ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸರಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಸಂಪೂರ್ಣ ಉಚಿತ (Free deliveries | IAP | NRHM | Health Ministery | Ghulam Nabi Azad)
ಸರಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಸಂಪೂರ್ಣ ಉಚಿತ
ನವದೆಹಲಿ, ಬುಧವಾರ, 2 ಫೆಬ್ರವರಿ 2011( 15:21 IST )
PR
PR
ನವ ದಂಪತಿಗಳಿಗೆ ಸಿಹಿಸುದ್ದಿ! ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ನು ಮುಂದೆ ಹೆರಿಗೆ ಸೇವೆ ಸಂಪೂರ್ಣ ಉಚಿತ ಎಂದು ಸರಕಾರ ಘೋಷಿಸಿದೆ.
ಅಂತಾರಾಷ್ಟ್ರೀಯ ಸಲಹಾ ಸಮಿತಿಯ (ಐಎಪಿ) ಎಂಟನೇ ಸಭೆಯಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಪುನರ್‌ಪರಿಶೀಲನಾ ಕಾರ್ಯ ನಡೆಯಿತು. ಆರೋಗ್ಯ ಸಚಿವ ಗುಲಾಂ ನಭಿ ಆಜಾದ್ ಅವರು ಈ ವಿಷಯವನ್ನು ಪ್ರಕಟಿಸುತ್ತಾ, ಹೆರಿಗೆ ಪೂರ್ವ ಸೇವೆ ಮತ್ತು ಹೆರಿಗೆ ಸೌಲಭ್ಯಗಳನ್ನು ಸಂಪೂರ್ಣ ಉಚಿತವಾಗಿ ಒದಗಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.
ಹೆರಿಗೆ ಸಂದರ್ಭದಲ್ಲಿ ಗರ್ಭಿಣಿ ಮತ್ತು ಮಕ್ಕಳ ಸಾವನ್ನು ತಪ್ಪಿಸುವ ನಿಟ್ಟಿನಲ್ಲಿ, ಗರ್ಭಿಣಿಯರ ಸಾವಿನ ಪ್ರಕರಣಗಳ ಮರುಪರಿಶೀಲನೆ ಮತ್ತು ರೋಗನಿರೋಧಕ ಔಷಧಿ ನೀಡಲಾದ ಪ್ರತೀ ಗರ್ಭಿಣಿ ಮತ್ತು ಮಕ್ಕಳನ್ನು ಹೆಸರಿನ ಆಧಾರದಲ್ಲಿ ಗುರುತಿಸುವ ಎರಡು ಮಹತ್ವದ ವ್ಯವಸ್ಥೆಗಳನ್ನೂ ಆರಂಭಿಸಲಾಗಿದೆ ಎಂದು ಆಜಾದ್ ಹೇಳಿದರು.
ಹೆಸರು ಗುರುತಿಸುವ ವ್ಯವಸ್ಥೆಯಡಿ, ಗರ್ಭಿಣಿ ಮಹಿಳೆಯರ ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಒಳಗೊಂಡ ಸಂಪೂರ್ಣ ಮಾಹಿತಿಯನ್ನು ದಾಖಲಿಸಿಕೊಳ್ಳುವ ವ್ಯವಸ್ಥೆ ಇದ್ದು, ಹೆರಿಗೆ ಪೂರ್ವದ, ಹೆರಿಗೆ ಸಂದರ್ಭದ ಮತ್ತು ಹೆರಿಗೆ ನಂತರದ ಆರೋಗ್ಯ ಸೇವೆಯ ಕುರಿತಾಗಿ ಅವರನ್ನು ನಂತರ ಸಂಪರ್ಕಿಸಬಹುದು ಮತ್ತು ಮೇಲ್ವಿಚಾರಣೆಯನ್ನೂ ಮಾಡಬಹುದಾಗಿದೆ.