ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಜೆಪಿ ಯಾತ್ರೆಗೆ ತಡೆ; ಸುಷ್ಮಾ ಸೇರಿದಂತೆ 500 ಮಂದಿ ಸೆರೆ (BJP | Sushma Swaraj | Arun Jaitley | Ekta Yatra)
Bookmark and Share Feedback Print
 
ಪಂಜಾಬ್‌ನಿಂದ ಲಖಾಂಪುರ್ ಮೂಲಕ ಜಮ್ಮು-ಕಾಶ್ಮೀರ ಪ್ರವೇಶಿಸಿದ ಬಿಜೆಪಿಯ ಏಕತಾ ಯಾತ್ರೆಗೆ ಮತ್ತೊಮ್ಮೆ ತಡೆಯೊಡ್ಡಲಾಗಿದ್ದು, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಮತ್ತು ಅನಂತ್ ಕುಮಾರ್ ಸೇರಿದಂತೆ 500ಕ್ಕೂ ಹೆಚ್ಚು ನಾಯಕರು-ಕಾರ್ಯಕರ್ತರನ್ನು ಬಂಧಿಸಲಾಗಿದೆ.

ನಿನ್ನೆ ಜಮ್ಮು ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿ ಪಂಜಾಬ್‌ನಲ್ಲಿ ಒಗೆಯಲ್ಪಟ್ಟಿದ್ದ ಬಿಜೆಪಿ ನಾಯಕರು, ಅಲ್ಲಿಂದ ಭಾರೀ ಸಂಖ್ಯೆಯ ಕಾರ್ಯಕರ್ತರೊಂದಿಗೆ ಲಖಾಂಪುರ್ ಮೂಲಕ ಜಮ್ಮು ಪ್ರವೇಶಿಸಿದ್ದರು. ಸುಮಾರು ನಾಲ್ಕು ಗಂಟೆಗಳ ಕಾಲ ಸಾಗಿದ ಈ ಮೆರವಣಿಗೆಯು, ಎರಡು ರಾಜ್ಯಗಳ ನಡುವಿನ ಗಡಿ ಸೇತುವೆಯ ಮೇಲೆ ಆಮೆ ನಡಿಗೆಯಲ್ಲಿ ಸಾಗಿದ ನಂತರ ಬಂಧನಕ್ಕೊಳಗಾಯಿತು.

ಜಮ್ಮು ಪ್ರವೇಶಿಸಿದರೂ ಶ್ರೀನಗರಕ್ಕೆ ತೆರಳಲು ಅವಕಾಶ ನೀಡದ ಪೊಲೀಸರು, ನಾಯಕರನ್ನು ಬಂಧಿಸಿ ಅಲ್ಲಿಂದಲೇ ಬಸ್ಸುಗಳಲ್ಲಿ ಸಾಗ ಹಾಕಿದರು. ಆದರೂ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ. ನಾಳೆಯ ದಿನ (ಜನವರಿ 26, ಗಣರಾಜ್ಯೋತ್ಸವ) ಶ್ರೀನಗರದ ಲಾಲ್‌ಚೌಕ್‌ನಲ್ಲಿ ರಾಷ್ಟ್ರಧ್ವಜ ಹಾರಿಸಿಯೇ ಸಿದ್ಧ ಎಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದಾರೆ.

ಯಾತ್ರೆಯುದ್ದಕ್ಕೂ ಸುಷ್ಮಾ ಸ್ವರಾಜ್ ಟ್ವಿಟ್ಟರ್ ಮೂಲಕ ಸಂದೇಶ ರವಾನಿಸುತ್ತಿದ್ದರು.

ಸುಮಾರು 500 ಕಾರ್ಯಕರ್ತರ ಜತೆ ನಾವು ತಿರಂಗ ಹಿಡಿದುಕೊಂಡು ಜಮ್ಮು ಕಾಶ್ಮೀರದತ್ತ ಸಾಗುತ್ತಿದ್ದೇವೆ, ನಾವು ಜಮ್ಮು-ಕಾಶ್ಮೀರ ಪ್ರವೇಶಿಸುವ ಸೇತುವೆಯ ಬಳಿ ಬಂದಿದ್ದೇವೆ. ಈಗ ಸೇತುವೆಯಲ್ಲಿದ್ದೇವೆ. ಭಾರತ್ ಮಾತಾ ಕೀ ಜೈ. ವಂದೇ ಮಾತರಂ. ನಾವು ಸೇತುವೆಯನ್ನು ದಾಟಿ ಜಮ್ಮು ಪ್ರವೇಶಿಸಿದ್ದೇವೆ. ಆದರೆ ನಮ್ಮನ್ನು ತಡೆಯಲಾಗಿದೆ. ವಂದೇ ಮಾತರಂ -- ಇದು ಸುಷ್ಮಾ ಮಾಡಿರುವ ಟ್ವೀಟ್ ತುಣುಕುಗಳು.

ಬಿಜೆಪಿ ಯಾತ್ರೆ ಹಿನ್ನೆಲೆಯಲ್ಲಿ ಭಾರೀ ಪೊಲೀಸರನ್ನು ನಿಯೋಜಿಸಿದ್ದ ಜಮ್ಮು-ಕಾಶ್ಮೀರ ರಾಜ್ಯ ಸರಕಾರವು, ಈ ಪ್ರದೇಶದಲ್ಲಿ ಸೆಕ್ಷನ್ 144 ಹೇರಿತ್ತು. ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಇದನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಬಂಧಿಸಲಾಯಿತು.

ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹೊಣೆ ಹೊತ್ತಿರುವ ರಾಜ್ಯದ ಪೊಲೀಸ್ ಮಹಾ ನಿರ್ದೇಶಕರು, ಬಿಜೆಪಿ ನಾಯಕರಿದ್ದ ಬಸ್ಸನ್ನೇರಿ, ತಾವು ಬಿಜೆಪಿ ನಾಯಕರು ಸೇರಿದಂತೆ ಕಾರ್ಯಕರ್ತರನ್ನು ಬಂಧಿಸುತ್ತಿದ್ದೇವೆ ಎಂದು ಪ್ರಕಟಿಸಿದ ನಂತರ ಎಲ್ಲರನ್ನೂ ಬಂಧಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸುಷ್ಮಾ ಸ್ವರಾಜ್, ನಾವು ಈಗ ಬಂಧನಕ್ಕೊಳಗಾಗಿದ್ದೇವೆ. ಆದರೆ ನಮ್ಮ ಯಾತ್ರೆ ಕೊನೆಗೊಂಡಿಲ್ಲ. ನಾಳೆ ನಾವು ಲಾಲ್‌ಚೌಕ್‌ನಲ್ಲಿ ಧ್ವಜಾರೋಹಣ ಮಾಡಿಯೇ ಸಿದ್ಧ ಎಂದು ಘೋಷಿಸಿದರು.
ಸಂಬಂಧಿತ ಮಾಹಿತಿ ಹುಡುಕಿ