ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಮ್ಮ ಹಗರಣ ಹಳ್ಳಿ ಜನರಿಗೆ ಗೊತ್ತಿಲ್ಲ, ಹೆದರಬೇಡಿ: ರಾಹುಲ್ (Congress | Rahul Gandhi | Mayawati | 2G spectrum scam)
Bookmark and Share Feedback Print
 
ಕೇಂದ್ರ ಸರಕಾರದ ಮೇಲಿರುವ 2ಜಿ ತರಂಗಾಂತರ ಹಂಚಿಕೆ ಮುಂತಾದ ಹಗರಣಗಳು ಹಳ್ಳಿಯ ಜನರಿಗೆ ಹೆಚ್ಚು ತಿಳಿದಿಲ್ಲ. ಹಾಗಾಗಿ ಇದನ್ನು ಹಿನ್ನಡೆ ಎಂದು ಭಾವಿಸದೆ, ರಾಜ್ಯ ಸರಕಾರಗಳ ಹಗರಣಗಳನ್ನು ಮುಂದಿಟ್ಟು ಚುನಾವಣೆಗಳಲ್ಲಿ ಪಕ್ಷವನ್ನು ಗೆಲ್ಲಿಸಲು ಶ್ರಮಿಸಬೇಕು ಎಂದು ಕಾರ್ಯಕರ್ತರಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಕರೆ ನೀಡಿದ್ದಾರೆ.

ಬೆಲೆಯೇರಿಕೆ ಮತ್ತು ಹಗರಣಗಳ ಕುರಿತು ಉತ್ತರ ಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಕೆಲವು ನಾಯಕರು ಸಮನ್ವಯ ಸಮಿತಿ ಸಭೆಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯಿಸಿದ ರಾಹುಲ್, ನೀವು ಮಾಯಾವತಿ ಸರಕಾರದ ಹಗರಣಗಳು ಮತ್ತು ಅಭಿವೃದ್ಧಿ ಆಗದೇ ಇರುವ ವಿಚಾರಗಳನ್ನು ಜನರಿಗೆ ಮನದಟ್ಟಾಗುವ ರೀತಿಯಲ್ಲಿ ಮುಂದಿಡಬೇಕು ಎಂದು ಸಲಹೆ ನೀಡಿದರು.

2012ರ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಏನೇನು ಮಾಡಬಹುದು ಎಂಬುದರ ಕುರಿತು ಸಮಾಲೋಚನೆ ನಡೆಸಿದ ನಂತರ ಮಾತನಾಡುತ್ತಿದ್ದ ಅವರು, '2ಜಿ ತರಂಗಾಂತರ ಹಂಚಿಕೆ ಕುರಿತ ವಿವಾದವು ಹಳ್ಳಿಗಳಲ್ಲಿ ದೊಡ್ಡ ವಿಚಾರವಾಗಿ ಪರಿಣಮಿಸಿಲ್ಲ. ಬೆಲೆಯೇರಿಕೆ ವಿಚಾರದಲ್ಲಿ ಕೇವಲ ಕೇಂದ್ರ ಸರಕಾರವನ್ನು ಮಾತ್ರ ಹೊಣೆಗಾರನನ್ನಾಗಿ ಮಾಡಲು ಸಾಧ್ಯವಿಲ್ಲ. ರಾಜ್ಯ ಸರಕಾರಗಳು ಕೂಡ ಬೆಲೆಯೇರಿಕೆ ವಿಚಾರದಲ್ಲಿ ಅಷ್ಟೇ ಪಾಲು ಹೊಂದಿವೆ. ಹಾಗಾಗಿ ಕಾಂಗ್ರೆಸ್ ಕಾರ್ಯಕರ್ತರು ಅವೆರಡು ವಿಚಾರಗಳು ಹಿನ್ನಡೆ ಎಂದು ಭಾವಿಸಬೇಕಾಗಿಲ್ಲ' ಎಂದರು.

ಕಾಂಗ್ರೆಸ್ ಸಮನ್ವಯ ಸಮಿತಿ ಸಭೆಯಲ್ಲಿನ ಪ್ರಮುಖ ನಾಯಕರ ಪ್ರಕಾರ, 2ಜಿ ಹಗರಣವು ಮತದಾರರ ಮನಸ್ಸಿನಲ್ಲಿ ದೀರ್ಘ ಕಾಲ ಉಳಿಯದು. ಹಾಗಾಗಿ ಕೇಂದ್ರದ ಯೋಜನೆಗಳಲ್ಲಿ ರಾಜ್ಯ ಸರಕಾರವು ನಡೆಸಿರುವ ಭ್ರಷ್ಟಾಚಾರಗಳನ್ನು ಉತ್ತರ ಪ್ರದೇಶ ಕಾಂಗ್ರೆಸ್ ಬೆಟ್ಟು ಮಾಡಿ ತೋರಿಸಬೇಕು ಎಂದು ಅಭಿಪ್ರಾಯಪಟ್ಟರು.

2012ರ ಚುನಾವಣೆಯಲ್ಲಿ ಕಾಂಗ್ರೆಸ್ ಎಷ್ಟು ಸ್ಥಾನಗಳಲ್ಲಿ ಗೆಲ್ಲುತ್ತದೆ ಎನ್ನುವ ಅಂದಾಜು ಮಾಡುವುದನ್ನು ನಿಲ್ಲಿಸಿ. ಧನಾತ್ಮಕ ಚಿಂತನೆಯನ್ನು ರೂಢಿಸಿಕೊಳ್ಳಿ. ಕಠಿಣ ಶ್ರಮವಹಿಸಿ. ನಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಚುನಾವಣೆಗಳಲ್ಲಿ ಪಕ್ಷದ ಜಯವನ್ನು ಖಚಿತಪಡಿಸಿ ಎಂದು ರಾಹುಲ್ ನಮಗೆ ಸಲಹೆ ನೀಡಿದರು ಎಂದು ಮೊರಾದಾಬಾದ್ ಕಾಂಗ್ರೆಸ್ ಸಂಸದ ಅಜರುದ್ದೀನ್ ಪತ್ರಕರ್ತರಿಗೆ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