ ಮಗಳ ಹೆಸರನ್ನು 'ಮಹಂಗಾಯಿ' (ಬೆಲೆಯೇರಿಕೆ ಅಥವಾ ಹಣದುಬ್ಬರ) ಎಂದು ಮರು ನಾಮಕರಣ ಮಾಡಿ. ಖಂಡಿತಾ ಆಕೆ ಸಿಕ್ಕಾಪಟ್ಟೆ ಬೆಳೆಯುತ್ತಾಳೆ!
**
ರೈತ: ಸಾರ್, ನಾನು ಮಾರುಕಟ್ಟೆಗೆ ಹೋಗೋದಿದೆ, ರಕ್ಷಣೆ ಕೊಡಬೇಕು.