ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಾರತದ ನಾಲ್ಕನೇ ಶ್ರೀಮಂತ ಮುಖ್ಯಮಂತ್ರಿ ಯಡಿಯೂರಪ್ಪ (Mayawati | Karnataka | BS Yeddyurappa | Narendra Modi)
Bookmark and Share Feedback Print
 
ಇದೇನೂ ಪಕ್ಕಾ ಲೆಕ್ಕವಲ್ಲ, ಸಾಕಷ್ಟು ಮುಚ್ಚಿಟ್ಟು ಉಳಿದ ಮೊತ್ತ ಎಂದಷ್ಟೇ ಪರಿಗಣಿಸಬಹುದು. ಅದರ ಪ್ರಕಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿಯವರೇ ದೇಶದ ನಂಬರ್ ವನ್ ಮುಖ್ಯಮಂತ್ರಿ- ಶ್ರೀಮಂತಿಕೆಯಲ್ಲಿ. ಇಲ್ಲಿ ಕರ್ನಾಟಕದ ಬಿ.ಎಸ್. ಯಡಿಯೂರಪ್ಪನವರದ್ದು ನಾಲ್ಕನೇ ಸ್ಧಾನ.

ತಾನು ದಲಿತರ ಬಂಧು, ಬಡವರ ಕಣ್ಣೀರು ಒರೆಸುವವಳು ಎಂದು ಹೇಳಿಕೊಳ್ಳುತ್ತಾ ಮೂರ್ತಿ ರಾಜಕಾರಣ ಮಾಡುತ್ತಿರುವ ಬಹುಜನ ಸಮಾಜ ಪಕ್ಷದ ವರಿಷ್ಠೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿಯವರ ಒಟ್ಟು ಆಸ್ತಿಯ ಮೌಲ್ಯ 86 ಕೋಟಿ ರೂಪಾಯಿಗಳು.

ಶಾಲಾ ಶಿಕ್ಷಕಿಯಾಗಿದ್ದ ಮಹಿಳೆಯೋರ್ವಳು ಇಂದು ಈ ಹಂತಕ್ಕೆ ಬೆಳೆದು ನಿಂತಿದ್ದಾರೆ. ಅವರು 15.5 ಕೋಟಿ ರೂಪಾಯಿ ಮೊತ್ತದ ಓಕ್ಲಾದಲ್ಲಿನ ವಾಣಿಜ್ಯ ಕೇಂದ್ರ ಮತ್ತು ಸರ್ದಾರ್ ಪಟೇಲ್ ಮಾರ್ಗ್‌ನಲ್ಲಿನ 54 ಕೋಟಿ ರೂಪಾಯಿ ಮೌಲ್ಯದ ನಿವೇಶನಗಳು ಸೇರಿದಂತೆ 75 ಕೋಟಿ ರೂಪಾಯಿಯ ಸ್ಥಿರಾಸ್ಥಿ ಹೊಂದಿದ್ದಾರೆ.

ವಜ್ರಾಭರಣ ಪ್ರಿಯೆಯಾಗಿರುವ ಮಾಯಾವತಿಯವರಲ್ಲಿ ಒಟ್ಟಾರೆ 90 ಲಕ್ಷ ರೂಪಾಯಿ ಮೊತ್ತದ ಆಭರಣಗಳಿವೆಯಂತೆ. ಇವಿಷ್ಟು ಲೆಕ್ಕಕ್ಕೆ ಸಿಕ್ಕಿರುವುದು. ಇದರ ನೂರಾರು ಪಟ್ಟು ಹೆಚ್ಚು ಆಸ್ತಿ ಅವರಲ್ಲಿರಬಹುದು ಎಂದು ಹೇಳಲಾಗುತ್ತಿದೆ.

