ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆದರ್ಶ ಹಗರಣ; ಮುಂಬೈ, ಬಿಹಾರದಲ್ಲಿ ಸಿಬಿಐ ದಾಳಿ (CBI | Adarsh scam | Congress | Bihar | Ashok Chavan | Maharashtra)
ಆದರ್ಶ ನಿವೇಶನ ಹಗರಣಕ್ಕೆ ಸಂಬಂಧಿಸಿ ಕೆಲವು ನಿವೃತ್ತ ಸೇನಾ ಅಧಿಕಾರಿಗಳು ಹಾಗೂ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರ ಮೇಲೆ ಸಿಬಿಐ ಕೇಸು ದಾಖಲಿಸಿದ ಬೆನ್ನಲ್ಲೇ, ಭಾನುವಾರ ಪ್ರಮುಖ ಆರೋಪಿಗಳಿಗೆ ಸೇರಿದ ನಿವಾಸಗಳು ಹಾಗೂ ಕಚೇರಿಯ ಮೇಲೆ ಸಿಬಿಐ ದಾಳಿ ನಡೆಸಿದೆ.

ಮುಂಬೈನಲ್ಲಿಯ ಆದರ್ಶ ಸೊಸೈಟಿ ಹಗರಣದ ಕುರಿತು ಎಫ್ಐಆರ್‌ನಲ್ಲಿ ದಾಖಲಿಸಲಾಗಿದ್ದ ಪ್ರಮುಖ ಆರೋಪಿಗಳಾದ ನಿವೃತ್ತ ಮಿಲಿಟರಿ ಅಧಿಕಾರಿ, ಕಾಂಗ್ರೆಸ್ ಮುಖಂಡ ಸೇರಿದಂತೆ ಮೂರು ಪ್ರಮುಖರ ಮನೆ ಮೇಲೆ ದಾಳಿ ನಡೆಸಿದೆ. ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಆರ್.ಸಿ.ಠಾಕೂರ್, ನಿವೃತ್ತ ಬ್ರಿಗೇಡಿಯರ್ ಎಂ.ಎಂ.ವಾಂಚೂ ಮತ್ತು ಕಾಂಗ್ರೆಸ್ ಮುಖಂಡ ಕೆ.ಎಲ್.ಗಿಡ್ವಾನಿ ಅವರಿಗೆ ಮಹಾರಾಷ್ಟ್ರ ಮತ್ತು ಬಿಹಾರದಲ್ಲಿ ಇರುವ ಆಸ್ತಿ-ಪಾಸ್ತಿಗಳ ಮೇಲೆ ದಾಳಿ ನಡೆಸಿರುವುದಾಗಿ ಸಿಬಿಐ ಮೂಲಗಳು ತಿಳಿಸಿವೆ.

ಮುಂಬೈ ಆದರ್ಶ ಸೊಸೈಟಿ ಹಗರಣದಲ್ಲಿ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಅಶೋಕ್ ಚೌಹಾಣ್ ಸೇರಿದಂತೆ 13 ಮಂದಿ ವಿರುದ್ಧ ಶನಿವಾರ ಸಿಬಿಐ ಎಫ್ಐಆರ್ ದಾಖಲಿಸಿತ್ತು.

ಕಾರ್ಗಿಲ್ ಯುದ್ಧದ ವೀರರಿಗೆ ಹಾಗೂ ಮಡಿದ ಸೇನಾ ಸಿಬ್ಬಂದಿಯ ವಿಧವಾ ಪತ್ನಿಯರ ವಾಸಕ್ಕಾಗಿ ಕಟ್ಟಲಾಗಿದ್ದ ಈ ಆದರ್ಶ ಸೊಸೈಟಿಯ ಕಟ್ಟಡದಲ್ಲಿ ಶೇ.40ರಷ್ಟು ಪ್ಲ್ಯಾಟುಗಳನ್ನು ನಾಗರಿಕರಿಗೆ ನೀಡಲಾಗಿತ್ತು. ಈ ರೀತಿಯಲ್ಲಿ ತಮ್ಮ ಸಂಬಂಧಿಕರು ಪ್ಲ್ಯಾಟ್ ಪಡೆದ ಹಿನ್ನೆಲೆಯಲ್ಲಿ ಅಂದಿನ ಮುಖ್ಯಮಂತ್ರಿ ಅಶೋಕ್ ಚವಾಣ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅಷ್ಟೇ ಅಲ್ಲ ಈ ಹಗರಣದಲ್ಲಿ ಹಲವು ಘಟಾನುಘಟಿಗಳು ಕೂಡ ಶಾಮೀಲಾಗಿದ್ದಾರೆ.
ಸಂಬಂಧಿತ ಲೇಖನಗಳು