ಮುಖ್ಯಮಂತ್ರಿರಾಜ್ಯಆಸ್ತಿ
ಮಾಯಾವತಿಉತ್ತರ ಪ್ರದೇಶ86 ಕೋಟಿ
ಪ್ರಕಾಶ್ ಸಿಂಗ್ ಬಾದಲ್ಪಂಜಾಬ್8.6 ಕೋಟಿ
ಕಿರಣ್ ಕುಮಾರ್ ರೆಡ್ಡಿಆಂಧ್ರಪ್ರದೇಶ8.1 ಕೋಟಿ
ಯಡಿಯೂರಪ್ಪಕರ್ನಾಟಕ5.38 ಕೋಟಿ
ನವೀನ್ ಪಟ್ನಾಯಕ್ಒರಿಸ್ಸಾ4.7 ಕೋಟಿ
ಭೂಪೀಂದರ್ ಸಿಂಗ್ಹರ್ಯಾಣ3.74 ಕೋಟಿ
ಒಮರ್ ಅಬ್ದುಲ್ಲಾಜಮ್ಮು-ಕಾಶ್ಮೀರ2 ಕೋಟಿ
ನರೇಂದ್ರ ಮೋದಿಗುಜರಾತ್1.78 ಕೋಟಿ
ಶೀಲಾ ದೀಕ್ಷಿತ್ದೆಹಲಿ1.3 ಕೋಟಿ
ರಮೇಶ್ ಪೋಖ್ರಿಯಾಲ್ಉತ್ತರಾಖಂಡ1.07 ಕೋಟಿ
ಬುದ್ಧದೇವ್ ಭಟ್ಟಾಚಾರ್ಯಪಶ್ಚಿಮ ಬಂಗಾಲ15.2 ಲಕ್ಷ


ಎರಡನೇ ಸ್ಥಾನದಲ್ಲಿರುವುದು ಪಂಜಾಪ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್. ಅವರ ಆಸ್ತಿ ಮೊತ್ತ 8.6 ಕೋಟಿ ರೂಪಾಯಿಗಳು. ಹಸಿರು ಕ್ರಾಂತಿಗೆ ಕಾರಣರಾಗಿರುವ ಇವರು ನಾಲ್ಕು ಕೋಟಿ ರೂಪಾಯಿ ಮೊತ್ತದ ಕೃಷಿ ಭೂಮಿ ಹೊಂದಿದ್ದಾರೆ. 2 ಕೋಟಿ ರೂಪಾಯಿ ಮೊತ್ತದ ಇತರ ಆಸ್ತಿ ಮತ್ತು 38 ಲಕ್ಷ ರೂಪಾಯಿಯ ಆಭರಣಗಳೂ ಇವರ ಹೆಸರಿನಲ್ಲಿವೆ.

ಕೆ. ರೋಸಯ್ಯ ರಾಜೀನಾಮೆ ನಂತರ ಆಂಧ್ರಪ್ರದೇಶ ಮುಖ್ಯಮಂತ್ರಿ ಸ್ಥಾನಕ್ಕೇರಿದ ಎನ್. ಕಿರಣ್ ಕುಮಾರ್ ರೆಡ್ಡಿಯವರದ್ದು ದೇಶದಲ್ಲೇ ಮೂರನೇ ಸ್ಥಾನ. 8.1 ಕೋಟಿ ರೂಪಾಯಿ ಆಸ್ತಿಯೊಂದಿಗೆ ಬಾದಲ್ ಅವರಿಗೆ ತೀರಾ ಪೈಪೋಟಿ ನೀಡುವ ಸ್ಥಾನದಲ್ಲಿ ಅವರಿದ್ದಾರೆ.

5 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ, 2.7 ಕೋಟಿ ರೂಪಾಯಿ ಮೊತ್ತದ ಬಂಜರಾ ಹಿಲ್ಸ್‌ನಲ್ಲಿರುವ ಭವ್ಯವಾದ ಬಂಗಲೆ, ಬೆಂಗಳೂರಿನಲ್ಲಿ 2 ಕೋಟಿ ಮೌಲ್ಯದ ನಿವೇಶನ ಹೊಂದಿರುವ ಇವರಲ್ಲಿ 15 ಲಕ್ಷ ರೂಪಾಯಿ ಮೌಲ್ಯದ ಮೂರು ಕಾರುಗಳಿವೆಯಂತೆ.

ಸಾಕಷ್ಟು ಹಗರಣಗಳಲ್ಲಿ ಮುಳುಗೆದ್ದಿರುವ ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರದ್ದು ದೇಶದಲ್ಲೇ ನಾಲ್ಕನೇ ಸ್ಥಾನ. ಆಸ್ತಿ-ಪಾಸ್ತಿಯ ವಾಸ್ತವ ಲೆಕ್ಕಾಚಾರ ಪೂರ್ತಿ ಸಿಕ್ಕರೆ ಯಡಿಯೂರಪ್ಪನವರ ಸ್ಥಾನ ಎಲ್ಲಿಗೆ ತಲುಪಬಹುದು ಎಂಬುದು ಪಕ್ಕಕ್ಕಿಟ್ಟು, ಅವರೇ ಘೋಷಿಸಿಕೊಂಡಿರುವುದನ್ನು ನೋಡಿದಾಗ ಸಿಕ್ಕಿರುವ ಅಂಕಿ-ಅಂಶವಿದು.

ಅವರು ಒಟ್ಟಾರೆ ಹೊಂದಿರುವ ಆಸ್ತಿ-ಪಾಸ್ತಿ 5.38 ಕೋಟಿ ರೂಪಾಯಿ ಮೌಲ್ಯದ್ದು. ಮೂರು ಕೋಟಿ ರೂಪಾಯಿ ಮೌಲ್ಯದ ಆಸ್ತಿ, 80 ಲಕ್ಷ ರೂಪಾಯಿಯ ಕೃಷಿ ಭೂಮಿ, 31.5 ಲಕ್ಷ ರೂಪಾಯಿಯ ಚಿನ್ನದ ಆಭರಣ, 15.9 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ, 7.6 ಲಕ್ಷ ರೂಪಾಯಿಯ ಗೃಹ ಬಳಕೆಯ ವಸ್ತುಗಳಷ್ಟೇ ನನ್ನಲ್ಲಿವೆ ಎಂದು ಯಡಿಯೂರಪ್ಪ ಹೇಳಿಕೊಂಡಿದ್ದಾರೆ.

ಅವರ ಬ್ಯಾಂಕ್ ಖಾತೆಯಲ್ಲಿರುವುದು ಕೇವಲ 21 ಲಕ್ಷ ಮತ್ತು ನಗದು ಹಣವಿರುವುದು ಬರೇ ಎರಡು ಲಕ್ಷ ರೂಪಾಯಿಗಳಂತೆ!

ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಲ್ಲಿರುವುದು 4.7 ಕೋಟಿ ರೂಪಾಯಿ ಮೊತ್ತದ ಆಸ್ತಿ-ಪಾಸ್ತಿ. ದೆಹಲಿ ಮತ್ತು ಭುವನೇಶ್ವರಗಳಲ್ಲಿ ಸುಮಾರು 3 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳು ಹಂಚಿ ಹೋಗಿದ್ದರೆ, 1.5 ಕೋಟಿಯ ಕೃಷಿ ಭೂಮಿ ಊರಲ್ಲೇ ಇದೆಯಂತೆ. ಇನ್ನೂ ಅವಿವಾಹಿತನಾಗಿರುವ ಅವರಲ್ಲಿರುವ ಆಭರಣ ಮೌಲ್ಯ 1.5 ಲಕ್ಷ ರೂಪಾಯಿ.

ಇನ್ನು ಹರ್ಯಾಣ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾರದ್ದು 3.74 ಕೋಟಿ ರೂಪಾಯಿ ಆಸ್ತಿ. ಇದರಲ್ಲಿ 1.8 ಕೋಟಿ ಮೊತ್ತದ ಸ್ಥಿರಾಸ್ತಿ, 65 ಲಕ್ಷ ರೂಪಾಯಿ ಚಿನ್ನ, 60 ಲಕ್ಷ ರೂಪಾಯಿ ಬೆಳ್ಳಿ, ರಿವಾಲ್ವರ್ ಮತ್ತು ರೈಫಲ್ ಸೇರಿದಂತೆ 1.94 ಕೋಟಿ ರೂಪಾಯಿ ಮೊತ್ತದ ಚರಾಸ್ತಿ ಕೂಡ ಸೇರಿವೆ.

ಸದಾ ವಿವಾದಗಳಲ್ಲೇ ಮುಳುಗಿರುವ ಮತ್ತೊಬ್ಬ ಮುಖ್ಯಮಂತ್ರಿ ಕಾಶ್ಮೀರದ ಒಮರ್ ಅಬ್ದುಲ್ಲಾ. ಇವರಲ್ಲಿರುವುದು ಕೇವಲ 2 ಕೋಟಿ ರೂಪಾಯಿ ಆಸ್ತಿಯಂತೆ. ಅದರಲ್ಲಿ ಹಿಮಾಚಲ ಪ್ರದೇಶ ಮತ್ತು ದೆಹಲಿಯಲ್ಲಿನ ನಿವೇಶನಗಳೂ ಸೇರಿವೆ. 40 ಲಕ್ಷ ರೂಪಾಯಿಯ ಆಭರಣ, ಒಂದು ಜೀಪು ಮುಂತಾದುವುಗಳಿವೆ.

ಅವಿವಾಹಿತ ದಕ್ಷ ಮುಖ್ಯಮಂತ್ರಿಯೆಂಬ ಹೆಸರು ಪಡೆದು ಕ್ರಾಂತಿಯನ್ನೇ ಮಾಡುತ್ತಿರುವ ಗುಜರಾತಿನ ನರೇಂದ್ರ ಮೋದಿಯವರದ್ದು ಎಂಟನೇ ಸ್ಥಾನ. ಮಿ. ಕ್ಲೀನ್ ಇಮೇಜನ್ನು ಹೊಂದಿರುವ ಮೋದಿಯಲ್ಲಿರುವುದು 1.78 ಕೋಟಿ ರೂಪಾಯಿ ಮೌಲ್ಯದ ಆಸ್ತಿ-ಪಾಸ್ತಿ.

ಅದರಲ್ಲಿ 1.65 ಕೋಟಿ ಮೌಲ್ಯದ ಒಂದು ನಿವೇಶನ, ಬ್ಯಾಂಕ್ ಖಾತೆಯಲ್ಲಿ ಎಂಟು ಲಕ್ಷ ರೂಪಾಯಿ ಮತ್ತು 3.4 ಲಕ್ಷ ರೂಪಾಯಿ ಠೇವಣಿ ಸೇರಿದೆ. 50 ಸಾವಿರ ರೂಪಾಯಿ ಮೌಲ್ಯದ ಚಿನ್ನದ ಉಂಗುರಗಳಷ್ಟೇ ಅವರಲ್ಲಿರುವ ಆಭರಣಗಳು!

ಹೊಸ ಲೆಕ್ಕಾಚಾರ ಮಾಪನವಿದು...
ಮೇಲಿನ ಸುದ್ದಿ ಸ್ವತಃ ಮುಖ್ಯಮಂತ್ರಿಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಮಾಹಿತಿ. ಅದೆಷ್ಟು ನಿಜವಿರುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವಂತದ್ದೇ. ಸಾಧ್ಯವಾದಷ್ಟು ಬೇನಾಮಿ ಹೆಸರುಗಳಲ್ಲಿ ರಾಜಕಾರಣಿಗಳು ಆಸ್ತಿ ಮಾಡುವುದು ಮಾಮೂಲಿ ಬಿಡಿ.

ಅಷ್ಟಕ್ಕೂ ಇಲ್ಲಿ ಎಲ್ಲಾ ಮುಖ್ಯಮಂತ್ರಿಗಳ ಅಂಕಿ-ಅಂಶಗಳಿಲ್ಲ. ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿಯವರ ಹೆಸರಿಲ್ಲದ ಪಟ್ಟಿ ಎಷ್ಟು ಅಪೂರ್ಣ, ಎಷ್ಟು ಅಭಾಸ? ಹೌದು ತಾನೇ?

ಬಿಡಿ, ಇವೆಲ್ಲದರ ನಡುವೆ ಹರಿದಾಡುತ್ತಿರುವ ಜೋಕೊಂದನ್ನು ನೋಡಿ. ಗಂಭೀರವಾಗಿ ಯೋಚನೆಗೆ ಹಚ್ಚುವ ತರಲೆ ಎಸ್ಎಂಎಸ್ ಇದು. ಓದಿಕೊಳ್ಳಿ.

100 ಕೋಟಿ = 1 ಯಡ್ಡಿ
100 ಯಡ್ಡಿ = 1 ರೆಡ್ಡಿ
100 ರೆಡ್ಡಿ = 1 ರಾಡಿಯಾ
100 ರಾಡಿಯಾ =1 ಕಲ್ಮಾಡಿ
100 ಕಲ್ಮಾಡಿ = 1 ಪವಾರ್
100 ಪವಾರ್ = 1 ರಾಜಾ
100 ರಾಜಾ = 1 ಸೋನಿಯಾ
ಸಂಬಂಧಿತ ಮಾಹಿತಿ ಹುಡುಕಿ